ಬೆಂಗಳೂರು: ಸಚಿವ ಸ್ಥಾನ ಅಲಂಕರಿಸುವ ಮುನ್ನವೇ ಪರಿಷತ್ ಸದಸ್ಯ ಆರ್‍ಬಿ ತಿಮ್ಮಾಪುರ್ ವಿರುದ್ಧ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ.
ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‍ನ ಪರಿಷತ್ ಸದಸ್ಯರ ಪ್ರಾಕ್ಸಿ ಮತದಾನ ರಾಜಭವನದ ಅಂಗಳಕ್ಕೆ ತಲುಪಿದೆ. ಜಗದೀಶ್ ಶೆಟ್ಟರ್ ,ಆರ್ ಅಶೋಕ್ ನೇತೃತ್ವದ ನಿಯೋಗ ರಾಜ್ಯಪಾಲ ವಜುಭಾಯ್ ವಾಲಾ ಅವರನ್ನ ಭೇಟಿಯಾಗಿ ತಿಮ್ಮಾಪುರ್ ಸೇರಿದಂತೆ ಒಟ್ಟು ಎಂಟು ಪರಿಷತ್ ಸದಸ್ಯರ ಅನರ್ಹತೆಗೆ ಒತ್ತಾಯ ಮಾಡಿದೆ. ನಿಯೋಗದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಅರವಿಂದ ಲಿಂಬಾವಳಿ ಭಾಗಿಯಾಗಿದ್ದಾರೆ.
Advertisement
ಪರಿಷತ್ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಲು ನಿರ್ದೇಶನ ನೀಡಬೇಕೆಂದು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಅಲ್ಲದೆ ಇವತ್ತು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಆರ್.ಬಿ.ತಿಮ್ಮಾಪುರ್ ಅವರನ್ನ ಸಚಿವ ಸ್ಥಾನಕ್ಕೆ ಪರಿಗಣಿಸಬಾರದು. ಅವರನ್ನ ಅನರ್ಹಗೊಳಿಸಬೇಕು ಅಂತಾ ಬಿಜೆಪಿ ಮನವಿ ಮಾಡಿದೆ.