ನವದೆಹಲಿ: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯನ್ನು ಪಕ್ಷಗಳು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದು, ಒಬ್ಬರ ಮೇಲೊಬ್ಬರು ಕೆಸರೆರಚಾಟದಲ್ಲಿ ತೊಡಗಿಕೊಂಡಿವೆ. 3 ಕೆಜಿ ಬೀಫ್ ಇರೋದು ಪ್ರಧಾನಿಗಳಿಗೆ ತಿಳಿಯುತ್ತೆ, ಆದ್ರೆ ದೇಶದಲ್ಲಿ 350 ಕೆಜಿ ಆರ್ ಡಿಎಕ್ಸ್ ಬರೋದು ಹೇಗೆ ಗೊತ್ತಾಗಲ್ಲ ಎಂದು ದೆಹಲಿ ಕಾಂಗ್ರೆಸ್ ಸಮಿತಿ ಕಾರ್ಯಕಾರಿಣಿ ಅಧ್ಯಕ್ಷ ಹಾರೂನ್ ಯೂಸುಫ್ ಕೇಂದ್ರ ಸರ್ಕಾರವನ್ನು ಟ್ವಿಟ್ಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಹಾರೂನ್ ಟ್ವೀಟ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಹಾರೂನ್ ಯೂಸುಫ್, ನನ್ನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ನಾನು ಏನು ಹೇಳಿದ್ದೇನೊ ಅದು ಸರಿಯಾಗಿದೆ. ದೇಶದ ಜನರನ್ನು ಹೊಡೆದು ಕೊಲ್ಲಲಾಗುತ್ತದೆ. ಬೀಫ್ ಎಲ್ಲಿದೆ, ಹೇಗೆ ಬಂತು ಎಂಬುವುದನ್ನು ಪ್ರಧಾನಿಗಳನ್ನು ಮೊದಲು ತಿಳಿದುಕೊಳ್ಳುತ್ತಾರೆ. ಇಷ್ಟೊಂದು ಪ್ರಮಾಣದ ಆರ್ ಡಿಎಕ್ಸ್ ದೇಶದಲ್ಲಿ ಹೇಗೆ ಬಂತು ಎಂಬುವುದು ಗೊತ್ತಿಲ್ಲ ಅಂದ್ರೆ ಏನರ್ಥ ಎಂದು ಪ್ರಶ್ನಿಸಿ ಎಂದು ಪ್ರಧಾನಿಗಳ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿಯಂದು ಶೂಟಿಂಗ್‍ನಲ್ಲಿ ಪ್ರಧಾನಿ ಮೋದಿ ಬ್ಯುಸಿ: ಸುರ್ಜೆವಾಲಾ ಕಿಡಿ
Advertisement
Advertisement
ಪುಲ್ವಾಮಾ ದಾಳಿ ಬಗ್ಗೆ ನಾವು ಪ್ರಶ್ನೆ ಮಾಡಬೇಕಿದೆ. ಉಗ್ರರ ದಾಳಿ ನಡೆದ ದಿನದಂದು ನಮ್ಮ ಪ್ರಧಾನ ಮಂತ್ರಿಗಳು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು. ಹಾಗಾಗಿ ನಾವು ಇಂದು ಪ್ರಶ್ನೆ ಮಾಡುತ್ತಿದ್ದೇವೆ ಎಂದು ಹಾರೂನ್ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ‘ಪುಲ್ವಾಮಾ ದಾಳಿ ಬಳಿಕ ಮೋದಿ ಆಹಾರವನ್ನೇ ಸೇವಿಸಿರಲಿಲ್ಲ’
Advertisement
ಗುರುವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಅವರು, ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ಮಧ್ಯಾಹ್ನ ನಡೆದ ಉಗ್ರರ ದಾಳಿಯಲ್ಲಿ ಭಾರತದ ಅನೇಕ ಯೋಧರು ಹುತಾತ್ಮರಾಗಿದ್ದರು. ಈ ಘಟನೆಯಿಂದಾಗಿ ಇಡೀ ದೇಶವೇ ಶೋಕದಲ್ಲಿ ಮುಳುಗಿತ್ತು. ಆದರೆ ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಜಿಮ್ ಕಾರ್ಬೆಟ್ ಪಾರ್ಕ್ ನಲ್ಲಿ ಶೂಟಿಂಗ್‍ನಲ್ಲಿ ಬ್ಯುಸಿ ಆಗಿದ್ದರು. ಇಂತಹ ಪ್ರಧಾನಿ ವಿಶ್ವದಲ್ಲಿ ಮತ್ತೊಬ್ಬರಿಲ್ಲ ಎಂದು ಹೇಳಿ ಕಿಡಿಕಾರಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv