ಪಣಜಿ: ಗೋವಾ ಬಿಜೆಪಿ ಸರ್ಕಾರವು ಹಿರಿಯ ಕಾಂಗ್ರೆಸ್ ಶಾಸಕ ಪ್ರತಾಪ್ ಸಿಂಗ್ ರಾಣೆ ಅವರಿಗೆ ಕ್ಯಾಬಿನೆಟ್ ಸಚಿವ ಸ್ಥಾನವನ್ನು ಖಾಯಂಗೊಳಿಸಿದೆ. 87 ವರ್ಷದ ಪ್ರತಾಪ್ ಸಿಂಗ್ ರಾಣೆ ಅವರು ಸಾಕಷ್ಟು ವರ್ಷಗಳ ಕಾಲ ಗೋವಾದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರತಾಪ್‍ಸಿಂಹ ರಾಣೆ ಅವರ ಪುತ್ರ ವಿಶ್ವಜಿತ್ ಬಿಜೆಪಿಯಲ್ಲಿದ್ದು, ಪ್ರಸ್ತುತ ಗೋವಾದ ಆರೋಗ್ಯ ಸಚಿವರಾಗಿದ್ದಾರೆ. 2017 ರ ವಿಧಾನಸಭಾ ಚುನಾವಣೆಯ ನಂತರ ವಿಶ್ವಜಿತ್ ಕಾಂಗ್ರೆಸ್‍ನಿಂದ ಬಿಜೆಪಿಗೆ ಸೇರ್ಪಡೆಯಾದರು. ಪ್ರತಾಪ್ ಸಿಂಗ್ ರಾಣೆ ಅವರು ಇಲ್ಲಿಯವರೆಗೂ ಹಲವಾರು ಖಾತೆಗಳನ್ನು ನಿಭಾಯಿಸಿದ್ದು, ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ
Advertisement
You are an inspiration baba and I will always look upto you. My heartiest congratulations to you for this well deserved recognition. Your service in public life will always be treasured. pic.twitter.com/zZln8I6Wpj
— VishwajitRane (@visrane) January 6, 2022
Advertisement
ಈ ಕುರಿತಂತೆ ಪ್ರಮೋದ್ ಸಾವಂತ್, ನಮ್ಮ ಸರ್ಕಾರವು ಗೋವಾ ರಾಜ್ಯಕ್ಕೆ ಉತ್ತಮ ಸೇವೆಗಳನ್ನಿ ಸಲ್ಲಿಸಿರುವ ಹಿರಿಯ ಶಾಸಕರಾದ ಪ್ರತಾಪ್‍ಸಿಂಗ್ ರಾಣೆ ಅವರಿಗೆ ಖಾಯಂ ಕ್ಯಾಬಿನೆಟ್ ಸ್ಥಾನಮಾನವನ್ನು ನೀಡಲು ನಿರ್ಧರಿಸಿದೆ. ಗೋವಾ ವಿಧಾನಸಭೆಯ ಮುಖ್ಯಮಂತ್ರಿ ಮತ್ತು ಸ್ಪೀಕರ್ ಆಗಿ ಅವರು ರಾಜ್ಯದ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
Our Government has decided to grant lifelong Cabinet status to the senior most legislator, Shri Pratapsingh Rane ji, for his great service to the State of Goa. He has held the topmost positions in the state as the Chief Minister and Speaker of Goa Legislative Assembly. 1/2 pic.twitter.com/K3qKbQ2vne
— Dr. Pramod Sawant (@DrPramodPSawant) January 6, 2022
Advertisement
ಇತ್ತೀಚೆಗಷ್ಟೇ ಪ್ರತಾಪ್ ಸಿಂಗ್ ರಾಣೆ ಮತ್ತು ಅವರ ಮಗ ವಿಶ್ವಜಿತ್ ಪೊರಿಯಮ್ ವಿಧಾನಸಭಾ ಕ್ಷೇತ್ರದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ತನ್ನ ತಂದೆಯನ್ನು 11 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸುತ್ತೇನೆ ಎಂದು ವಿಶ್ವಜಿತ್ ಸವಾಲು ಹಾಕಿದ್ದಾರೆ. ಜೊತೆಗೆ ವಿಶ್ವಜಿತ್ ಅವರು ತಮ್ಮ ತಂದೆ ಪ್ರತಾಪ್ ಸಿಂಗ್ ರಾಣೆ ಅವರ ಕೆಲಸವನ್ನು ಗುರುತಿಸಿದ ಗೋವಾ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