ನವದೆಹಲಿ: ಜೂನ್ 10ರಂದು ರಾಜ್ಯಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಮಧ್ಯೆ ಬಿಜೆಪಿ ಆಯಾ ರಾಜ್ಯಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಿದೆ.
ಕರ್ನಾಟಕದ ಉಸ್ತುವಾರಿಯಾಗಿ ಕೇಂದ್ರ ಸಚಿವ ಕೆ.ಕಿಶನ್ ರೆಡ್ಡಿ ಅವರನ್ನು ನೇಮಿಸಲಾಗಿದೆ. ರಾಜಸ್ಥಾನಕ್ಕೆ ನರೇಂದ್ರ ಸಿಂಗ್ ತೋಮರ್, ಹರಿಯಾಣಕ್ಕೆ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಮಹಾರಾಷ್ಟ್ರ ಉಸ್ತುವಾರಿಯಾಗಿ ಅಶ್ವಿನಿ ವೈಷ್ಣವ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
Advertisement
BJP has appointed Narendra Singh Tomar as in charge of Rajya Sabha elections for Rajasthan, Gajendra Singh Shekhawat for Haryana, G Kishan Reddy for Karnataka, and Ashwini Vaishnaw for Maharashtra. pic.twitter.com/c00hbuWG1B
— ANI (@ANI) June 1, 2022
Advertisement
ಚುನಾವಣೆಯ ದಿನ ಹತ್ತಿರವಾಗುತ್ತಿದ್ದಂತೆಯೇ ಶಾಸಕರ ಕುದುರೆ ವ್ಯಾಪಾರದ ಭೀತಿ ಎದುರಾಗಿದೆ. ಹರಿಯಾಣದಲ್ಲಿ ಕಾಂಗ್ರೆಸ್ ತನ್ನ ಶಾಸಕರನ್ನು ರೆಸಾರ್ಟ್‍ಗೆ ಕಳುಹಿಸಲು ಮುಂದಾಗಿದೆ. ಛತ್ತೀಸ್ ಗಢದಲ್ಲಿ ಈಗಾಗಲೇ ರೂಮ್‍ಗಳು ಸಹ ಬುಕ್ ಆಗಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ನಮಗೆ ಬೆಂಬಲ ನೀಡಿ – ಸಿದ್ದು ಬಳಿ JDS ನಾಯಕರ ಮನವಿ
Advertisement
Advertisement
ಜೂ.10ರಂದು ನಡೆಯುವ ರಾಜ್ಯಸಭೆ ಚುನಾವಣೆಗೆ ಹರಿಯಾಣದಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಕೇನ್ ಸ್ಪರ್ಧಿಸಿದ್ದಾರೆ. ಪಕ್ಷವು ರಾಜ್ಯದ ಹೊರಗಿನವರನ್ನು ಕಣಕ್ಕಿಳಿಸಿರುವ ಕಾರಣ ಅತೃಪ್ತಿ ಉಂಟಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಕುದುರೆ ವ್ಯಾಪಾರದ ಆತಂಕವೂ ಕಾಂಗ್ರೆಸ್‍ಗೆ ಕಾಡುತ್ತಿದೆ. ಹೀಗಾಗಿ ಗುರುವಾರ ಛತ್ತೀಸ್‍ಗಢದ ರೆಸಾರ್ಟ್ ನಲ್ಲಿ ರೂಮ್ ಬುಕ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.