ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸಲು ಯತ್ನಿಸಿರುವ ಬಿಜೆಪಿ ಈ ಪ್ರಯತ್ನದಲ್ಲಿ ವಿಫಲವಾಗಿ, ಸದ್ಯ ಬಿಬಿಎಂಪಿಯಲ್ಲೂ ಅಧಿಕಾರ ವಹಿಸಲು ಅಂತಹದ್ದೇ ಯತ್ನ ನಡೆಸಿ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಮುಖಂಡರು ಬಿಬಿಎಂಪಿಯಲ್ಲಿ ಅಧಿಕಾರ ಕಿತ್ತುಕೊಳ್ಳಲು ವಿಫಲರಾಗಿದ್ದಾರೆ. ಇಲ್ಲಿ ಅಧಿಕಾರ ಪಡೆಯಲು ಪಕ್ಷೇತರ ಅಭ್ಯರ್ಥಿಗಳನ್ನು ಕರೆದುಕೊಂಡು ಮಾನಸಿಕ ಹಿಂಸೆ ನೀಡಿದ್ದಾರೆ. ಆದರೆ ಪಕ್ಷೇತರರು ನಮ್ಮ ಜೊತೆಯೇ ಬರುವುದಾಗಿ ತಿಳಿಸಿದ್ದಾರೆ. ಅದ್ದರಿಂದ ಕಳೆದ 3 ವರ್ಷಗಳಿಂದ ನಡೆಯುತ್ತಿರುವ ಮೈತ್ರಿ ಜೆಡಿಎಸ್ ಪಕ್ಷದೊಂದಿಗೆ ನಡೆಯುತ್ತದೆ ಎಂದು ತಿಳಿಸಿದರು.
Advertisement
Advertisement
ಬಿಜೆಪಿ ಮುಖಂಡರು ಮಾತನಾಡಿದ ಬಳಿಕ ಪಕ್ಷೇತರರೆಲ್ಲರೂ ನಮ್ಮ ಬಳಿ ಬಂದು ಬಿಜೆಪಿ ನೀಡಿದ ಆಫರ್ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೇ ಅಭ್ಯರ್ಥಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಬಿಜೆಪಿ ಮುಖಂಡರು ಅಧಿಕಾರ ಪಡೆಯಲು ವ್ಯರ್ಥ ಪ್ರಯತ್ನ ಮಡುತ್ತಿದ್ದಾರೆ. ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಅವರಿಗೆ ದೇವರು ಈಗಲಾದರೂ ಉತ್ತಮ ಬುದ್ಧಿ ನೀಡಲಿ. ದೇವರು, ಆಚರಣೆ, ಸಂಸ್ಕøತಿ ಎಂದು ಹೇಳುವ ಅವರು ಮೊದಲು ಇಂತಹ ಕೆಲಸಗಳನ್ನು ನಿಲ್ಲಿಸಲಿ ಎಂದು ಹೇಳಿದರು.
Advertisement
ಇನ್ನು ಬಿಬಿಎಂಪಿ ಮೈತ್ರಿ ಕುರಿತು ರಾಮಲಿಂಗಾರೆಡ್ಡಿ, ಕೆಜೆ ಜಾರ್ಜ್, ಹ್ಯಾರಿಸ್ ಸೇರಿದಂತೆ ಮುಖಂಡರೊಂದೊಗೆ ಚರ್ಚೆ ನಡೆಸಿ ತೀರ್ಮಾಸಲಿದ್ದೇವೆ. ಎಲ್ಲಾ ಪಕ್ಷೇತರ ಸದಸ್ಯರು ನಮ್ಮ ಜೊತೆ ಇದ್ದಾರೆ. ಅವರು ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ. ಆದರೆ ಬಿಜೆಪಿ ಮುಖಂಡರು ಒತ್ತಡ ಹಾಕಿದ್ದಾರೆ. ಅವರಿಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv