ಚಿತ್ರದುರ್ಗ: ರಾಮನನ್ನು (Lord Ram) ಬೀದಿ ಬೀದಿಯಲ್ಲಿ ಬಿಜೆಪಿಯವರು (BJP) ಆಟ ಆಡಿಸಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ವ್ಯಂಗ್ಯವಾಡಿದ್ದಾರೆ.
ಅಯೋಧ್ಯೆಯ (Ayodhya) ರಾಮಮಂದಿರ (Ram Mandir) ಉದ್ಘಾಟನೆ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಗೆ ನಿಜವಾಗಲೂ ರಾಮನ ಶಾಪ ತಟ್ಟಲಿದೆ. ರಾಮ ನಮ್ಮ ನಿಮ್ಮ ಹೃದಯದಲ್ಲಿದ್ದಾನೆ. ನಮ್ಮ ಹಣೆಬರಹದಲ್ಲಿ ಯಾವಾಗ ಬರೆದಿರುತ್ತದೆ ಆಗ ಅಯೋಧ್ಯೆಗೆ ಹೋಗಿ ರಾಮನ ದರ್ಶನ ಮಾಡುತ್ತೇವೆ. ಅಯೋಧ್ಯೆಗೆ ಹೋಗಿರದ ಬಿಜೆಪಿಯವರು ರಾಮದ್ರೋಹಿಗಳಾ? ದೇಶದ ದೊಡ್ಡ ದೊಡ್ಡ ಮನುಷ್ಯರನ್ನು ಬ್ಯಾರಿಕೇಡ್ ಬಳಿ ನಿಲ್ಲಿಸಿದ್ದಾರೆ. ಅಲ್ಲಿನ ಸ್ಥಿತಿ ನೆನೆದು ಕೈಮುಗಿದು ನಮಃ ಶಿವಾಯ ಅಂತಾ ಹೇಳಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ನನಗೆ ರಾಮನ ಬಗ್ಗೆ ಭಕ್ತಿ ಇಲ್ಲ, ಅಯೋಧ್ಯೆಗೆ ಹೋಗಲ್ಲ: ಪ್ರಿಯಾಂಕ್ ಖರ್ಗೆ
Advertisement
Advertisement
ಇದೇ ವೇಳೆ ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ಅಡ್ಡಿ ಕುರಿತು ಮಾತನಾಡಿದ ಅವರು, ಕಿತಾಪತಿ ಮಾಡುವುದರಲ್ಲಿ ಬಿಜೆಪಿ ನಂಬರ್ ಒನ್. ಒಳ್ಳೆಯದು ನಡೆದಿದೆ ಎಂದಾಗ ಹೀಗೆ ಮಾಡುವುದು ಬಿಜೆಪಿಗೆ ಹೊಸದಲ್ಲ. ಗಾಂಧಿ ಕುಟುಂಬ ತ್ಯಾಗ, ಬಲಿದಾನ ಮಾಡಿದೆ ರಾಹುಲ್ ಗಾಂಧಿ ಯಾತ್ರೆ ಮೇಲೆ ಕಲ್ಲು ತೂರಾಟದಿಂದ ಅವರ ಕೆಟ್ಟ ಬುದ್ಧಿ ತೋರಿಸಿದ್ದಾರೆ. ಅಧಿಕಾರದಲ್ಲಿ ಇರುವಾಗ ತುಂಬಾ ಜವಾಬ್ದಾರಿ ಇರಬೇಕು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಸುಭಾಷ್ ಚಂದ್ರ ಬೋಸ್ ಅಪ್ರತಿಮ ದೇಶಪ್ರೇಮಿ: ಸಿದ್ದರಾಮಯ್ಯ
Advertisement
ಬಿಜೆಪಿ ಕುರಿತು ಪ್ರತಿಕ್ರಿಯಿಸಿ, ಬೇರೆ ಧರ್ಮಕ್ಕೆ ಗೌರವ ಕೊಡುವವರು ನಿಜವಾದ ಹಿಂದೂಗಳು. ಹಿಂದೂ ಎಂದು ಹೇಳಿಕೊಳ್ಳುವುದು ಬೇಡ. ಅದು ನಮ್ಮ ಬ್ಲಡ್, ನಮ್ಮ ಮಾತಲ್ಲಿದೆ. ಧರ್ಮದ ಹೆಸರಲ್ಲಿ ರಾಜಕಾರಣ ಒಳ್ಳೆಯ ಪದ್ಧತಿ ಅಲ್ಲ. ಅಂಬೇಡ್ಕರ್ ಅವರ ಸಂವಿಧಾನವೇ ನಮ್ಮ ದೇಶದ ದೇವರು. ಮನೆತನಕ್ಕೆ ಮತ್ತು ಪಕ್ಷಕ್ಕೆ ದೇವರನ್ನು ಅಡ ಇಡಬಾರದು. ನೀವು ರಾಮನ ಭಕ್ತರು ಎಂದರೆ ಬೇರೆಯವರು ವಿರೋಧವೇ? ನಾವು ಎಲ್ಲಾ ಧರ್ಮ ಮತ್ತು ಎಲ್ಲಾ ದೇವರ ಭಕ್ತರು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಕೇಳಲು ಕಷ್ಟ: ಸಿದ್ದರಾಮಯ್ಯ
Advertisement
ವಿಪಕ್ಷದಲ್ಲಿದ್ದಾಗ ಏನು ಬೇಕಾದರೂ ನಾವು ಪ್ರಶ್ನೆ ಮಾಡಬಹುದು. ವಿರೋಧ ಪಕ್ಷಗಳು ಹತ್ತಿಕ್ಕುವುದನ್ನು ನಾವು ವಿರೋಧಿಸುತ್ತೇವೆ. ನಾನು ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷನಾಗಿದ್ದೆ. ಗ್ಯಾರಂಟಿ ಯೋಜನೆ ಬರುವಲ್ಲಿ ನಾನೂ ಕಾರಣೀಕರ್ತ. ಬಹುತೇಕ ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪಿದ್ದು, ಆದರಲ್ಲಿ ಬಿಜೆಪಿಗೆ ಮತ ಹಾಕಿದವರಿಗೂ ಸಹ ಗ್ಯಾರಂಟಿ ಯೋಜನೆ ತಲುಪುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಿಜವಾದ ಬ್ರಾಹ್ಮಣರು, ಸ್ವಾಮೀಜಿಗಳು ಮೋದಿಯನ್ನು ಗರ್ಭಗುಡಿಗೆ ಬಿಡಬಾರದಿತ್ತು: ವೀರಪ್ಪ ಮೊಯ್ಲಿ