ಚಾಮರಾಜನಗರ: ಬಿಜೆಪಿ ಬಳಿ ಯಾವುದೇ ಅಸ್ತ್ರ ಇಲ್ಲದೆ ಮತ್ತೆ ಹಿಜಬ್ ಸಂಘರ್ಷ ಹುಟ್ಟು ಹಾಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಆರೋಪಿಸಿದರು.
ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಆಡಳಿತವಿದೆ. ಜನರಲ್ಲಿ ಸಾಮರಸ್ಯ ಮೂಡಿಸುವುದು ಸರ್ಕಾರದ ಕರ್ತವ್ಯವಾಗಿದೆ. ಕಾನೂನು ಸುವ್ಯವಸ್ಥೆ ಸರಿಯಾಗಿ ಕಾಪಾಡಬೇಕು. ಧರ್ಮ-ಧರ್ಮಗಳ ನಡುವೆ ಕಂದಕ ಮೂಡಿಸಬಾರದು. ಎಂಇಎಸ್ ಪುಂಡಾಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪುಡಾಂಟಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಕನ್ನಡಿಗರ ರಕ್ಷಣೆ ಸರ್ಕಾರದ ಜವಾಬ್ದಾರಿ. ಈ ಸರ್ಕಾರವೇನು ಮಲಗಿದಿಯಾ? ಗೃಹ ಸಚಿವರು ಏನ್ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರೋಮಿಯೋನ ಭಾವನೆಗಳ ಕಥನ – ಡೈಲಾಗ್‍ನಲ್ಲಿ ಕಾಮಿಡಿ ಹೂರಣ
ಕರ್ನಾಟಕದಲ್ಲಿ ಕನ್ನಡಿಗರ ರಕ್ಷಣೆ ಇಲ್ಲ ಅಂದ್ರೆ ಹೇಗೆ? ಯಾರೂ ಗಲಾಟೆ ಮಾಡ್ತಾರೋ ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಐಟಿ, ಇಡಿ, ಸಿಬಿಐಗಳು ಬಿಜೆಪಿಯ ಅಂಗಸಂಸ್ಥೆಗಳಾಗಿದ್ದು, ಇವುಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ಸದೆ ಬಡಿಯುವ ಕೆಲಸ ಆಗುತ್ತಿದೆ ಎಂದು ಕಿಡಿಕಾರಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದನ್ನೆಲ್ಲ ಕಾನೂನಾತ್ಮಕವಾಗಿ ಎದುರಿಸುತ್ತಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಹುದ್ದೆಗೆ 2,500 ಕೋಟಿ ರೂ. ಕೊಡಬೇಕು. ಈಗಿನ ಮಂತ್ರಿಮಂಡಲದಲ್ಲಿ ಮಂತ್ರಿಯೊಬ್ಬರು 100 ಕೋಟಿ ರೂ. ಕೊಟ್ಟಿದ್ದಾರೆ. ಅಂದ್ರು ಮೊದಲು ಅವರಿಗೆ ನೋಟಿಸ್ ಕೊಡಬೇಕಿತ್ತು, ತನಿಖೆ ಮಾಡಬೇಕಿತ್ತು. ಈ ಬಗ್ಗೆ ಮಾತ್ರ ಯಾರೂ ಚಕಾರ ತೆಗೆಯುವುದಿಲ್ಲ. ಪ್ರಿಯಾಂಕಾ ಖರ್ಗೆ ಪಿಎಸ್‍ಐ ಪರೀಕ್ಷೆ ಅಕ್ರಮ ಬಯಲಿಗೆಳೆದರು ಅಂತ ಅವರಿಗೆ ನೋಟೀಸ್ ಕೊಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸ್ಕಿಡ್ ಆಗಿ ಕಮರಿಗೆ ಬಿದ್ದ ಸೈನಿಕರ ವಾಹನ: ಮೃತಪಟ್ಟ 7 ಯೋಧರು ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್‍ಗೆ ಸಪೋರ್ಟ್ ಮಾಡಿದವರ ಮನೆ ಮೇಲೆ ದಾಳಿ ಮಾಡ್ತಾರೆ. ಚುನಾವಣೆಯಲ್ಲಿ ಅವರನ್ನು ಬಗ್ಗು ಬಡಿಯುವ ಕೆಲಸವಾಯ್ತು. ಬಿಜೆಪಿ, ವಿರೋಧ ಪಕ್ಷದವರನ್ನ ಗುರಿಯಾಗಿಸಿಕೊಂಡು ಈ ರೀತಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಹೀಗೆಲ್ಲ ಮಾಡಿರಲಿಲ್ಲ ಇದೊಂದು ದೊಡ್ಡ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದರು.