ಬೆಂಗಳೂರು: ಲೋಕಸಭಾ ಚುನಾವಣೆಗೆ (Lok Sabha Election) ಬಿಜೆಪಿ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಜೆಡಿಎಸ್ (JDS) ಜತೆ ಮೈತ್ರಿಗೆ ಹೈಕಮಾಂಡ್ ರೆಡಿಯಾಗಿದ್ದರೆ ರಾಜ್ಯ ಬಿಜೆಪಿ (BJP) ಇನ್ನೂ ರೆಡಿಯಾಗಿಲ್ವಾ ಎಂಬ ಪ್ರಶ್ನೆ ಎದ್ದಿದೆ.
ರಾಜ್ಯ ನಾಯಕರಲ್ಲಿ ಕೆಲವರಿಗೆ ಮೈತ್ರಿ ಅಗತ್ಯ ಇಲ್ಲ ಎಂಬ ಭಾವನೆ ಇದೆ. ಮೈತ್ರಿಗೆ ಖುದ್ದು ಹೈಕಮಾಂಡ್ ಆಸಕ್ತಿ ತೋರುತ್ತಿರುವುದರಿಂದ ಅಸಮಾಧಾನಿತರು ಮೌನವಾಗಿದ್ದಾರೆ ಎನ್ನಲಾಗುತ್ತಿದೆ.
Advertisement
ಜೆಡಿಎಸ್ ಜತೆಗಿನ ಸ್ನೇಹಕ್ಕೆ ಕೆಲವರು ನಿರಾಸಕ್ತಿ ತೋರುತ್ತಿರುವ ವಿಚಾರ ಬಿಎಸ್ ಯಡಿಯೂರಪ್ಪ (BS Yediyurappa) ವರಿಷ್ಠರ ಗಮನಕ್ಕೆ ತಂದಿರುವ ಸಾಧ್ಯತೆಯಿದೆ. ಹೀಗಾಗಿ ಲೋಕಸಮರಕ್ಕೆ ಮೈತ್ರಿ ವಿಚಾರದಲ್ಲಿ ಹೈಕಮಾಂಡ್ ಲೆಕ್ಕಾಚಾರ ಏನು? ಕೆಲ ರಾಜ್ಯ ನಾಯಕರ ಅಭಿಪ್ರಾಯಕ್ಕೆ ವರಿಷ್ಠರ ಸಂದೇಶ ಏನು ಎನ್ನುವುದೇ ಸದ್ಯದ ಕುತೂಹಲ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ- ಸೇನಾಧಿಕಾರಿಗಳಿಬ್ಬರು ಹುತಾತ್ಮ
Advertisement
Advertisement
ಮತ್ತೊಂದೆಡೆ ಜೆಡಿಎಸ್ ಜೊತೆ ಸ್ನೇಹ ಬೆಳೆಸಿಕೊಂಡು ತನ್ನದೇ ಲೆಕ್ಕಚಾರ ಹಾಕಿ ಈ ಬಾರಿ ಮೈತ್ರಿ ದಾಳ ಉರುಳಿಸಲು ಹೈಕಮಾಂಡ್ (BJP High Command) ಪ್ಲ್ಯಾನ್ ಮಾಡಿಕೊಂಡಿದೆ. ಹಳೇ ಮೈಸೂರು (Old Mysuru) ಭಾಗದಲ್ಲಿ ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಮೈತ್ರಿ ಅನಿವಾರ್ಯತೆಯಿದೆ. ಕೈಪಡೆಗೆ ಮತ ಪ್ರವಾಹ ತಡೆಯಲು ಮೈತ್ರಿಯಿಂದ ಬ್ರೇಕ್ ಹಾಕಲು ಬಿಜೆಪಿ ತಂತ್ರ ರೂಪಿಸಿದೆ.
Advertisement
ಹೈಕಮಾಂಡ್ ಆತುರದ ನಿಲುವಿಗೆ ಕೆಲವು ರಾಜ್ಯ ನಾಯಕರು ಒಳಗೊಳಗೇ ವಿರೋಧ ವ್ಯಕ್ತಪಡಿಸಿದ್ದು, ಮೊನ್ನೆ ನಡೆದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಯಡಿಯೂರಪ್ಪ, ಬೊಮ್ಮಾಯಿ (Basavraj Bommai) ಎದುರೇ ಮೈತ್ರಿ ಅನಗತ್ಯ ಅಂತ ಕೆಲವರು ಅಭಿಪ್ರಾಯಪಟ್ಟಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಕಾರ್ಯಕರ್ತರ ವಲಯದಲ್ಲಿ ಕೆಲವು ಕ್ಷೇತ್ರಗಳನ್ನು ಮೈತ್ರಿಯಿಂದಲೇ ಕೈ ಬಿಟ್ಟು ಹೋಗಲಿವೆ ಅಂತ ಪದಾಧಿಕಾರಿಗಳು ಎಚ್ಚರಿಸಿದ್ದಾರೆ. ಅತ್ತ ಹೈಕಮಾಂಡ್ ಹಠ, ಇತ್ತ ಸ್ಥಳೀಯ ಮುಖಂಡರ ವಿರೋಧ. ಇವರ ಮಧ್ಯೆ ರಾಜ್ಯ ಬಿಜೆಪಿ ನಾಯಕರೇ ಗೊಂದಲದಲ್ಲಿ ಸಿಲುಕಿದ್ದಾರೆ.
ದೆಹಲಿಯಲ್ಲಿರುವ ಯಡಿಯೂರಪ್ಪ ಹೈಕಮಾಂಡ್ ನಾಯಕರಿಗೆ ಮೈತ್ರಿ ಬಗ್ಗೆ ಪಕ್ಷದೊಳಗಿನ ಪರ ವಿರೋಧ ಅಭಿಪ್ರಾಯದ ವಿವರ ಕೊಟ್ಟಿದ್ದಾರೆ.
Web Stories