ರಾಯಚೂರು: ಬಿಜೆಪಿ (BJP) ಅಧಿಕಾರಕ್ಕೆ ಬಂದಾಗಿನಿಂದ ಸಾಮಾನ್ಯ ಜನರ ಬದುಕು ಮೂರಾಬಟ್ಟೆಯಾಗಿದೆ. ಬಿಜೆಪಿ ಸುಳ್ಳಿನ ಫ್ಯಾಕ್ಟರಿ, ಮೋದಿ (Narendra Modi) ಒಳ್ಳೆಯ ನಾಟಕವಾಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆ (Bharat Jodo Yatra) ಹಿನ್ನೆಲೆ ರಾಯಚೂರಿನಲ್ಲಿ (Raichur) ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅಚ್ಚೇ ದಿನ್ ಅಂದ್ರು, ಎಲ್ಲಿದೆ ಅಚ್ಚೆ ದಿನ್ ಎಲ್ಲಾ ಬೆಲೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ರಾಜ್ಯದಲ್ಲಿ 2ನೇ ಸರ್ಕಾರಿ ಗೋ ಶಾಲೆ ಉದ್ಘಾಟಿಸಿದ ಬಿ.ಸಿ ನಾಗೇಶ್
ರಾಹುಲ್ ಗಾಂಧಿ ಒಬ್ಬರೇ ಪಾದಯಾತ್ರೆ ಬಗ್ಗೆ ರಾಜಕೀಯವಾಗಿ ತೀರ್ಮಾನ ಮಾಡಿಲ್ಲ. ಉದಯಪುರದಲ್ಲಿ ಎಐಸಿಸಿ ಚಿಂತನ ಮಂಥನ ಸಭೆಯಲ್ಲಿ ಪಾದಯಾತ್ರೆ ಬಗ್ಗೆ ತೀರ್ಮಾನ ಮಾಡಲಾಯಿತು ಎಂದು ತಿಳಿಸಿದರು. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ RSS ಕೈಗೊಂಬೆ- ಸಿದ್ದರಾಮಯ್ಯ ವಾಗ್ದಾಳಿ
ರಾಯಚೂರಿಗೆ ರಾಹುಲ್ ಗಾಂಧಿ ಅಕ್ಟೋಬರ್ 21, 22ಕ್ಕೆ ಪಾದಯಾತ್ರೆಗೆ ಬರಲಿದ್ದಾರೆ. ಪಾದಯಾತ್ರೆಯಲ್ಲಿ ಪಕ್ಷದ ಎಲ್ಲಾ ಮುಖಂಡರು ಒಗ್ಗಟ್ಟಿನಿಂದ ಭಾಗವಹಿಸುತ್ತಿದ್ದೇವೆ. ಜೋಡೋ ಯಾತ್ರೆ ಹಿನ್ನೆಲೆ ಹೆಚ್ಚು ಜನ ಸಾರ್ವಜನಿಕ ಸಭೆ ಹಾಗೂ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಸಿದ್ದರಾಮಯ್ಯ ಕಾರ್ಯಕರ್ತರಲ್ಲಿ ಕೇಳಿಕೊಂಡರು.