ಬೆಂಗಳೂರು: ರಫೇಲ್ ಒಪ್ಪಂದವನ್ನು ಖಾಸಗಿ ಸಂಸ್ಥೆಗೆ ನೀಡಿ ಮೋದಿ ಸರ್ಕಾರ ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಿದ ಬೆನ್ನಲ್ಲೇ ಕರ್ನಾಟಕ ಬಿಜೆಪಿ ರಾಹುಲ್ ಗಾಂಧಿ ಮುಂದೆ 4 ಪ್ರಶ್ನೆಗಳನ್ನು ಕೇಳಿ ಉತ್ತರಿಸಿ ಎಂದು ಬಹಿರಂಗ ಸವಾಲು ಎಸೆದಿದೆ.
ರಾಹುಲ್ ಗಾಂಧಿ ಅನಧಿಕೃತವಾಗಿ ಸಂವಾದ ನಡೆಸುವ ಮೂಲಕ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡರಾದ ಶಾಸಕ ಸಿಟಿ ರವಿ, ಮುಖಂಡ ಅಶ್ವತ್ಥ ನಾರಾಯಣ್ ಅವರು ಈ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
Advertisement
We welcome sri @RahulGandhi to Bengaluru. We hope the potholes in the city greeted you well.
What u should actually talk to ex HAL employees today is the legacy of your family to loot the country in the name of defense deal. Be it Bofors or Jeep scandal, Congress looted it all. https://t.co/glftFbqKcp
— BJP Karnataka (@BJP4Karnataka) October 13, 2018
Advertisement
ಬಿಜೆಪಿಯ 4 ಪ್ರಶ್ನೆಗಳು
1. ಜನವರಿ 2012ರಲ್ಲಿ, ಭಾರತೀಯ ವಾಯು ಸೇನೆಗಾಗಿ 126 ಎಂಎಂ ಆರ್‍ಸಿಎ ವಿಮಾನಗಳನ್ನು ಖರೀದಿಸುವುದಕ್ಕಾಗಿ ದಸಾಲ್ಟ್ ಏವಿಯೇಷನ್ ಸಂಸ್ಥೆಯನ್ನು ಯುಪಿಎ ಸರ್ಕಾರ ಎಲ್1 ಎಂದು ಘೋಷಿಸಿತ್ತು. ಆದರೆ 2014 ರ ವರೆಗೂ ಒಪ್ಪಂದವನ್ನು ಅಂತಿಮಗೊಳಿಸಿರಲಿಲ್ಲ. ಇದು ರಾಷ್ಟ್ರದ ಸುರಕ್ಷತೆಯೊಂದಿಗೆ ಯುಪಿಎ ಸರ್ಕಾರ ಮಾಡಿಕೊಂಡ ರಾಜಿಯಲ್ಲವೇ?
Advertisement
2. ನೀವು ಇಂದು ಎಚ್‍ಎಎಲ್ ನೌಕರರೊಂದಿಗೆ ಸಂವಾದ ಕಾರ್ಯಕ್ರಮ ಆಗಮಿಸಿದ್ದೀರಿ. ಆದರೆ ಯುಪಿಎ ಸರ್ಕಾರವಿದ್ದಾಗ 2012-2014 (ಅವಧಿಯೊಗಳಗೆ) ದಸಾಲ್ಟ್ ಮತ್ತು ಎಚ್‍ಎಎಲ್ ನಡುವಿನ ರಫೇಲ್ ಕುರಿತ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಿಸದೇ ಇದ್ದದ್ದು ನೀವು ಎಚ್‍ಎಎಲ್ ಗೆ ಮಾಡಿದ ದ್ರೋಹವಲ್ಲವೇ? ಈ ಮೂಲಕ ನಿಮ್ಮ ಸರ್ಕಾರ ಎಚ್‍ಎಎಲ್ ಗೆ ದ್ರೋಹ ಬಗೆದು ಅವರನ್ನು ರಫೇಲ್ ಒಪ್ಪಂದದಿಂದ ಆಚೆ ದೂಡಿದೆ ಅಲ್ಲವೇ?
Advertisement
"Clown Prince" Rahul Gandhi meets former employees of HAL in Bengaluru.
But the Crook conveniently forgot to tell them the truth that during PM @narendramodi rule HAL got orders worth ₹ 22,000 crores every year compared to ₹ 6000 crores under his Dalal Government.
— C T Ravi ???????? ಸಿ ಟಿ ರವಿ (@CTRavi_BJP) October 13, 2018
3. ಯುಪಿಎ ಸರ್ಕಾರ 126ಎಂಎಂಆರ್‍ಸಿಎ ಖರೀದಿಗೆ 2007ರಲ್ಲೇ ಪ್ರಸ್ತಾಪ (ಆರ್‍ಎಫ್‍ಪಿ) ಹೊರಡಿಸಿತ್ತು. ಆದರೆ 2014ರಲ್ಲಿ ನಿಮ್ಮ ಸರ್ಕಾರದ ಪತನದವರೆಗೂ, ರಫೇಲ್ ಒಪ್ಪಂದವನ್ನು ಅಂತಿಮಗೊಳಿಸದೇ ಭಾರತದೊಂದಿಗೆ ಇಂತಹ ಒಪ್ಪಂದಗಳನ್ನು ಕೈಗೊಳ್ಳವುದು ಕಠಿಣ ಎಂಬಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಜೊತೆ ವ್ಯವಹಾರ ನಡೆಸುವ ರೀತಿ ಕುರಿತು ದುರಭಿಪ್ರಾಯವನ್ನು ಮೂಡಿಸಿದ್ದು ಯಾಕೆ?
4. ಸಾರ್ವಜನಿಕ ಸಭೆಗಳಲ್ಲಿ ರಫೇಲ್ ಖರೀದಿ ಕುರಿತ ಸುಳ್ಳು ಮತ್ತು ಅಸಮಂಜಸ ಹೇಳಿಕೆಗಳನ್ನು ಕೊಡುತ್ತಾ ಬಂದಿದ್ದೀರಿ. ನೀವು ಹೊರಡಿಸಿದ 2007ರ ಆರ್‍ಎಫ್‍ಪಿ ಪ್ರಕಾರ ಗ್ರೀನ್ ವಿಮಾನ ದರ 737 ಕೋಟಿ ರೂ.ಗಳು, 2015 ರಲ್ಲಿ ಅದೇ ಗ್ರೀನ್ ರಫೇಲ್ ವಿಮಾನಕ್ಕೆ ಎನ್‍ಡಿಎ ಸರ್ಕಾರ ಅಂತಿಮಗೊಳಿಸಿದ್ದು 670 ಕೋಟಿ ರೂ., ಅಂದರೆ 9% ಕಡಿಮೆ ದರ. ಈ ಎಲ್ಲಾ ಸತ್ಯಗಳನ್ನು ಮುಚ್ಚಿಟ್ಟು ದೇಶದ ಜನತೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದೀರಲ್ಲವೇ?
From 2013 till date nearly 4000 Farmers have committed suicide due to the massive failure of CONgress Government in Karnataka.
I demand “Dynasty Chor” Rahul Gandhi to meet the Families of these Farmers & apologise for his Party’s failure in protecting their lives.
— C T Ravi ???????? ಸಿ ಟಿ ರವಿ (@CTRavi_BJP) October 13, 2018