ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ಕಟ್ಟು ನಿಟ್ಟಿನ ಆದೇಶವನ್ನು ರವಾನಿಸಿದೆ.
ಮೈತ್ರಿ ಬಗ್ಗೆ ಯಾರು ಮಾತನಾಡಬೇಡಿ ಮತ್ತು ತಲೆಕೆಡಿಸಿಕೊಳ್ಳಬೇಡಿ. ಸರ್ಕಾರ ರಚನೆಗೆ ಸಂಬಂಧಿಸಿದಂತೆ ಬಹಿರಂಗವಾಗಿ ಎಲ್ಲಿಯೂ ಗೊಂದಲದ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷದ ಮಾಸ್ಟರ್ ಪ್ಲಾನ್‍ಗೆ ಡ್ಯಾಮೇಜ್ ಮಾಡಬೇಡಿ ಅಂತಾ ಖಡಕ್ ಸೂಚನೆಯನ್ನು ಹೈಕಮಾಂಡ್ ರವಾನಿಸಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
Advertisement
Advertisement
ಒಂದು ವೇಳೆ ಅನಿವಾರ್ಯತೆ ಎದುರಾದ್ರೆ ಮಾತ್ರ ಜೆಡಿಎಸ್ ಜೊತೆಗೆ ಮೈತ್ರಿ. ಡಿಸಿಎಂ ವಿಚಾರದ ಬಗ್ಗೆಯೂ ಯಾರೂ ಪ್ರಸ್ತಾಪಿಸಬಾರದು. ಫಲಿತಾಂಶದ ಬಳಿಕವಷ್ಟೇ ಮುಂದಿನ ನಿರ್ಧಾರಗಳ ಬಗ್ಗೆ ಪಕ್ಷದಲ್ಲಿ ಚರ್ಚೆ ಆಗಲಿದೆ ಅಂತಾ ಸಂದೇಶದಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ.
Advertisement
ಶನಿವಾರ(ಮೇ 12) ರಾಜ್ಯಾದ್ಯಂತ ಮತದಾನವಾಗಿದ್ದು, ರಾಜಕೀಯ ವಲಯದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಈಗಾಗಲೇ 5 ರಾಷ್ಟ್ರೀಯ ಸುದ್ದಿವಾಹಿನಿಗಳು ಚುನಾವಣೋತ್ತರ ಸಮೀಕ್ಷೆಯ ಬಹಿರಂಗಗೊಳಿಸಿವೆ. ಮೂರು ಸಮೀಕ್ಷೆಗಳು ಬಿಜೆಪಿಗೆ ಮುನ್ನಡೆ ಅಂತಾ ಹೇಳಿದ್ರೆ, ಎರಡು ಕಾಂಗ್ರೆಸ್ ಮುನ್ನಡೆ ಎಂದು ತಿಳಿಸಿವೆ. ಆದ್ರೆ ಯಾವ ಪಕ್ಷಕ್ಕೂ ಮ್ಯಾಜಿಕ್ ನಂಬರ್ ಸಿಕ್ಕಿಲ್ಲ, ಆದ್ದರಿಂದ ಮೈತ್ರಿ ಅನಿವಾರ್ಯ ಎಂದು ಭವಿಷ್ಯ ನುಡಿದಿವೆ.
Advertisement