ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ (Basangouda Patil Yatnal) ಗೆ ಮತ್ತೆ ಮತ್ತೆ ನಸೀಬು ಕೈಹಿಡಿಯುತ್ತಿದೆ. ಕಳೆದ ಮೂರು ವರ್ಷಗಳಿಂದ ಪಕ್ಷ ಮತ್ತು ಸರ್ಕಾರದ ನಾಯಕರ ಬಗ್ಗೆ ಅಷ್ಟೆಲ್ಲ, ಮುಜುಗರದ, ಕೀಳು ಮಟ್ಟದ ಹೇಳಿಕೆಗಳನ್ನು ಕೊಡ್ತಾ ಬರುತ್ತಿದ್ದರೂ ಹೈಕಮಾಂಡ್ ಮತ್ತೆ ಮತ್ತೆ ಮಾಫಿ ಮಾಡುತ್ತಾನೇ ಇದೆ. ಇತ್ತೀಚೆಗೆ ಸಚಿವ ನಿರಾಣಿ ವಿರುದ್ಧ ಯತ್ನಾಳ್ ಅವರು ‘ಪಿಂಪ್’ ಪದ ಬಳಸಿ ವಾಗ್ದಾಳಿ ನಡೆಸಿದ ಮೇಲಂತೂ ಪಕ್ಷದ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟಿಸಿತ್ತು. ಮೀಸಲಾತಿ ಘೋಷಣೆ ಮಾಡ್ತಿಲ್ಲ ಅಂತ ಸಿಎಂ ಬೊಮ್ಮಾಯಿ (Basavaraj Bommai) ಮೇಲೂ ಯತ್ನಾಳ್ ಟೀಕಾ ಪ್ರಹಾರ ನಡೆಸಿದ್ದರು. ಪಕ್ಷಕ್ಕೂ, ಸರ್ಕಾರಕ್ಕೂ ಯತ್ನಾಳ್ ಹೇಳಿಕೆಗಳಿಂದ ಮತ್ತೊಮ್ಮೆ ಭಾರೀ ಮುಜುಗರ ಆಗಿತ್ತು. ಆದರೆ ಇಷ್ಟೆಲ್ಲ ಆದರೂ, ಯತ್ನಾಳ್ ವಿರುದ್ಧ ಯಾವುದೇ ಶಿಸ್ತು ಕ್ರಮ ಇಲ್ಲ.
Advertisement
ಸಚಿವ ನಿರಾಣಿ (Murugesh Nirani) ವಿರುದ್ಧ ಬಳಸಿದ ಕೀಳು ಪದಗಳ ಹಿನ್ನೆಲೆಯಲ್ಲಿ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ಶಿಸ್ತು ಸಮಿತಿಯು ಕೇಂದ್ರ ಬಿಜೆಪಿ ಶಿಸ್ತು ಸಮಿತಿಗೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇತ್ತಿಚೆಗೆ ಯತ್ನಾಳ್‍ಗೆ ಕೇಂದ್ರ ಬಿಜೆಪಿ (BJP) ಶಿಸ್ತು ಸಮಿತಿಯಿಂದ ಖುದ್ದು ಹಾಜರಾಗಿ ಸ್ಪಷ್ಟೀಕರಣ ನೀಡುವಂತೆ ತಾಕೀತು ಮಾಡಿ ಶೋಕಾಸ್ ನೊಟೀಸ್ ಕೊಡಲಾಗಿತ್ತು. ಇದರ ಭಾಗವಾಗಿ ಯತ್ನಾಳ್ ಅವರು ಮೂರು ದಿನಗಳ ಹಿಂದೆಯಷ್ಟೇ ರಹಸ್ಯವಾಗಿ ದೆಹಲಿಗೆ ಹೋಗಿ ಬಂದಿದ್ದಾರೆ ಎನ್ನಲಾಗಿದೆ. ಆದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ಬಿಜೆಪಿ ಹೈಕಮಾಂಡ್ (BJP HighCommand) ಮತ್ತೊಮ್ಮೆ ಖಡಕ್ ವಾರ್ನಿಂಗ್ ಮಾತ್ರ ಕೊಟ್ಟು ಕಳಿಸಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಅಶೋಕ್ ಗೋಬ್ಯಾಕ್ ಭುಗಿಲು- ವರಿಷ್ಠರಿಗೆ ವರದಿ ರವಾನೆ
Advertisement
Advertisement
ಸೀಕ್ರೆಟ್ ಆಗಿ ದೆಹಲಿಗೆ ಹೋಗಿ ಬಂದಿರೋ ಶಾಸಕ ಯತ್ನಾಳ್ ಗೆ ಬರೇ ವಾರ್ನಿಂಗ್ ಕೊಟ್ಟು ಕಳಿಸಲಾಗಿದೆಯಂತೆ. ಚುನಾವಣೆ ಹೊತ್ತಲ್ಲಿ ಯಾರ ವಿರುದ್ಧವೂ ಮಾತಾಡದಂತೆ ತಾಕೀತು ಮಾಡಿದ್ದಾರೆನ್ನಲಾಗಿದೆ. ಪಕ್ಷದ ಶಿಸ್ತು ಮೀರದೇ ಹದ್ದು ಬಸ್ತಿನಲ್ಲಿರುವಂತೆ ಕಟ್ಟೆಚ್ಚರ ನೀಡಿ ಕಳಿಸಲಾಗಿದೆಯಂತೆ. ಚುನಾವಣೆ ಸಮೀಪ ಯತ್ನಾಳ್ ಬಾಯಿಗೆ ಹೈಕಮಾಂಡ್ ಬೀಗ ಹಾಕುತ್ತೆ ಅನ್ನೋ ವಿರೋಧಿಗಳ ನಿರೀಕ್ಷೆ ಠುಸ್ ಆಗಿದೆ.
