ಬಾಗಲಕೋಟೆ: INDIA ಸಂಘಟನೆಯಿಂದ ರಾಜ್ಯದಲ್ಲಿ ಬಿಜೆಪಿ (BJP) ಹೆದರಿದೆ, ಎರಡು ಮಾತಿಲ್ಲ. ನಾನು ಸಹ ಮೊದಮೊದಲು ಮೋದಿಯವರನ್ನು (Narendra Modi) ಅಭಿಮಾನಿಸುತ್ತಿದ್ದೆ. ಇಂದು ಮೋದಿಯವರು ಕೆಳಗಿಳಿಯುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H.Vishwanath) ತಮ್ಮ ಪಕ್ಷದ ವಿರುದ್ಧವೇ ಹೇಳಿಕೆ ನೀಡಿದ್ದಾರೆ.
INDIA ಸಂಘಟನೆಯಿಂದ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ (JDS) ಮೈತ್ರಿ ಆಯ್ತಾ ಎಂಬ ಮಾಧ್ಯಮದವರ ಪ್ರಶ್ನೆಗೆ ಬಾಗಲಕೋಟೆಯಲ್ಲಿ (Bagalkote) ಅವರು ಪ್ರತಿಕ್ರಿಯಿಸಿದರು. ಬಿಜೆಪಿಯವರು ಎಲ್ಲಿಯಾದರೂ ಈ ದೇಶದ ಜನರ ಅಕ್ಷರ, ಆರೋಗ್ಯ, ಅನ್ನ, ನಮ್ಮ ಉದ್ಯೋಗದ ಬಗ್ಗೆ ಏನಾದರೂ ಮಾತನಾಡಿದ್ದಾರಾ? ಏನೂ ಮಾತನಾಡುತ್ತಿಲ್ಲ. ಬಿಜೆಪಿಯವರು ಭೂತ ಕಾಲದಲ್ಲಿದ್ದಾರೆ ಎಂದು ಬಿಜೆಪಿ ಪಕ್ಷವನ್ನು ಲೇವಡಿ ಮಾಡಿದರು. ಇದನ್ನೂ ಓದಿ: G20 Summit: ವಿಶ್ವ ನಾಯಕರಿಂದ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ
Advertisement
Advertisement
1,200 ವರ್ಷಗಳ ಹಿಂದೆ ಇಲ್ಲಿ ರಾಮ ಇದ್ದ ಎನ್ನುವುದು ಯಾರಿಗೆ ಬೇಕು? ರಾಮ ಬೇಕು ನಿಜ. ಆದರೆ ಭೂತಕಾಲದ ಚರ್ಚೆ ಬಿಟ್ಟು ವರ್ತಮಾನಕ್ಕೆ ಬನ್ನಿ. ವರ್ತಮಾನಕ್ಕೆ ಬಂದು ಚರ್ಚೆ ಮಾಡಿ ಭವಿಷ್ಯವನ್ನು ಕಟ್ಟುವುದಾಗಬೇಕೆ ಹೊರತು, ಬರೀ ನೀವು ಭೂತಕಾಲದಲ್ಲೇ ಓಡಾಡುತ್ತಿದ್ದರೆ ಏನಾಗುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬೆಂಗ್ಳೂರು ಬಂದ್‌ಗೆ ಕರೆ; ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ: ಶಿಕ್ಷಣ ಇಲಾಖೆ
Advertisement
ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನ ದೇವರಾಜ ಅರಸು (D. Devaraj Urs) ಜೊತೆ ಹೋಲಿಕೆ ಮಾಡಿಕೊಳ್ಳುತ್ತಾರೆ ಎಂಬ ಬಿಕೆ ಹರಿಪ್ರಸಾದ್ (B.K.Hariprasad) ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹರಿಪ್ರಸಾದ್ ಕಾಮೆಂಟನ್ನು ನಾವು ಯಾರು ಒಪ್ಪಿಕೊಳ್ಳುವುದಿಲ್ಲ. ದೇವರಾಜ ಅರಸು ಕಾರಲ್ಲಿ ಕೂತುಕೊಂಡರೆ ಏನು? ದೇವರಾಜ ಅರಸು ಅವರದ್ದು ಸರ್ಕಾರಿ ಕಾರು. ಸರ್ಕಾರ ಕೊಟ್ಟ ಕಾರನ್ನು ದೇವರಾಜ ಅರಸು ಅವರು ಮತ್ತೆ ಸರ್ಕಾರಕ್ಕೆ ವಾಪಸ್ ಕೊಟ್ಟರು. ಅದರಲ್ಲಿ ಸರ್ಕಾರದ ಮುಖ್ಯಮಂತ್ರಿ ಕೂರುವುದರಲ್ಲಿ ತಪ್ಪೇನಿದೆ ಎಂದರು. ಇದನ್ನೂ ಓದಿ: ಹುಡ್ಗಿ ಚೆನ್ನಾಗಿದ್ದರೆ ಎಲ್ಲರೂ ಇಷ್ಟಪಡ್ತಾರೆ, ಹಾಗೇ ಬಿಜೆಪಿ ಕೂಡ ಬರ್ತಾ ಇದೆ: ಸಿ.ಎಂ ಇಬ್ರಾಹಿಂ
