ಬಿಜೆಪಿ ತನ್ನ ಬೊಕ್ಕಸ ತುಂಬಲು ಬಡವರ ಜೇಬಿಗೆ ಕತ್ತರಿ ಹಾಕ್ತಿದೆ: ಚರಣ್ ಸಿಂಗ್ ಸಪ್ರಾ

Public TV
1 Min Read
Charan Singh Sapra 1

ಡೆಹರಾಡೂನ್: ಕೇಂದ್ರ ಮತ್ತು ಉತ್ತರಾಖಂಡದ ಬಿಜೆಪಿ ಸರ್ಕಾರಗಳು ತಮ್ಮ ಬೊಕ್ಕಸವನ್ನು ತುಂಬಿಸಿಕೊಳ್ಳಲು ಬಡವರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವಕ್ತಾರ ಚರಣ್ ಸಿಂಗ್ ಸಪ್ರಾ ಆರೋಪಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಮತ್ತು ಎಲ್‍ಪಿಜಿ ಸಿಲಿಂಡರ್‌ಗಳ ಜೊತೆಗೆ ಬೇಳೆಕಾಳುಗಳು ಮತ್ತು ಖಾದ್ಯ ತೈಲದಂತಹ ಅಗತ್ಯ ವಸ್ತುಗಳ ಬೆಲೆಗಳು ಹಿಂದೆಂದೂ ಕಾಣದ ರೀತಿಯಲ್ಲಿ ಏರಿಕೆಯಾಗಿದೆ. ಹಣದುಬ್ಬರವನ್ನು ತೊಲಗಿಸಬೇಕಾದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವಂತೆ ಜನರಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: Economic Survey 2022: ಹೊಸ ಹಣಕಾಸು ವರ್ಷಕ್ಕೆ ಶೇ.8-8.5 ಬೆಳವಣಿಗೆ ನಿರೀಕ್ಷೆ

BJP Flag Final 6

ಮೋದಿ ಸರ್ಕಾರ ಬಡವರನ್ನು ಬಡವರನ್ನಾಗಿಸಿ ಮತ್ತು ಶ್ರೀಮಂತರನ್ನು ಶ್ರೀಮಂತರನ್ನಾಗಿ ಮಾಡುವ ನೀತಿಯನ್ನು ಅನುಸರಿಸುತ್ತಿದೆ. ಎಲ್ಲೆಲ್ಲಿ ಡಬಲ್ ಇಂಜಿನ್ ಸರ್ಕಾರವಿದೆಯೋ ಅಲ್ಲಿ ಅಂಬಾನಿ ಮತ್ತು ಅದಾನಿಗಳು ಮಾತ್ರ ಲಾಭ ಪಡೆಯುತ್ತಿದ್ದಾರೆ. ಬಿಜೆಪಿ ಸರ್ಕಾರಗಳು ತಮ್ಮ ಬೊಕ್ಕಸವನ್ನು ತುಂಬಿಸಿಕೊಳ್ಳಲು ಬಡವರ ಜೇಬಿಗೆ ಕತ್ತರಿ ಹಾಕುತ್ತಿವೆ ಎಂದು ಆರೋಪಿಸಿದ್ದಾರೆ.

NARENDRA MODI

ಉತ್ತರಾಖಂಡದಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿಗಳ ಬದಲಾವಣೆಯು ಅವರ ವೈಫಲ್ಯಗಳನ್ನು ಮುಚ್ಚಿಹಾಕಿದೆ. ಬಿಜೆಪಿ ಏನನ್ನೂ ಮಾಡಿಲ್ಲ. ಅದು ಮುಖ್ಯಮಂತ್ರಿಗಳನ್ನು ಅಥವಾ ಸ್ಥಳಗಳ ಹೆಸರನ್ನು ಮಾತ್ರ ಬದಲಾಯಿಸುತ್ತದೆ ಎಂದಿದ್ದಾರೆ. ಅಲ್ಲದೇ ಕೋವಿಡ್ ಪರೀಕ್ಷಾ ಹಗರಣ ನಡೆದ ದೇಶದ ಏಕೈಕ ರಾಜ್ಯ ಉತ್ತರಾಖಂಡವಾಗಿದೆ. ಫೆ.14ರಂದು ರಾಜ್ಯದಲ್ಲಿ ಮತದಾನ ನಡೆದಾಗ ಬಿಜೆಪಿಯ ದುರಹಂಕಾರಕ್ಕೆ ಬ್ರೇಕ್ ಬೀಳಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದೇ ವೇಳೆ ಹಲ್ದ್ವಾನಿ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಮತ್ತು ಕಳೆದ ವರ್ಷ ನಿಧನರಾದ ಪಕ್ಷದ ಹಿರಿಯ ನಾಯಕಿ ಇಂದಿರಾ ಹೃದಯೇಶ್ ಅವರ ಪುತ್ರ ಸುಮಿತ್ ಹೃದಯೇಶ್ ಅವರಿಗೆ ಮತ ನೀಡುವಂತೆ ಜನರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರೈತರು ದೀರ್ಘ ಹೋರಾಟಕ್ಕೆ ಸಿದ್ಧರಾಗಿ: ರಾಕೇಶ್ ಟಿಕಾಯತ್

Share This Article
Leave a Comment

Leave a Reply

Your email address will not be published. Required fields are marked *