ಬೆಂಗಳೂರು: PSI ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಬಿಜೆಪಿ ಅವರೇ ಇದ್ದಾರೆ. ಆದರೂ ಗಿಳಿಪಾಠ ಹೇಳಲು ಶುರು ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಎಸ್‌ಐ ಹಗರಣದಲ್ಲಿ ಕಾಂಗ್ರೆಸ್‌ನವರು ದಾಖಲೆಗಳಿಲ್ಲದೆ ಆರೋಪ ಮಾಡುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಸಚಿವರು, ನಾಯಕರು ಮಾತಾಡಿರೋದು, ಟ್ವೀಟ್ ಮಾಡಿರೋದನ್ನೂ ನೋಡಿದ್ದೇನೆ. ಇದು ಬಿಜೆಪಿಯ ಎಡಬಿಡಂಗಿ ತನ ತೋರುತ್ತದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಸುವುದು ಮೂಲಭೂತ ಹಕ್ಕಲ್ಲ: ಅರ್ಜಿ ವಜಾ
Advertisement
Advertisement
ಈ ಹಗರಣದಲ್ಲಿ ಏನು ದಾಖಲೆ ಇಲ್ಲ ಅಂದರೆ ಅಷ್ಟು ಜನರನ್ನ ಯಾಕೆ ಅರೆಸ್ಟ್ ಮಾಡ್ತಿದ್ದಾರೆ? ಏನು ಆಗಿಲ್ಲ ಅಂದ್ರೆ ನೇಮಕಾತಿ ಏಕೆ ರದ್ದು ಮಾಡಿರೋದು? ಅಧಿಕಾರಿಗಳನ್ನೇಕೆ ವರ್ಗಾವಣೆ ಮಾಡಿದ್ದಾರೆ? ದಿವ್ಯಾ ಹಾಗರಗಿಯನ್ನೇಕೆ ಬಂಧನ ಮಾಡಿದ್ದಾರೆ? ಬಿಜೆಪಿ ಅವರಿಗೆ ಏನ್ ಮಾತಾಡ್ತಿದ್ದೀವಿ ಅಂತಾನೇ ಗೊತ್ತಿಲ್ಲ. ಯಾರೋ ಹೇಳ್ತಿದ್ದಾರೆ ಅಂತ ಬಿಜೆಪಿ ಅವರು ಗಿಳಿ ಪಾಠ ಒಪ್ಪಿಸುತ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಂಪ್ರದಾಯದ ಹೆಸರಿನಲ್ಲಿ ಅನ್ಯಾಯ ಮಾಡ್ತಾರೆ ಅಂದರೆ ಅವರ ಸಂಸ್ಕೃತಿ ಬಿಂಬಿಸುತ್ತೆ: ಶ್ರೀನಿವಾಸ ಪೂಜಾರಿ
Advertisement
ಪ್ರಕರಣದಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಭಾಗಿ ವಿಚಾರವಾಗಿ ಮಾತನಾಡಿದ ರೆಡ್ಡಿ, ಯಾವ ಪಕ್ಷದವರೇ ಆಗಿದ್ದರೂ ಕ್ರಮ ಆಗಲಿ. ಪ್ರಿಯಾಂಕ್ ಖರ್ಗೆ ದಾಖಲೆ ಇಲ್ಲದೆ ಮಾತನಾಡೋದಿಲ್ಲ. ಪ್ರಭು ಚವ್ಹಾಣ್, ಬಿಜೆಪಿ ಎಂಎಲ್‌ಸಿಗಳು ಪತ್ರ ಬರೆದಿದ್ದರು. ಆಗ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ? ದಾಖಲೆ ನಾವು ಯಾಕೆ ಕೊಡಬೇಕು? ನಾವು ಕೊಟ್ಟರೆ ಇವರೇ ಬೇಕಾ ತನಿಖೆ ಮಾಡೋಕೆ? ಬಿಜೆಪಿ ಅವರೇ ಇದರ ಹಿಂದೆ ಇದ್ದಾರೆ ಎಂಬುದು ಈ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ಸಿಎಂ ಆಗಿದ್ದಕ್ಕೆ ರಾಜ್ ಠಾಕ್ರೆಗೆ ಧ್ವನಿವರ್ಧಕಗಳ ಸಮಸ್ಯೆ: ಸಂಜಯ್ ರಾವತ್
Advertisement
ಸಾವಿನಲ್ಲಿ ಬಿಜೆಪಿ ಬಂಡವಾಳ ಬಯಲು: ಕೋವಿಡ್ ಸಾವಿನ ವಿಚಾರದಲ್ಲಿ WHO ನೀಡಿರುವ ವರದಿ ಕುರಿತು ಮಾತನಾಡಿ, ಕೊರೊನಾದಲ್ಲಿ ಲಕ್ಷಾಂತರ ಜನ ಮೃತಪಟ್ಟಿದ್ದಾರೆ ಅಂತ ನಾವು ಹೇಳುತ್ತಿದ್ದೇವು. ಯಾರೂ ನಮ್ಮ ಮಾತು ಕೇಳಿರಲಿಲ್ಲ. ಆದರೆ ಇವತ್ತು 47 ಲಕ್ಷ ಜನ ಸತ್ತಿದ್ದಾರೆ ವರದಿ ಹೇಳಿದೆ. ಕೇಂದ್ರ ಸರ್ಕಾರದ ಬಣ್ಣ ಈಗ ಬಯಲಾಗಿದೆ. ನಾನು ವಿಧಾನಸಭೆ ಅಧಿವೇಶನದಲ್ಲಿ ಕೋವಿಡ್ ಸಾವು ಸುಳ್ಳು ಲೆಕ್ಕ ಕೊಟ್ಟಿದ್ದಾರೆ ಅಂತ ಹೇಳಿದ್ದೆ. ಇವತ್ತು ಅದು ಸತ್ಯ ಆಗಿದೆ. ಕರ್ನಾಟಕದಲ್ಲಿ 3.5 ಲಕ್ಷ ಜನ ಸತ್ತಿದ್ದಾರೆ. ಇದನ್ನ ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಚ್ಚಿಟ್ಟಿತ್ತು. ಇವತ್ತು ಎಲ್ಲ ಬಂಡವಾಳ ಬಯಲಾಗಿದೆ. ಕೋವಿಡ್ ನಿರ್ವಹಣೆ ರಾಜ್ಯ, ಕೇಂದ್ರ ಸರ್ಕಾರ ವಿಫಲವಾಗಿದೆ ಅಂತ ಆಕ್ರೋಶ ಹೊರ ಹಾಕಿದ್ದಾರೆ.