ಬೆಂಗಳೂರು: ರಾಜ್ಯ ಕಮಲದ ಇಬ್ಬರು ನಾಯಕರಿಗೆ ಅಗ್ನಿಪರೀಕ್ಷೆ ನೀಡಲು ಬಿಜೆಪಿ ಹೈಕಮಾಂಡ್ ಸಿದ್ಧವಾಗಿದೆ. ಇಷ್ಟು ದಿನ ಗ್ರೇಸ್ ಪಡೆಯುತ್ತಿದ್ದ ನಾಯಕರು ಇನ್ಮುಂದೆ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಬೇಕಾಗಿದೆ.
ರಾಜ್ಯ ಸರ್ಕಾರ 100 ದಿನ ಪೂರೈಸಾಯ್ತು, ಇತ್ತ ಅನರ್ಹರ ತೀರ್ಪು ಹತ್ತಿರ ಬಂದೇ ಬಿಡ್ತು. ಜೊತೆಗೆ ಉಪಚುನಾವಣೆ ದಿನಗಳೂ ಕೂಡ ಹತ್ತಿರಕ್ಕೆ ಬಂದು ಬಿಟ್ಟಿದೆ. ಈ ಬೆನ್ನಲ್ಲೇ ಈಗ ಬಿಜೆಪಿ ಹೈಕಮಾಂಡ್ ಕೂಡ ಫುಲ್ ಆಲರ್ಟ್ ಆಗಿದ್ದು, ರಾಜ್ಯ ಬಿಜೆಪಿ ನಾಯಕರಿಗೆ ಪರೀಕ್ಷೆ ನೀಡಲು ಮುಂದಾಗಿದೆ. ಇನ್ನು ಮುಂದೆ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾರ್ಯವೈಖರಿ ಹೇಗಿದೆ? ಅವರು ಹೇಗೆ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ಟೆಸ್ಟ್ ಮಾಡಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.
Advertisement
Advertisement
ಈ ಆಧಾರದ ಮೇಲೆ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್ ಅವರ ಕಾರ್ಯವೈಖರಿ ಪರೀಕ್ಷೆಯ ಮೌಲ್ಯಮಾಪನ ನಡೆಯುತ್ತೆ. ನಾಯಕರ ಪ್ರತಿ ನಿರ್ಧಾರ ಕೈಗೊಳ್ಳುವ ಕಾರ್ಯದ ಬಗ್ಗೆ ಮೌಲ್ಯಮಾಪನ ನಡೆಯಲಿದೆ. ಯಡಿಯೂರಪ್ಪ, ನಳಿನ್ ಕುಮಾರ್ ಅಷ್ಟೇ ಅಲ್ಲ ಮೂವರು ಡಿಸಿಎಂಗಳ ಮೇಲೂ ಹೈಕಮಾಂಡ್ ಕಣ್ಣಿಟ್ಟಿದೆ. ಮೂವರು ಡಿಸಿಎಂಗಳು, ಹಿರಿಯ ಸಚಿವರ ಕಾರ್ಯವೈಖರಿ ಮೇಲೂ ನಿಗಾ ವಹಿಸಲು ಹೈಕಮಾಂಡ್ ಸಜ್ಜಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ರಾಜ್ಯ ಸರ್ಕಾರ 100 ದಿನ ಪೂರೈಸಿದ ಬೆನ್ನಲ್ಲೇ ಹೈಕಮಾಂಡ್ ಹೈ ಟೆಸ್ಟ್ ತೆಗೆದುಕೊಳ್ಳುತ್ತಿದ್ದು, ಇನ್ಮುಂದೆ ಬಿಎಸ್‌ವೈ ಮತ್ತು ಅವರ ತಂಡ ಎಚ್ಚರಿಕೆಯಿಂದ ಇರಬೇಕಾಗಿದೆ. ಪಕ್ಷ ಸಂಘಟನೆಯ ವಿಚಾರದಲ್ಲಿಯೂ ನಳೀನ್ ಕುಮಾರ್ ಫುಲ್ ಮಾರ್ಕ್ಸ್ ತಗೆದುಕೊಳ್ಳಬೇಕು. ಹೆಚ್ಚು ಕಡಿಮೆಯಾದರೆ ನಳಿನ್ ಕುಮಾರ್ ಡೇಂಜರ್ ಝೋನ್‌ಗೆ ಹೋಗ್ತಾರೆ ಎಂದು ತಿಳಿದು ಬಂದಿದೆ.