ಬೆಂಗಳೂರು: ದರ ಏರಿಕೆ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಯವರು ರೈತರ ವಿರೋಧಿಗಳು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ವಿದ್ಯುತ್ ಬೆಲೆ ಕಡಿಮೆ ಮಾಡಿದ್ದೇವೆ. ಅದರ ಬಗ್ಗೆ ಮಾತಾಡ್ತಿಲ್ಲ ಬಿಜೆಪಿಯವರು. ಬಿಜೆಪಿ ರೈತರ ವಿರೋಧಿ. ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲೇ ಕಡಿಮೆ ಇದೆ. ಇನ್ನೂ ಕಡಿಮೆ ಇದೆ. ಇವತ್ತು ನೀರಿನ ಬೆಲೆ ವಿಧಿ ಇಲ್ಲದೆ ಹೆಚ್ಚಿಗೆ ಮಾಡುವ ಅನಿವಾರ್ಯತೆ ಇದೆ. ತುಂಬಾ ಹೆಚ್ಚು ಮಾಡಲು ಕೂಡ ಆಗೋದಿಲ್ಲ. ಬಡವರಿಗೆ ಸಮಸ್ಯೆ ಆಗುತ್ತೆ. ಬೋರ್ಡ್ ತೀರ್ಮಾನ ತೆಗೆದುಕೊಳ್ಳುವುದಕ್ಕೆ ತಿಳಿಸಿದ್ದೇನೆ. ಒಂದು ಸಾವಿರ ಕೋಟಿ ರೂಪಾಯಿ ನೀರಿನಿಂದ ಲಾಸ್ ಆಗ್ತಿದೆ. ಮುಂದಿನ ಫೇಸ್‌ಗೆ ಅನುಕೂಲವಾಗಲು ನಾವು ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ ದುನಿಯಾ ದುಬಾರಿ – ಹಾಲು, ಮೊಸರು ದುಬಾರಿ.. ಕಸಕ್ಕೂ ಕಾಸು, ಯಾವುದಕ್ಕೆ ಎಷ್ಟು ದರ ಹೆಚ್ಚಳ?
ಕಸದ ವಿಚಾರವಾಗಿ ನಾವು ದರ ಏರಿಕೆ ಮಾಡಿಲ್ಲ. ಅವರೇ ಮಾಡಿದ್ದ ಕಾನೂನು. ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಸೂಚನೆ ಕೊಟ್ಟಿದೆ. 2022 ರಲ್ಲಿ ಬಿಜೆಪಿಯವರು ಇದನ್ನು ಚಾಲ್ತಿಗೆ ತಂದಿದ್ದರು. ಅವರು ದರ ಏರಿಕೆ ಮಾಡಿರೋಕ್ಕಿಂತ ನಾನು ಕಡಿಮೆ ಮಾಡಿದ್ದೇನೆ. ನಮಗೂ ಜನರ ನೋವು-ನಲಿವು ಅರ್ಥವಾಗುತ್ತೆ. ಅವರು ರಾಜಕಾರಣ ಮಾಡಬೇಕು ಮಾಡುತ್ತಿದ್ದಾರೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
ಸರ್ಕಾರ ಹಾಗೂ ದರ ಏರಿಕೆ ವಿರುದ್ಧ ಕುಮಾರಸ್ವಾಮಿ ಟ್ವೀಟ್ ವಿಚಾರ ಅವರದು ಏನೇನಿದೆ ಅಂತ ದಿನ ಮಾಡಲಿ ಬೇಕಾದರೆ. ನಾವು ಜನರಿಗೆ ಒಳ್ಳೆ ಆಡಳಿತ ಕೊಡಬೇಕು. ಸ್ಥಳೀಯ ಸಂಸ್ಥೆಗಳು ನಡೆಯಬೇಕಲ್ವಾ? ಸಂಬಳ ಕೊಟ್ಟಿಲ್ಲ ಅಂದರೆ ಸಂಬಳ ಕೊಟ್ಟಿಲ್ಲ ಅಂತಾರೆ. ಹಾಲಿನ ಯೂನಿಯನ್ ಅಧ್ಯಕ್ಷರೇ ಕುಮಾರಸ್ವಾಮಿ ಅವರ ಸಹೋದರರು ಅಲ್ವ. ಅವರ ಕೈಲಾಗುವಂತಿದ್ದರೆ ನಾಲ್ಕು ರೂಪಾಯಿ ಕಡಿಮೆ ಕೊಡುವಂತೆ ಹೇಳಿ. ರೈತರಿಗೆ ಅನುಕೂಲ ಮಾಡಲು ಅನಿವಾರ್ಯದಿಂದ ಏರಿಕೆ ಮಾಡಲಾಗಿದೆ. ನಾವು ಹಣವನ್ನು ಪಡೆದು ಸರ್ಕಾರ ಉಪಯೋಗಿಸುತ್ತಿಲ್ಲ. ರೈತರಿಗೆ ಅನುಕೂಲ ಮಾಡಬೇಕು ಎಂಬುದು ನಮ್ಮ ನಿರ್ಧಾರ ಎಂದಿದ್ದಾರೆ. ಇದನ್ನೂ ಓದಿ: ಇಂದಿನಿಂದ ಹಾಲಿನ ದರ ಏರಿಕೆ – ಬೆಳಗ್ಗೆ ಸಪ್ಲೈ ಆದ ಹಾಲಿನಲ್ಲಿ ಪರಿಷ್ಕೃತ ದರ ಜಾರಿ ಆಗಿಲ್ಲ