ಬೆಂಗಳೂರು: ಬಿಜೆಪಿಯ ಚಿಂತನಾ ಮಂಥನಾ ಸಭೆಯಲ್ಲಿ ವರಿಷ್ಠರು ಬೊಮ್ಮಾಯಿ ಸರ್ಕಾರಕ್ಕೆ ತಿವಿದಿದ್ದಾರೆ. ಸರ್ಕಾರದ ನಡವಳಿಕೆ ಬಗ್ಗೆ ಕಾರ್ಯಕರ್ತರಿಗೆ ಅಸಮಾಧಾನ ಇದೆ. ಆಂತರಿಕ ಸರ್ವೇಯಲ್ಲೂ ಇದೇ ಅಭಿಪ್ರಾಯ ಕೂಡ ವ್ಯಕ್ತವಾಗಿದೆ. ಚುನಾವಣಾ ವರ್ಷದಲ್ಲಿ ಈ ಅಸಮಾಧಾನವನ್ನ ಸರಿಪಡಿಸದಿದ್ದರೆ ಕಷ್ಟ ಎಂದು ಸರ್ಕಾರಕ್ಕೆ ಹೈಕಮಾಂಡ್ ಎಚ್ಚರಿಕೆ ನೀಡಿದ್ದಾರೆ.
Advertisement
ಪರಿಷತ್ ಚುನಾವಣೆಯ ಹಲವು ಸೋಲುಗಳ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ನಮ್ಮದೇ ಸರ್ಕಾರ ಇದ್ದರೂ ಹಲವು ಕ್ಷೇತ್ರಗಳನ್ನು ಕಳೆದುಕೊಂಡಿದ್ದು ಏಕೆ..!? ಪರಿಷತ್‍ನಲ್ಲಿ ಸೋಲು ಪಕ್ಷದೊಳಗಿನ ನಾಯಕರ ಕಲಹ ಅಷ್ಟೇ ಕಾರಣ ಅಲ್ಲ, ಸರ್ಕಾರ, ಪಕ್ಷದ ಸಮನ್ವಯತೆ ಸಾಧಿಸಲು ಆಗದಿರುವುದು ಕಾರಣ ಆಗಿರಬಹುದು. ಇದೇ ಮನಃಸ್ಥಿತಿ ಮುಂದುದವರಿದರೆ ಅಸೆಂಬ್ಲಿ ಎಲೆಕ್ಷನ್‍ಗೆ ಏನ್ ಪರಿಸ್ಥಿತಿ ಅಂತ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್ ಬ್ಯಾನ್ ನಿಷೇಧ ವಾಪಸ್- ಪಬ್ಲಿಕ್ ಟಿವಿ ವರದಿ ಬಳಿಕ ಎಚ್ಚೆತ್ತ ಸರ್ಕಾರ
Advertisement
Advertisement
ಲೋಕಸಭೆಯಲ್ಲಿ ಸಹೋದರನನ್ನೇ ಸೋಲಿಸಿದ್ದೇವೆ. ಅಂತಹ ಪಕ್ಷ ನಿಷ್ಠೆ ನಮ್ಮದು ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎನ್ನಲಾಗಿದೆ. 2008, 2013, 2018ರ ಚುನಾವಣೆ ಸಂದರ್ಭದಲ್ಲಿನ ರಣತಂತ್ರ, ಸೋಲು-ಗೆಲುವುಗಳ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಈ ಬಾರಿಯ ಮಿಷನ್ 150ರ ಗುರಿ ಬಗ್ಗೆಯೇ ಹೆಚ್ಚು ಚರ್ಚೆ ಆಗಿದ್ದು, ಆಗಸ್ಟ್ ತಿಂಗಳಲ್ಲಿ 25ಕ್ಕೂ ಹೆಚ್ಚು ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.