ಬೆಂಗಳೂರು: ರಾಜ್ಯಕ್ಕೆ ಅಮಿತ್ ಶಾ (Amit Shah) ಬಂದು ಹೋದಮೇಲೆ ಸಿದ್ದರಾಮಯ್ಯ (Siddaramaiah) ಮೇಲೆ ಆಗ್ರೆಸಿವ್ ಆಟ್ಯಾಕ್ ಶುರುವಾಗಿದ್ದು, ಬೇರೆ ಬೇರೆ ಆಯಾಮಗಳಲ್ಲಿ ಚರ್ಚೆ ಆಗುತ್ತಿದೆ. ಪೇ ಸಿಎಂ, 40 ಪರ್ಸೆಂಟ್ ಕಮಿಷನ್ ಚಾರ್ಜ್ ಮಾಡಿ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ಗೆ ತಿರುಗೇಟು ನೀಡಬೇಕೆಂದು ಸಂಘದ ಕಟ್ಟಾಜ್ಞೆ ಎನ್ನಲಾಗಿದೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ (BJP) ಸಂಚಲನ ಉಂಟಾಗಿದ್ದು, ಕಾಂಗ್ರೆಸ್ (Congress) ಪ್ಲ್ಯಾನ್ ಬೀಟ್ಗೆ ಬಿಜೆಪಿ ಗೇಮ್ ಪ್ಲ್ಯಾನ್ ಮಾಡಿದೆ.
Advertisement
ಸಿದ್ದರಾಮಯ್ಯ ಒಬ್ಬ ನಾಯಕನನ್ನು ನೀವು ನೋಡಿಕೊಳ್ಳಿ, ಉಳಿದಿದ್ದು ನಮಗೆ ಬಿಡಿ. ಹೀಗೆ ಕರ್ನಾಟಕಕ್ಕೆ ಅಮಿತ್ ಶಾ ಬಂದಾಗ ರಾಜ್ಯ ನಾಯಕರಿಗೆ ಸೂಕ್ಷ್ಮವಾಗಿ ಹೇಳಿದ್ದರು ಎನ್ನಲಾಗಿದೆ. ಬಿಜೆಪಿಯ ಪ್ರತಿ ಏಟಿಗೂ ಎದುರೇಟು ನೀಡುವ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಕಟ್ಟಿ ಹಾಕಿದರೆ ಎದುರಾಳಿ ಆಟ ಅರ್ಧ ಕಟ್ಟಿ ಹಾಕಿದಂತೆ ಎಂಬ ಗೇಮ್ ಪ್ಲ್ಯಾನ್ ಬಿಜೆಪಿ ಹೈಕಮಾಂಡ್ನದ್ದು. ಆ ಕಾರಣಕ್ಕಾಗಿಯೇ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ತಂಡ ಮುಗಿಬಿದ್ದಿದೆ ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
Advertisement
Advertisement
ಹಿಂದೂ ಮತಗಳ ಕ್ರೋಢೀಕರಣಕ್ಕೆ ಸಿದ್ದು ವಿರುದ್ಧ ಮುಸ್ಲಿಂ ಒಲವಿನ ಅಸ್ತ್ರ ಪ್ರಯೋಗ ನಡೆಯತ್ತಿದೆ ಎಂಬ ವಾದವೂ ಇದೆ. ಟಿಪ್ಪು ಜಯಂತಿ ಆಚರಣೆ ಮಾಡಿದ್ದ ಸಿದ್ದುಗೆ ಹಿಂದೂ ವಿರೋಧಿ ಪಟ್ಟ ಗಟ್ಟಿ ಮಾಡಲು ಪ್ಲ್ಯಾನ್ ನಡೆದಿದ್ದು, ಪ್ರತಿ ಹೆಜ್ಜೆಯಲ್ಲೂ ಸಿದ್ದರಾಮಯ್ಯ ವಿರುದ್ಧ ಹಿಂದೂ ವಿರೋಧಿ ಎಂದು ಬಿಂಬಿಸುವ ತಂತ್ರಗಾರಿಕೆ ಬಿಜೆಪಿ ಹೈಕಮಾಂಡ್ನದ್ದು ಎನ್ನಲಾಗುತ್ತಿದೆ. ಇದನ್ನೂ ಓದಿ: ಸಿಎಂ ಮನೆ ಮುಂದೆಯೇ ನಾವೆಲ್ಲರೂ ಸಂಕ್ರಾಂತಿ ಆಚರಿಸುತ್ತೇವೆ – ಬಸವಜಯ ಮೃತ್ಯುಂಜಯ ಸ್ವಾಮೀಜಿ
Advertisement
ಪೇ ಸಿಎಂ ವಿಚಾರದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಹಿನ್ನಡೆಯಾಗಿತ್ತು, ಆಗ ಕಾಂಗ್ರೆಸ್ ಬೀಗಿತ್ತು. 40 ಪರ್ಸೆಂಟ್ ಕಮಿಷನ್ ವಿಚಾರದಲ್ಲಿ ಬಿಜೆಪಿ ವಿರುದ್ಧ ನಿರಂತರ ಚಾರ್ಜ್ಶೀಟ್ ಹಾಕಿ ಕಾಂಗ್ರೆಸ್ ಕೇಕೆ ಹಾಕಿತ್ತು. ಸರಣಿ ಚಾರ್ಜ್ಶೀಟ್ಗಳ ಮೂಲಕ ಬಿಜೆಪಿ ವಿರುದ್ಧ ಮುಗಿಬಿದ್ದಿದ್ದ ಕಾಂಗ್ರೆಸ್ ನಾಯಕರ ತಂತ್ರಕ್ಕೆ ಬ್ರೇಕ್ ಹಾಕಲು ಬಿಜೆಪಿಯಿಂದ ಸಿದ್ದು ನಿಜ ಕನಸುಗಳ ಅಸ್ತ್ರ ಪ್ರಯೋಗ ಮಾಡಲಾಗಿತ್ತು ಎನ್ನುವುದು ಬಲ್ಲ ಮೂಲಗಳ ಮಾಹಿತಿ.
ಬಿಜೆಪಿ ಹೈಕಮಾಂಡ್ನದ್ದು ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ತಂತ್ರ. ಕಾಂಗ್ರೆಸ್+ಸಿದ್ದರಾಮಯ್ಯ ಗುರಿಯಾಗಿಟ್ಟುಕೊಂಡು ಮಾಡಿರುವ ಗೇಮ್ ಪ್ಲ್ಯಾನ್ ಯಾವ ಸಕ್ಸಸ್ ತಂದು ಕೊಡುತ್ತೋ ಕಾದುನೋಡಬೇಕಿದೆ. ಇದನ್ನೂ ಓದಿ: ಮ್ಯೂಸಿಕ್ ಸೌಂಡ್ ಕಡಿಮೆ ಮಾಡಿ ಎಂದಿದ್ದಕ್ಕೆ ಸೇನಾಧಿಕಾರಿ ಕಾರಿಗೆ ಬೆಂಕಿ ಇಟ್ಟವರ ಹೋಟೆಲ್ಗೆ ಬಿತ್ತು ಬೀಗ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k