ಬೆಂಗಳೂರು: ಬಿಜೆಪಿ ಹೈಕಮಾಂಡ್ (BJP High Command) ಬಳಿ ಕಡೇ ಆಟ ಸಿದ್ಧವಾಗಿದೆ ಎನ್ನಲಾಗಿದೆ. ಪೊಲಿಟಿಕಲ್ ಸುದರ್ಶನ ಚಕ್ರ ಅಸ್ತ್ರ ಇದೆಯಾ ಎಂಬ ಕುತೂಹಲ ಗರಿಗೆದರಿದೆ. ಜಾತಿ ರಾಜಕೀಯದ ದಿಕ್ಕು ಬದಲಾಗುವ ಬಗ್ಗೆ ನಾನಾ ಚರ್ಚೆಗಳು ಶುರುವಾಗಿದ್ದು, ಶಿವಮೊಗ್ಗದಲ್ಲಿ (Shivamogga) ಕಹಳೆ ಮೊಳಗುವ ಬಗ್ಗೆ ಬಿಜೆಪಿಯೊಳಗೆ (BJP) ಮಾತುಗಳು ಸುಳಿದಾಡುತ್ತಿದೆ. ಬಿಜೆಪಿ ಹೈಕಮಾಂಡ್‌ನ ಆ ಕ್ಯಾಸ್ಟ್ + ಮಾಸ್ ಕಾರ್ಡ್ ಗೇಮ್ ಏನದು ಎಂಬ ಬಗ್ಗೆ ರಾಜ್ಯ ಬಿಜೆಪಿ ನಾಯಕರೇ ಪ್ರಶ್ನೆ ಮಾಡುತ್ತಿದ್ದಾರೆ.
ಅಂದಹಾಗೆ ಯಡಿಯೂರಪ್ಪ (Yediyurappa) ಬರ್ತ್‌ಡೇನಲ್ಲಿ ಆ ಪೊಲಿಟಿಕಲ್ ಸುದರ್ಶನ ಚಕ್ರ ಪ್ರಯೋಗ ಆಗುವ ಸಾಧ್ಯತೆಗಳ ಬಗ್ಗೆ ಲೆಕ್ಕಚಾರ ಇದೆ. ಯಡಿಯೂರಪ್ಪ ರೋಲ್.. ಮಗನ ರೋಲ್.. ಏನು..? ಎಲ್ಲಿ ಅನ್ನೋದು ಸ್ಪಷ್ಟವಾಗಬಹುದು ಎನ್ನಲಾಗಿದೆ. ಪೊಲಿಟಿಕಲ್ ಮಾಸ್ಟರ್ ಸ್ಟ್ರೋಕ್ ಕೊಡುವುದರಲ್ಲಿ ಬಿಜೆಪಿ ಹೈಕಮಾಂಡ್ ಎತ್ತಿದ ಕೈ. ಹಾಗಾಗಿ ಶಿವಮೊಗ್ಗದಲ್ಲಿ ನಡೆಯಲಿರುವ ಯಡಿಯೂರಪ್ಪ ಭರ್ಜರಿ ಬರ್ತ್‌ಡೇ ಕಾರ್ಯಕ್ರಮ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಇದನ್ನೂ ಓದಿ: ಟಿಕೆಟ್ ಕೋಲಾಹಲ- ಹಾಸನ ಜೆಡಿಎಸ್‍ನಲ್ಲಿ ಪಕ್ಷಾಂತರ ಪರ್ವ
ಮೋದಿ ಭಾಗವಹಿಸುವ ಆ ಕಾರ್ಯಕ್ರಮದಲ್ಲಿ ಬಿಜೆಪಿ ಹೈಕಮಾಂಡ್‌ನಿಂದ ಮೆಗಾ ಸಂದೇಶ ಇರುವ ಸಾಧ್ಯತೆ ಇದೆ. 2023ರ ವಿಧಾನಸಭೆ ಚುನಾವಣೆಗೆ ಮಹತ್ತರ ದಿಕ್ಕು ಪಡೆದುಕೊಳ್ಳುವ ಸಂದೇಶ ಸಿದ್ಧವಾಗಿರುವ ಬಗ್ಗೆ ಚರ್ಚೆ ನಡೆದಿದೆ. ಯಡಿಯೂರಪ್ಪ ರೋಲ್ ಡಿಸೈಡ್ ಆಗುವ ಘೋಷಣೆ ಜೊತೆಗೆ, ಇದೇ ಸಮಾವೇಶದಲ್ಲಿ ಯಡಿಯೂರಪ್ಪ ಪುತ್ರನ ರೋಲ್ ಮತ್ತು ಕ್ಷೇತ್ರದ ಬಗ್ಗೆಯೂ ಖಾತ್ರಿ ಆಗುವ ಸಾಧ್ಯತೆ ಇದೆ
ಎನ್ನಲಾಗಿದೆ.
ಶಿವಮೊಗ್ಗದಲ್ಲಿ ಯಡಿಯೂರಪ್ಪ ಬರ್ತ್‌ಡೇ ದಿನ ಫೆಬ್ರವರಿ 27ರಂದು ಆ ಮಹಾ ಸಂದೇಶದ ಬಗ್ಗೆ ನಾನಾ ದೃಷ್ಟಿಕೋನದಲ್ಲಿ ಲೆಕ್ಕಚಾರ ನಡೆದಿದ್ದು, ಹೆಚ್‌ಡಿಕೆ ಬ್ರಾಹ್ಮಣ ಸಿಎಂ ಬಾಂಬ್‌ಗೆ ಯಡಿಯೂರಪ್ಪ ಬರ್ತ್‌ಡೇ ದಿನ ಪೊಲಿಟಿಕಲ್ ಸುದರ್ಶನ ಚಕ್ರ ಪಕ್ಕನಾ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ. ಇದನ್ನೂ ಓದಿ: ಫೆ.11ಕ್ಕೆ ಪುತ್ತೂರಿಗೆ ಅಮಿತ್ ಶಾ – ಯಾವ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ?
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k