ಬೆಂಗಳೂರು: ದಿವ್ಯಾ ಹಾಗರಗಿ ಬಿಜೆಪಿಯ ಸಕ್ರಿಯ ಕಾರ್ಯಕರ್ತೆ ಮತ್ತು ಮುಖಂಡರಾಗಿದ್ದಾರೆ. ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಹಾಗರಗಿ ಜೊತೆ ಇಡೀ ಸರ್ಕಾರವೇ ಶಾಮೀಲಾಗಿ ದಂಧೆ ನಡೆಸಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
1
ಅಕ್ರಮ 545 PSI ನೇಮಕಾತಿಯ ಕಿಂಗ್‌ಪಿನ್ ದಿವ್ಯಾ ಹಾಗರಗಿಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಅರಚಿಕೊಳ್ಳುತ್ತಿರುವ @BJP4Karnataka ಯವರಿಗೆ ಕೆಲ ಪ್ರಶ್ನೆಗಳು.
1) ದಿವ್ಯಾ ಹಾಗರಗಿ ಕುಟುಂಬಕ್ಕೂ @JnanendraAraga ರ ನಡುವೆ ಇರುವ ಲಿಂಕ್ ಏನು?
2) ದಿವ್ಯಾ ನಿವಾಸಕ್ಕೆ ಗೃಹ ಸಚಿವರು ಯಾವ ಡೀಲ್ ಕುದುರಿಸಲು ಭೇಟಿ ಕೊಟ್ಟಿದ್ದರು? pic.twitter.com/Gh2nAa5tAv
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 20, 2022
Advertisement
ಪಿಎಸ್‌ಐ ನೇಮಕಾತಿ ಅಕ್ರಮದ ವಿರುದ್ಧ ಸರಣಿ ಟ್ವೀಟ್ ಮೂಲಕ ಹರಿಹಾಯ್ದಿರುವ ದಿನೇಶ್ ಗುಂಡೂರಾವ್, ಇಡಿ ಸರ್ಕಾರ ಹಾಗೂ ಗೃಹ ಸಚಿವರು ಇದರಲ್ಲಿ ಭಾಗಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲೂ ಬುಲ್ಡೋಜರ್ ಕಾರ್ಯಾಚರಣೆಗೆ ಹೆಚ್ಚಿದ ಒತ್ತಡ: ಬಿಜೆಪಿಯಲ್ಲಿ ಭಿನ್ನ ನಿಲುವು
Advertisement
3
ಅಕ್ರಮ PSI ನೇಮಕಾತಿಯ ಕಿಂಗ್‌ಪಿನ್ ದಿವ್ಯಾ ಹಾಗರಗಿ BJPಯ ಸಕ್ರಿಯ ಕಾರ್ಯಕರ್ತೆ ಮತು ಮುಖಂಡೆ.
PSI ನೇಮಕಾತಿ ಅಕ್ರಮದಲ್ಲಿ ಹಾಗರಗಿ ಜೊತೆ ಇಡೀ ಸರ್ಕಾರವೇ ಶಾಮೀಲಾಗಿ ದಂಧೆ ನಡೆಸಿದೆ.
ಈಗ ದಿವ್ಯಾ ಹಾಗರಗಿಗೂ ನಮಗೂ ಸಂಬಂಧವಿಲ್ಲ ಎಂದು ಬಿಜೆಪಿಯವರು ಹೇಳಿಕೊಂಡರೆ ಯಾರದರೂ ನಂಬಲು ಸಾಧ್ಯವೆ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 20, 2022
Advertisement
ಟ್ವೀಟ್‌ನಲ್ಲೇನಿದೆ?
545 ಪಿಎಸ್‌ಐ ಅಕ್ರಮ ನೇಮಕಾತಿಯ ಕಿಂಗ್‌ಪಿನ್ ದಿವ್ಯಾ ಹಾಗರಗಿಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಅರಚಿಕೊಳ್ಳುತ್ತಿರುವ ಬಿಜೆಪಿ ಸರ್ಕಾರಕ್ಕೆ ಕೆಲ ಪ್ರಶ್ನೆಗಳು. ದಿವ್ಯಾ ಹಾಗರಗಿ ಕುಟುಂಬಕ್ಕೂ ಆರಗ ಜ್ಞಾನೇಂದ್ರ ಅವರ ನಡುವೆ ಇರುವ ಲಿಂಕ್ ಏನು? ದಿವ್ಯಾ ನಿವಾಸಕ್ಕೆ ಗೃಹ ಸಚಿವರು ಯಾವ ಡೀಲ್ ಕುದುರಿಸಲು ಭೇಟಿ ಕೊಟ್ಟಿದ್ದರು?
Advertisement
2
3) PSI ನೇಮಕಾತಿಯ 200 ಕೋಟಿ ಲಂಚದಲ್ಲಿ ದಿವ್ಯಾ ಹಾಗರಗಿಯಿಂದ ಗೃಹ ಸಚಿವರಿಗೆ ಬಂದ ಪಾಲೆಷ್ಟು?
4) ಲಂಚದ ಹಣದಲ್ಲೂ ಈ ಸರ್ಕಾರಕ್ಕೆ 40 ಪರ್ಸೆಂಟ್ ಪಾಲು ಸಿಕ್ಕಿದೆಯೇ ಅಥವಾ ಡಿಸ್ಕೌಂಟ್ ಸಿಕ್ಕಿದೆಯೇ?
5) ದಿವ್ಯಾ #BJP ಯವರಲ್ಲದಿದ್ದರೆ @BSYBJP ರವರು CM ಆಗಿದ್ದಾಗ ದಿವ್ಯಾರನ್ನು ನರ್ಸಿಂಗ್ ಕೌನ್ಸಿಲ್ ಸದಸ್ಯರಾನ್ನಾಗಿ ಮಾಡಿದ್ದು ಯಾಕೆ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 20, 2022
PSI ನೇಮಕಾತಿಯ 200 ಕೋಟಿ ಲಂಚದಲ್ಲಿ ದಿವ್ಯಾ ಹಾಗರಗಿಯಿಂದ ಗೃಹ ಸಚಿವರಿಗೆ ಬಂದ ಪಾಲೆಷ್ಟು? ಲಂಚದ ಹಣದಲ್ಲೂ ಈ ಸರ್ಕಾರಕ್ಕೆ 40 ಪರ್ಸೆಂಟ್ ಪಾಲು ಸಿಕ್ಕಿದೆಯೇ ಅಥವಾ ಡಿಸ್ಕೌಂಟ್ ಸಿಕ್ಕಿದೆಯೇ? ದಿವ್ಯಾ, ಬಿಜೆಪಿಯವರಲ್ಲದಿದ್ದರೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ದಿವ್ಯಾರನ್ನು ನರ್ಸಿಂಗ್ ಕೌನ್ಸಿಲ್ ಸದಸ್ಯರಾನ್ನಾಗಿ ಮಾಡಿದ್ದು ಯಾಕೆ ಎಂದು ಟ್ವಿಟ್ಟರ್‌ನಲ್ಲಿ ಸಾಲು ಸಾಲು ಪ್ರಶ್ನೆಗಳನ್ನು ಹಾಕಿದ್ದಾರೆ. ಇದನ್ನೂ ಓದಿ: ಕೆ.ಸಿ.ಜನರಲ್‍ನಲ್ಲೂ ತಾಯಿ-ಶಿಶು ಆಸ್ಪತ್ರೆ ‘ವಾಣಿ ವಿಲಾಸ’ ಮಾದರಿಯಲ್ಲಿ ನಿರ್ಮಾಣ: ಕೆ.ಸುಧಾಕರ್