ಬೀದರ್: ಅಂದು ಬೆಂಗಳೂರಿನಲ್ಲಿ ವಕ್ಫ್ ಆಸ್ತಿ ಭೂ ಕಬಳಿಕೆ ಹೆಚ್ಚಾಗಿತ್ತು ಹೀಗಾಗಿ ಬಿಜೆಪಿಯಿಂದ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಆಗಿನ ವಿಧಾನ ಮಂಡಳ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ (Kumar Bangarappa) ಹೇಳಿದರು.
ಗಡಿ ಜಿಲ್ಲೆಯಲ್ಲಿ ಬಿಜೆಪಿ (BJP) ರೆಬಲ್ಸ್ ಟೀಂ ಇಂದಿನಿಂದ (ನ.25) ವಕ್ಫ್ ವಿರುದ್ಧ ಹೋರಾಟ ಆರಂಭಿಸಿದೆ. ವಕ್ಫ್ ಹಠಾವೋ ಭಾರತ್ ದೇಶ್ ಬಚಾವೋ’ ಘೋಷವಾಕ್ಯದಡಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ತಂಡ ಹೋರಾಟ ನಡೆಸಿದೆ. ಈ ವೇಳೆ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು.ಇದನ್ನೂ ಓದಿ: ಸುತ್ತಿಗೆಯಿಂದ ತಲೆಗೆ ಹೊಡೆದು ಮಗನಿಂದಲೇ ತಂದೆಯ ಹತ್ಯೆ
Advertisement
Advertisement
`ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಅವರು, ಮೊದಲು ಬೆಂಗಳೂರಿನಲ್ಲಿ ವಕ್ಫ್ ಆಸ್ತಿ ಭೂ ಕಬಳಿಕೆ ಹೆಚ್ಚಾಗಿತ್ತು ಹೀಗಾಗಿ ಬಿಜೆಪಿ ಸರ್ಕಾರ ಹೆಚ್ಚು ನೋಟಿಸ್‌ಗಳನ್ನು ನೀಡಿದೆ. ಅದರಲ್ಲಿಯೂ ವಾಣಿಜ್ಯ ಉದ್ದೇಶಕ್ಕಾಗಿ, ರಸ್ತೆಗಾಗಿ, ಹೋಟೆಲ್ ನಿರ್ಮಾಣ ಮಾಡಲು ವಕ್ಫ್ ಆಸ್ತಿಯನ್ನು ಕಬಳಿಕೆ ಮಾಡಿದವರಿಗೆ ನೋಟಿಸ್ ನೀಡಲಾಗಿದೆ. ಇನ್ನೂ ಕಾಂಗ್ರೆಸ್ ಸಮಯದಲ್ಲಿ ಅವರು ನೋಟಿಸ್ ನೀಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಈ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಜಿ.ಎಂ ಸಿದ್ದೇಶ್ವರ್, ಹೊಳಲ್ಕೆರೆ ಚಂದ್ರಪ್ಪ ಸೇರಿ ಹಲವರು ಹೋರಾಟದಲ್ಲಿ ಭಾಗಿಯಾಗಿದ್ದರು.ಇದನ್ನೂ ಓದಿ: ಸಂಭಲ್ ಹಿಂಸಾಚಾರ ನಡೆದಾಗ ನಾನು ಬೆಂಗಳೂರಿನಲ್ಲಿದ್ದೆ: ಎಸ್‌ಪಿ ಸಂಸದನ ಸ್ಪಷ್ಟನೆ