Advertisement
ನಾನು ಸಂಗೊಳ್ಳಿ ರಾಯಣ್ಣ ಅವರನ್ನು ಆರಾಧನೆ ಮಾಡುತ್ತೇನೆ. ಹಾಗಂತ ನಾನು ಸಂಗೊಳ್ಳಿ ರಾಯಣ್ಣ ಆಗೋದಕ್ಕೆ ಆಗುತ್ತಾ? ಸಿದ್ದರಾಮಯ್ಯ ಸಹ ದೇವರಾಜ ಅರಸು ಅವರನ್ನು ಆರಾಧನೆ ಮಾಡುತ್ತಾರೆ. ಅದನ್ನು ಬಿಟ್ಟರೆ ನಾನೇ ದೇವರಾಜ ಅರಸು ಅಂತ ಎಲ್ಲಿ ಹೇಳಿದ್ದಾರೆ? ಇದೆಲ್ಲಾ ಅನವಶ್ಯಕ. ಹರಿಪ್ರಸಾದ್ ಅವರಿಗೆ ನಾನು ವಿನಂತಿ ಮಾಡುತ್ತೇನೆ. ನಿಜ ನಿಮ್ಮನ್ನು ಮಂತ್ರಿ ಮಾಡಬೇಕಿತ್ತು ಅನ್ನುತ್ತೀರಿ. ಆದರೆ ಅದು ನಮಗೆ ಸಂಬಂಧವಿಲ್ಲ. ಇಂದು ಈಡಿಗ ಸಮಾಜಕ್ಕೆ ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಾತಿನಿಧ್ಯ ಕೊಟ್ಟಿದ್ದಾರೆ. ಬಂಗಾರಪ್ಪ ಅವರ ಮಗನೇ ಶಿಕ್ಷಣ ಮಂತ್ರಿಯಾಗಿದ್ದಾನೆ. ಹಾಗಾಗಿ ಕೊಟ್ಟೇ ಇಲ್ಲ ಅಂತಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾಳೆ ಬೆಂಗಳೂರು ಬಂದ್; 500 ಹೆಚ್ಚುವರಿ ಬಸ್ ರಸ್ತೆಗಿಳಿಸಲು ಬಿಎಂಟಿಸಿ ನಿರ್ಧಾರ
ನಿಮ್ಮ ಧ್ವನಿ ಯಾವ ತರಹ ಹೋಗುತ್ತಿದೆ ಅಂದರೆ ನಮ್ಮ ಸಮುದಾಯಕ್ಕೆ ಸಂಪುಟದಲ್ಲಿ ಆಧ್ಯತೆ ಕೊಟ್ಟಿಲ್ಲ ಅಂತ ಹೋಗ್ತಿದೆ. ಕಾಂಗ್ರೆಸ್ ಈಡಿಗ ಸಮುದಾಯಕ್ಕೆ ಕೊಟ್ಟಷ್ಟು ಪ್ರಾತಿನಿಧ್ಯ ಯಾವ ಪಕ್ಷವೂ ಕೊಟ್ಟಿಲ್ಲ. ಬಂಗಾರಪ್ಪ ಸಿಎಂ ಆಗಿದ್ದರು. ಹಿಂದೆ ಯಾವುದೇ ಸಂಪುಟವಿರಲಿ, ಮೂರು-ನಾಲ್ಕು ಜನ ಮಂತ್ರಿ ಇರುತ್ತಿದ್ದರು. ಕಾಗೋಡು ತಿಮ್ಮಪ್ಪ ಸ್ಪೀಕರ್ ಆಗಿದ್ದರು, ಮಂತ್ರಿಯೂ ಆಗಿದ್ದರು. ಹೌದು ದೇವರಾಜ ಅರಸು ಅವರ ಒಂದು ಕಾಲವಿತ್ತು. ಆ ಕಾಲ ವಾಪಸ್ ಬರಲ್ಲ. ನಾವು ಅದನ್ನೇ ಹೇಳುತ್ತಾ ಕೂತರೆ ಆಗಲ್ಲ. ಸೂಕ್ಷ್ಮಾತಿಸೂಕ್ಷ್ಮ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಕೊಡಬೇಕು. ಅದಕ್ಕೆ ತಾನೇ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ. ನಾನು 40 ವರ್ಷ ಕಾಂಗ್ರೆಸ್‌ನಲ್ಲಿದ್ದು, ಜೆಡಿಎಸ್‌ಗೆ ಹೋಗಿ, ಬಿಜೆಪಿ ಹೋಗಿ ಬಂದಿದ್ದೇನೆ. ಇದಕ್ಕೆ ಹಲವಾರು ಕಾರಣಗಳಿವೆ. ಇದು ನನ್ನ ಪೊಲಿಟಿಕಲ್ ಜರ್ನಿ ಎಂದರು. ಇದನ್ನೂ ಓದಿ: ಕೂಡ್ಲಿಗಿ ಶಾಸಕನಾಗಿದ್ದಾಗ ದೇಹ ಬಿಜೆಪಿಯಲ್ಲಿದ್ರೂ, ನನ್ನ ಹೃದಯ ಕಾಂಗ್ರೆಸ್‌ನಲ್ಲಿತ್ತು: ಎನ್‌ವೈ ಗೋಪಾಲಕೃಷ್ಣ
Web Stories