ಬೆಂಗಳೂರು: ಹಾನಗಲ್ ಬೈ ಎಲೆಕ್ಷನ್ ಸೋಲಿನ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಬಿಜೆಪಿ ಹೈಕಮಾಂಡ್ ಬೇಸರ ವ್ಯಕ್ತಪಡಿಸಿದೆ. ಸಿಂದಗಿಯಲ್ಲಿ ಭರ್ಜರಿಯಾಗಿ ಗೆದ್ದರೂ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಆಗಲಿ, ಗೃಹ ಸಚಿವ ಅಮಿತ್ ಶಾ ಆಗಲಿ ಶುಭಕೋರಿಲ್ಲ. ಆದರೆ ಪಕ್ಕದ ತೆಲಂಗಾಣದ ಹುಜಾರಾಬಾದ್, ಬಿಹಾರ, ಮಧ್ಯಪ್ರದೇಶ, ಅಸ್ಸಾಂ ರಾಜ್ಯದ ಉಪಚುನಾವಣೆ ಗೆಲುವಿಗೆ ಅಭಿನಂದಿಸಿ ನಡ್ಡಾ ಟ್ವೀಟ್ ಮಾಡಿದ್ದಾರೆ.
Advertisement
ನವೆಂಬರ್ 6ರಂದು ದೆಹಲಿಗೆ ತೆರಳಲಿದ್ದು, 7ರಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗಿಯಾಗಲಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತಾಡಿದ ಸಿಎಂ, ಹಾನಗಲ್ ಸೋಲಿನ ಹೊಣೆಯನ್ನು ಸಾಮೂಹಿಕವಾಗಿ ವಹಿಸಿಕೊಳ್ತೇವೆ. ಸೋಲಿನ ಪರಾಮರ್ಶೆ ಮಾಡ್ತೇವೆ ಅಂದಿದ್ದಾರೆ. ಜೊತೆಗೆ ಹಾನಗಲ್‍ನಲ್ಲಿ ಬಿಜೆಪಿ ಸೋಲಿಗೆ ಬಿಜೆಪಿ ದುರಾಡಳಿತವೇ ಕಾರಣ ಅನ್ನೋ ಕಾಂಗ್ರೆಸ್ ಆರೋಪಕ್ಕೆ ಬೊಮ್ಮಾಯಿ ಕೆಂಡಾಮಂಡಲರಾಗಿದ್ದಾರೆ.
Advertisement
Advertisement
ಸಿಂದಗಿ ಜನರು ಯಾಕೆ ಹೆಚ್ಚಿನ ಮತ ನೀಡಿದ್ರು..? ಅಂತ ಠಕ್ಕರ್ ಕೊಟ್ಟಿದ್ದಾರೆ. ಸಚಿವ ಈಶ್ವರಪ್ಪ ಅವರಂತೂ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿಲ್ವಾ ಅಂತ ಛೇಡಿಸಿದ್ದಾರೆ. ಆದರೆ ಡಿಕೆಶಿ ಮಾತ್ರ ಸಿಂದಗಿಯಲ್ಲಿ ನಮಗೆ ಹೆಚ್ಚಿನ ಮತ ಸಿಕ್ಕಿದೆ. 2023ಕ್ಕೆ ಗುರಿ ಮುಟ್ಟುತ್ತೇವೆ ಅಂದಿದ್ದಾರೆ. ಇದನ್ನೂ ಓದಿ: ದೀಪಾವಳಿಗೆ ಮೋದಿ ಸರ್ಕಾರದಿಂದ ಬಂಪರ್ – ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ
Advertisement
ಹಾಸನದಲ್ಲಿ ರೇವಣ್ಣ ಮಾತಾಡಿ, ನಮ್ಮ ಕುಮಾರಣ್ಣ ಕೆಲವು ತಪ್ಪು ಮಾಡ್ದಾ. ಪ್ರಾದೇಶಿಕ ಪಕ್ಷ ಮುಗಿಸಲು ಯಾರಿಂದಲೂ ಆಗಲ್ಲ. ಯಾರ್ಯಾರ ಜಾತಕ ಏನಿದೆ..? ನಮಗೆ ಗೊತ್ತಿದೆ ಟೈಂ ಬಂದಾಗ ಹೇಳ್ತಿನಿ ಅಂತ ಗುಡುಗಿದ್ದಾರೆ. ಈ ಮಧ್ಯೆ ನಾಳೆ ಬೊಮ್ಮಾಯಿ ಸರ್ಕಾರಕ್ಕೆ 100 ದಿನ ತುಂಬುತ್ತಿದೆ. ಹೀಗಾಗಿ 11ನೇ ರಂದು ಸಚಿವ ಸಂಪುಟ ಸಭೆ ನಡೆಸಿ, 100 ದಿನದ ಸಾಧನೆ, ಜಾರಿಗೆ ತಂದ ಯೋಜನೆಗಳನ್ನು ಜನತೆ ಮುಂದಿಡಲು ಸಿಎಂ ನಿರ್ಧರಿಸಿದ್ದಾರೆ. ಇದನ್ನೂ ಓದಿ: ನ.16ಕ್ಕೆ ಪ್ಯಾಲೇಸ್ ಗ್ರೌಂಡ್‍ನಲ್ಲಿ ಪವರ್ ಸ್ಟಾರ್‌ಗೆ ನುಡಿ ನಮನ