ಮಡಿಕೇರಿ: ಸಿ.ಟಿ ರವಿ, ಈಶ್ವರಪ್ಪ, ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ರಾಜ್ಯದಲ್ಲಿ ಬೆಂಕಿ ಹಚ್ಚುವವರು. ಇವರೆಲ್ಲರನ್ನೂ ಬೆಂಕಿ ಹಚ್ಚಿಸಲೆಂದೇ ಬಿಜೆಪಿ(BJP) ಇಟ್ಟುಕೊಂಡಿದೆ ಎಂದು ಕಾಂಗ್ರೆಸ್(Congress) ವಕ್ತಾರ ಎಂ ಲಕ್ಷ್ಮಣ್(M Lakshman) ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಿದ್ದರಾಮಯ್ಯನವರಿಗೆ ಕಚ್ಚೆಹರುಕ ಎಂದು ಹೇಳಿಕೆ ನೀಡಿದ್ದ ಹಿನ್ನೆಲೆ ಕಿಡಿ ಕಾರಿದ ಲಕ್ಷ್ಮಣ್, ಸಿ.ಟಿ ರವಿ ಮಾತಾಡುವಾಗ ಹಲ್ಲು ಹಿಡಿದು ಮಾತನಾಡಬೇಕು ಎಂದು ಆಕ್ರೋಶ ಹೋರ ಹಾಕಿದರು. ಇದನ್ನೂ ಓದಿ: ಕೇಂದ್ರ, ರಾಜ್ಯ ಸರ್ಕಾರಗಳು ಕನ್ನಡದ ಕತ್ತು ಹಿಸುಕುವ ಕೆಲಸ ಮಾಡುತ್ತಿವೆ: ಕುಮಾರಸ್ವಾಮಿ
ಚಿಕ್ಕಮಗಳೂರಿನಲ್ಲಿ ಸುಮಾರು 4-5 ಬಾರಿ ಆಯ್ಕೆಯಾಗಿ ಸಿ.ಟಿ ರವಿ ಅವರು ತಮ್ಮ ಭಾವ ಸುಂದರೇಶನ್ ಅವರ ಹೆಸರಿನಲ್ಲಿ 800 ಕೋಟಿ ರೂ. ಆಸ್ತಿ ಮಾಡಿದ್ದೀರಿ. ಚಿಕ್ಕಮಗಳೂರಿನಲ್ಲಿ ಒಂದು ಸಣ್ಣ ಚರಂಡಿ ಮಾಡುವುದಾದರೂ ನಿಮ್ಮ ಭಾವನ ಹೆಸರಿನಲ್ಲಿ ಗುತ್ತಿಗೆ ಮಾಡುತ್ತಿದ್ದೀರಿ. 800 ಕೋಟಿ ರೂ. ಆಸ್ತಿ ಮಾಡಿರುವ ಬಗ್ಗೆ ನನ್ನ ಬಳಿ ದಾಖಲೆ ಇವೆ. ನಾನು ಮುಂದಿನ ದಿನಗಳಲ್ಲಿ ನಿಮ್ಮ ಬಂಡವಾಳ ಬಿಚ್ಚಿಡುತ್ತೇನೆ ಎಂದು ಲಕ್ಷಣ್ ಟಾಂಗ್ ನೀಡಿದರು. ಇದನ್ನೂ ಓದಿ: ಇಷ್ಟೊತ್ತಿಗೆ ಹಗ್ಗ ಹಾಕಿ ನಮ್ಮನ್ನು ಗಲ್ಲಿಗೇರಿಸಬಹುದಿತ್ತಲ್ಲ: ನಳಿನ್‍ಗೆ ಡಿಕೆಶಿ ತಿರುಗೇಟು