Advertisement
ರೆಬೆಲ್ ಶಾಸಕ ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ನಿಲುವು ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ಆಗ್ತಿದೆ. ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ಹೀಗೇಕೆ ನಡೆದುಕೊಳ್ತಿದೆ ಅನ್ನೋದು ಹಲವರಿಗೆ ಒಗಟಾಗಿದೆ. ಯತ್ನಾಳ್ ಗೆ ಪಂಚಮಸಾಲಿ ಸಮುದಾಯ ಸಪೋರ್ಟ್ ಗೆ ರಿಸ್ಕ್ ಬೇಡ ಅಂತ ವರಿಷ್ಠರು ಸುಮ್ನಾದ್ರಾ ಅಂತ ಚರ್ಚೆ ಆಗ್ತಿದೆ. ಒಂದೊಮ್ಮೆ ಯತ್ನಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದರೆ ಮೀಸಲಾತಿ ಹೋರಾಟ ಇನ್ನಷ್ಟು ತೀವ್ರವಾಗಬಹುದು. ಜೊತೆಗೆ ಪಂಚಮಸಾಲಿ ಸಮುದಾಯ, ಮಠಾಧೀಶರು ತಿರುಗಿ ಬೀಳಬಹುದು. ಹೀಗಾಗಿ ಮತ್ತೆ ಹೊಸ ತಲೆನೋವು ಬೇಡ ಅಂತ ಅಂದುಕೊಳ್ಳುತ್ತಾ ಹೈಕಮಾಂಡ್ ಅಂತ ಪಕ್ಷದೊಳಗೆ ಗುಸು ಗುಸು ಚರ್ಚೆ ಜೋರಾಗಿದೆ. ಇದನ್ನೂ ಓದಿ: ಜೆಡಿಎಸ್ ವಿರುದ್ಧ ಮಾತಾಡಿದ್ರೆ ಸುಮಲತಾ ಲೀಡರ್ ಆಗಬಹುದು ಅಂದುಕೊಂಡಿದ್ದಾರೆ: ಪುಟ್ಟರಾಜು
ಇತ್ತ ಹೈಕಮಾಂಡ್ ನಡೆಯಿಂದ ನಿರಾಣಿ ಬ್ರದರ್ಸ್ ವಲಯದಲ್ಲೂ ಭಾರೀ ಬೇಸರ ಮನೆ ಮಾಡಿದೆ ಎನ್ನಲಾಗಿದೆ. ಯತ್ನಾಳ್ ಗೆ ಹೈಕಮಾಂಡ್ ಸುಮ್ನೆ ಬಿಟ್ಟಿರಬಹುದು, ಆದರೆ ನಾವು ಸುಮ್ಮನಿರೋದು ಬೇಡ ಎಂಬ ನಿರ್ಧಾರಕ್ಕೆ ನಿರಾಣಿ ಬಣ ಬಂದಿದೆ ಎನ್ನಲಾಗಿದೆ. ಯತ್ನಾಳ್ ಗೆ ಖೆಡ್ಡಾ ತೋಡಲು ನಿರಾಣಿ ಟೀಮ್ ಸ್ಕೆಚ್ ಹಾಕಿದೆ ಎನ್ನಲಾಗಿದೆ. ವಿಜಯಪುರದಲ್ಲಿ ಯತ್ನಾಳ್ ರನ್ನು ರಾಜಕೀಯವಾಗಿ ಮುಳುಗಿಸಲು ಒಳಗೊಳಗೇ ಪ್ಲಾನ್ ರೂಪಿಸಲಾಗ್ತಿದೆಯಂತೆ. ಒಟ್ಟಿನಲ್ಲಿ ರೆಬೆಲ್ ಯತ್ನಾಳ್ ಗೆ ಸ್ವಪಕ್ಷೀಯರಿಂದಲೇ ಆಪತ್ತು ಕಟ್ಟಿಟ್ಟ ಬುತ್ತಿ. ಬಿಜೆಪಿಯಲ್ಲಿ ಯತ್ನಾಳ್ ವರ್ಸಸ್ ನಿರಾಣಿ ಸಂಘರ್ಷ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k