ನವದೆಹಲಿ: ಹರಿಯಾಣದಲ್ಲಿ (Haryana) ಕಾಂಗ್ರೆಸ್ ಹಿಂದಿಕ್ಕಿ ಬಿಜೆಪಿ (BJP) ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಈ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿದೆ.
ಈ ನಡುವೆ ಲಾಡ್ವಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ (Nayab Singh Saini) ಅವರಿಂದು ಧರ್ಮಶಾಲಾ ಕುರುಕ್ಷೇತ್ರ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಮಾಧ್ಯಗಳೊಂದಿಗೆ ಮಾತನಾಡಿ, ಹರಿಯಾಣದಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಕ್ಫ್ ಆಸ್ತಿ ದೇವರ ಆಸ್ತಿ, ಕಬಳಿಕೆ ಆಗಬಾರದು ರಕ್ಷಣೆ ಮಾಡಬೇಕು; ಸಚಿವ ಜಮೀರ್ ಕರೆ
ಚುನಾವಣೋತ್ತರ ಸಮೀಕ್ಷೆಗಳು ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ಎರಡರಲ್ಲೂ ಕಾಂಗ್ರೆಸ್ ಗೆಲುವನ್ನು ಮುನ್ಸೂಚಿಸಿತ್ತು. ಆದ್ರೆ ಫಲಿತಾಂಶ ಎಕ್ಸಿಟ್ ಪೋಲ್ ಮೀರಿಸಿ ಬರುತ್ತದೆ ಎನ್ನುವ ನಮ್ಮ ನಿರೀಕ್ಷೆ ಸುಳ್ಳಾಗಿಲ್ಲ, ಬಿಜೆಪಿ 3ನೇ ಬಾರಿಗೆ ಅಧಿಕಾರ ಹಿಡಿಯುವುದು ಖಚಿತವಾಗಿದೆ. ನಾವು ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಸ್ಥಾಪಿಸಿದ ರೀತಿಯ ವ್ಯವಸ್ಥೆಯು ಹರಿಯಾಣಕ್ಕೆ ದೀರ್ಘಕಾಲದವರೆಗೆ ಪ್ರಯೋಜನ ತರುತ್ತದೆ. ಈ ಒಳ್ಳೆಯ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಹರಿಯಾಣದಲ್ಲಿ ಬಿಜೆಪಿಗೆ ಮುನ್ನಡೆ:
ಹರ್ಯಾಣದಲ್ಲಿ (Haryana Election Results) ಹಾವು ಏಣಿ ಆಟ ಆರಂಭವಾಗಿದೆ. ಆರಂಭದಲ್ಲಿ ಕಾಂಗ್ರೆಸ್ (Congress) ಮುನ್ನಡೆಯಲ್ಲಿದ್ದರೆ ಈಗ ಬಿಜೆಪಿ (BJP) ಮುನ್ನಡೆ ಸಾಧಿಸಿದೆ. ಬೆಳಗ್ಗೆ 9 ಗಂಟೆ ಟ್ರೆಂಡ್‌ನಲ್ಲಿ ಕಾಂಗೆಸ್ ಮುನ್ನಡೆಯಲ್ಲಿತ್ತು. ಆದರೆ ಬೆಳಗ್ಗೆ 10 ಗಂಟೆಯಿಂದ 11 ಗಂಟೆ ವೇಳೆಗೆ ಬಿಜೆಪಿ ಮುನ್ನಡೆ ಸಾಧಿಸಿದೆ. ಇದನ್ನೂ ಓದಿ: Haryana Results| ಮಾಜಿ ಕುಸ್ತಿಪಟು ವಿನೇಶ್ ಫೋಗಟ್‌ಗೆ ಹಿನ್ನಡೆ
ಸದ್ಯ ಬಿಜೆಪಿ 47 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಕಾಂಗ್ರೆಸ್ 36 ಇತರರು 03 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಐಎನ್ಎಲ್‌ಟಡಿ 2 ಹಾಗೂ ಇತರೇ ಅಭ್ಯರ್ಥಿಗಳು 5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹರ್ಯಾಣದಲ್ಲಿ ಒಟ್ಟು 90 ಕ್ಷೇತ್ರಗಳಿದ್ದು ಬಹುಮತಕ್ಕೆ 46 ಸ್ಥಾನಗಳ ಅಗತ್ಯವಿದೆ.