ವಿಜಯೇಂದ್ರ ಡಮ್ಮಿ ಅಂತ ಬಿಜೆಪಿ ಹೈಕಮಾಂಡ್‌ಗೆ ಮನವರಿಕೆಯಾಗಿದೆ – ಯತ್ನಾಳ್

Public TV
1 Min Read
basanagouda patil yatnal 1

-ವಿಜಯೇಂದ್ರನಿಂದ ಬಿಜೆಪಿ ಉದ್ಧಾರ ಆಗಲ್ಲ ಎಂದ ಶಾಸಕ

ವಿಜಯಪುರ: ವಿಜಯೇಂದ್ರ (BY Vijayendra) ಡಮ್ಮಿ ಅಂತ ಬಿಜೆಪಿ ಹೈಕಮಾಂಡ್‌ಗೆ (High Command) ಮನವರಿಕೆಯಾಗಿದೆ. ಹೀಗಾಗಿ ರಾಜ್ಯಾಧ್ಯಕ್ಷರ ನೇಮಕದಲ್ಲಿ ವಿಳಂಬವಾಗುತ್ತಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ತಿಳಿಸಿದರು.

ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಬಿಜೆಪಿ (BJP) ರಾಜಾಧ್ಯಕ್ಷ ನೇಮಕ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ ಡಮ್ಮಿ ಎಂದು ಹೈಕಮಾಂಡ್‌ಗೆ ಮನವರಿಕೆಯಾಗಿದೆ. ಅದಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೇಮಕಕ್ಕೆ ವಿಳಂಬ ಮಾಡುತ್ತಿದ್ದಾರೆ. ವಿಳಂಬ ಮಾಡುತ್ತಿದ್ದಾರೆ ಎಂದರೆ ವಿಜಯೆಂದ್ರ ಬಿಜೆಪಿ ಅಧ್ಯಕ್ಷನಾಗೋದಿಲ್ಲ ಎಂದರ್ಥ. ಸೋಮಣ್ಣ ಅವರು ಬೇರೆ ಬೇರೆ ಕೆಲಸದ ನಿಮಿತ್ತ ಅಮಿತ್ ಶಾ ಅವರನ್ನು ಭೇಟಿಯಾಗಿರಬಹುದು. ಆದರೆ ಸೋಮಣ್ಣ ಕೂಡಾ ಬಿಜೆಪಿ ರಾಜಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂದರು.ಇದನ್ನೂ ಓದಿ: ರಕ್ತ ಹರಿಯುವ ಕಡೆ ಮಾತುಕತೆ ಪ್ರಸ್ತಾಪವೇ ಬರಲ್ಲ – ಆಪರೇಷನ್ ಸಿಂಧೂರ ಚರ್ಚೆಯಲ್ಲಿ ರಾಜನಾಥ್‌ ಸಿಂಗ್‌ ಘರ್ಜನೆ

ಆ.2ರಂದು ವಿಜಯಪುರಕ್ಕೆ ಬಿಜೆಪಿ ವಿಭಾಗ ಮಟ್ಟದ ಕಾರ್ಯಕ್ರಮಕ್ಕೆ ವಿಜಯೇಂದ್ರ ಅವರು ಭೇಟಿ ನೀಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ನಾನು ಪಕ್ಷ ಬಿಟ್ಟ ಮೇಲೆ ವಿಜಯೆಂದ್ರ ವಿಜಯಪುರಕ್ಕೆ ಬರುತ್ತಿದ್ದಾನೆ. ನಾನು ಬಿಜೆಪಿಯಲ್ಲಿದ್ದಾಗ ವಿಜಯೇಂದ್ರನಿಗೆ ಇಲ್ಲಿ ಬರೋಕೆ ಧೈರ್ಯ ಇರಲಿಲ್ಲ ಎಂದು ಟಾಂಗ್ ಕೊಟ್ಟರು.

ಇನ್ನು ಸಭೆ ಮಾಡಲಿ, ಬಿಡಲಿ, ವಿಜಯೇಂದ್ರನಿಂದ ಬಿಜೆಪಿ ಉದ್ಧಾರ ಆಗಲ್ಲ. ವಿಜಯೇಂದ್ರ, ಯಡಿಯೂರಪ್ಪ ಯುಗ ಮುಗಿದಿದೆ. ಇಲ್ಲಿಗೆ ಬಂದು ಏನು ಮಾಡುತ್ತಾನೆ. ಸುಮ್ಮನೆ ಮಾಧ್ಯಮದವರು ಆತನನ್ನು ಹೈಲೆಟ್ ಮಾಡುತ್ತಿದ್ದಾರೆ ಎಂದರು.

ಸಿಎಂ ಸ್ಥಾನ ತಪ್ಪಿದರ ಬಗ್ಗೆ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಖರ್ಗೆ ಅವರಿಗೆ ಈ ಹಿಂದೆಯೇ ಸಿಎಂ ಸ್ಥಾನ ಸಿಗಬೇಕಿತ್ತು. ಎರಡನೇ ಬಾರಿ ಸಿದ್ದರಾಮಯ್ಯ ಸಿಎಂ ಆಗುವ ಬದಲು ಖರ್ಗೆ ಅವರಿಗೆ ಬಿಟ್ಟುಕೊಡಬೇಕಿತ್ತು. ಈಗಲೂ ಸಿಎಂ ಬದಲಾವಣೆ ಆದ್ರೆ ಖರ್ಗೆ ಅವರನ್ನು ಸಿಎಂ ಮಾಡಿ ಎಂದು ಒತ್ತಾಯಿಸಿದರು.ಇದನ್ನೂ ಓದಿ: ನಾಗರ ಪಂಚಮಿಗೆ ಉತ್ತರ ಕರ್ನಾಟಕದ ಸ್ಪೆಷಲ್‌ ಬೇಯಿಸಿದ ಹೂರಣ ಕಡುಬು ಮಾಡಿ

Share This Article