ನವದೆಹಲಿ: ದೇಶದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಹಾಗೂ ಕಾನೂನು ವ್ಯವಸ್ಥೆಯ ಸವಾಲುಗಳ ವಿರುದ್ಧ ಹೋರಾಡಲು ಬಿಜೆಪಿ ನಿರ್ಧರಿಸಿದೆ. ಅದಕ್ಕಾಗಿ ಭಗವಾನ್ ಹನುಮನಿಂದ (Lord Hanuman) ಸ್ಫೂರ್ತಿ ಪಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ದೆಹಲಿಯಲ್ಲಿ (New Delhi) ನಡೆದ ಭಾರತೀಯ ಜನತಾ ಪಕ್ಷದ 44ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವಾನ್ ಹನುಮನಿಂದ ಬಿಜೆಪಿ ಸ್ಫೂರ್ತಿ ಪಡೆದಿದೆ. ಭಕ್ತಿ, ಶಕ್ತಿ ಮತ್ತು ಧೈರ್ಯಕ್ಕಾಗಿ ಪೂಜಿಲ್ಪಟ್ಟಿದೆ. ಹನುಮನಂತೆ ಇಂದು ಭಾರತ ವಿಶ್ವದ ಸವಾಲುಗಳನ್ನ ಎದುರಿಸಲು ಸದೃಢವಾಗಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಕೈ ನಾಯಕ ಮಾಜಿ ರಕ್ಷಣಾ ಸಚಿವ ಆಂಟನಿ ಪುತ್ರ ಬಿಜೆಪಿಗೆ ಸೇರ್ಪಡೆ
आज भारत उन बजरंगबली की तरह है, जिन्हें अपनी शक्तियों का आभास हो चुका है। इसलिए हनुमान जयंती पर भाजपा भ्रष्टाचार और परिवारवाद के खिलाफ कठोर रुख के अपने संकल्प को दोहराती है। pic.twitter.com/PXmXZy3jux
— Narendra Modi (@narendramodi) April 6, 2023
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಭ್ರಷ್ಟಾಚಾರ, ಜಾತೀಯತೆ ಮತ್ತು ಕುಟುಂಬ ರಾಜಕಾರಣದಲ್ಲಿ (Family Politics) ಮುಳುಗಿದ್ದರೆ, ದೊಡ್ಡ ಕನಸುಗಳನ್ನು ಹೊಂದುವುದು ಮತ್ತು ಅವುಗಳನ್ನು ಈಡೇರಿಸುವ ಮೂಲಕ ಬಿಜೆಪಿ ವಿಭಿನ್ನ ಪಕ್ಷವಾಗಿ ಗುರುತಿಸಿಕೊಂಡಿದೆ. 2014ರಲ್ಲಿ ಬಿಜೆಪಿ ಮೊದಲ ಬಾರಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ 800 ವರ್ಷಗಳಿಂದ ನಡೆದುಕೊಂಡುಬಂದಿದ್ದ ಗುಲಾಮಗಿರಿಯನ್ನ ಕೊನೆಗೊಳಿಸಿತು. ಈ ಮೂಲಕ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಮಾದರಿ ಬದಲಾವಣೆ ತಂದಿತು ಎಂದು ಪಕ್ಷದ ಸಾಧನೆಯನ್ನ ಹೇಳಿಕೊಂಡಿದ್ದಾರೆ.
बीते 9 वर्षों में देश ने बादशाही मानसिकता पर निरंतर जो चोट की है, उसी का नतीजा है कि आज देश का सामान्य मानवी मोदी की ढाल बना है। pic.twitter.com/zXdncHhClg
— Narendra Modi (@narendramodi) April 6, 2023
ಪ್ರಸ್ತುತ ದಿನಗಳಲ್ಲಿ ವಿಪಕ್ಷಗಳು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತವೆ. ಆದರೆ ಪ್ರತಿಯೊಬ್ಬ ಭಾರತೀಯನ ಸಹಾಯಕ್ಕಾಗಿ ಶ್ರಮಿಸುತ್ತಿರುವುದು ಬಿಜೆಪಿ ಮಾತ್ರ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನ ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬೀಗಿದ್ದಾರೆ. ಇದನ್ನೂ ಓದಿ: ಯುಪಿಎಯಿಂದ ನಿರೀಕ್ಷಿಸಿದ್ದೆ, ಬಿಜೆಪಿ ಮುಸ್ಲಿಮರಿಗೆ ಪದ್ಮ ಪ್ರಶಸ್ತಿ ನೀಡಲ್ಲ ಎಂದು ಭಾವಿಸಿದ್ದೆ: ಮೋದಿಗೆ ರಶೀದ್ ಅಹ್ಮದ್ ಖಾದ್ರಿ ಧನ್ಯವಾದ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.