ತುಮಕೂರು: ಪುಟಗೋಸಿಗೆ ಬಹಳ ಮರ್ಯಾದೆ ಕಾಪಾಡುವ ವಸ್ತುವಾಗಿದ್ದು, ಬಿಜೆಪಿಯಿಂದ ಅಗೌರವವಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಜೆಡಿಎಸ್ ಪಕ್ಷವನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಪುಟಗೋಸಿಗೆ ಹೋಲಿಕೆ ಮಾಡಿ ಲೇವಡಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಂಸ್ಕೃತಿಯನ್ನ ಎತ್ತಿಹಿಡಿಯುವ ಪಕ್ಷದ ಬಾಯಿಯಲ್ಲಿ ಪುಟಗೋಸಿ ಪದ ಬರಬಾರದು. ಪುಟಗೋಸಿ ಕೆಟ್ಟದಲ್ಲ ಅವರ ಬಾಯಿಯಿಂದ ಬಂದಂತಹ ರೀತಿ ಕೆಟ್ಟದ್ದು ಎಂದು ಕಿಡಿಕಾರಿದರು.
Advertisement
ಅಂಗಾಂಗ ಮುಚ್ಚಿಕೊಳ್ಳಲು ಪುಟಗೋಸಿ ಮಹತ್ವದ ಬಗ್ಗೆ ಈಗಾಗಲೇ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಪುಟಗೋಸಿ, ಉಡುದಾರ, ಲಂಗೋಟಿ, ತುಂಡುಬಟ್ಟೆಗೆ ಅದರದ್ದೆ ಆದ ಅರ್ಥವಿದೆ ಎಂದರು. ಇದನ್ನೂ ಓದಿ: ಅನಂತಕುಮಾರ್ ಹೆಗಡೆಗೆ ಪುಟಗೋಸಿ ರವಾನಿಸಿದ ಜೆಡಿಎಸ್ ಕಾರ್ಯಕರ್ತರು
Advertisement
Advertisement
ಪುಟಗೋಸಿಗೆ ಇವರು ಅಗೌರವ ತಂದಿದ್ದಾರೆ. ಅದು ಬಹಳ ಮರ್ಯಾದೆ ಕಾಪಾಡುವ ವಸ್ತು. ಬಿಜೆಪಿಯಿಂದ ಪುಟಗೋಸಿಗೆ ಅಗೌರವವಾಗಿದೆ. ಲಂಗೋಟಿ ಬಲು ಒಳ್ಳೇಯದಣ್ಣ ಅಂಗಾಂಗ ಮುಚ್ಚಲು ಲಂಗೋಟಿ ಬೇಕಣ್ಣ ಎಂದು ದಾಸರ ಪದ ಹಾಡಿ ಮುಖ್ಯಮಂತ್ರಿ ಚಂದ್ರು ಹಾಡಿದರು.
Advertisement
ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಪ್ಪ ಪರ ಚುನಾವಣಾ ಪ್ರಚಾರಕ್ಕೆ ತುಮಕೂರಿಗೆ ಆಗಮಿಸಿದ್ದ ವೇಳೆ ಮುಖ್ಯಮಂತ್ರಿ ಚಂದ್ರು ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದರು.