ಉಡುಪಿ: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಇತಿಹಾಸದಲ್ಲಿಯೇ ಉಡುಪಿಯಲ್ಲಿ ಈ ಬಾರಿ ಬಿಜೆಪಿ ದಾಖಲೆ ನಿರ್ಮಿಸಿದೆ.
ಜಿಲ್ಲೆಯ 5 ಕ್ಷೇತ್ರಗಳಾದ ಬೈಂದೂರು, ಕುಂದಾಪುರ, ಉಡುಪಿ, ಕಾಪು, ಕಾರ್ಕಳದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ. ಈ ಮೂಲಕ ಬಿಜೆಪಿ ಉಡುಪಿಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
Advertisement
2013ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಈ ಬಾರಿ ಗೆಲ್ಲಬಹುದು ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಬಿಜೆಪಿಯ ರಘುಪತಿ ಭಟ್ ಎದುರು ಸೋತಿದ್ದಾರೆ.
Advertisement
ಕ್ಷೇತ್ರ, ಅಭ್ಯರ್ಥಿ ಹೆಸರು ಹಾಗೂ ಪಕ್ಷದ ವಿವರ ಇಲ್ಲಿದೆ:
ಬೈಂದೂರು – ಬಿ.ಎಂ ಸುಕುಮಾರ ಶೆಟ್ಟಿ(ಬಿಜೆಪಿ) – ಗೋಪಾಲ ಪೂಜಾರಿ(ಕಾಂಗ್ರೆಸ್)
ಕುಂದಾಪುರ – ಹಾಲಾಡಿ ಶ್ರೀನಿವಾಸ ಶೆಟ್ಟಿ(ಬಿಜೆಪಿ) – ರಾಕೇಶ್ ಮಲ್ಲಿ(ಕಾಂಗ್ರೆಸ್)
ಉಡುಪಿ – ರಘುಪತಿ ಭಟ್(ಬಿಜೆಪಿ) – ಪ್ರಮೋದ್ ಮಧ್ವರಾಜ್(ಕಾಂಗ್ರೆಸ್)
ಕಾಪು – ಲಾಲಾಜಿ ಮೆಂಡನ್(ಬಿಜೆಪಿ) – ವಿನಯ್ ಕುಮಾರ್ ಸೊರಕೆ(ಕಾಂಗ್ರೆಸ್)
ಕಾರ್ಕಳ – ಸುನೀಲ್ ಕುಮಾರ್(ಬಿಜೆಪಿ) – ಗೋಪಾಲ ಬಂಡಾರಿ(ಕಾಂಗ್ರೆಸ್)