ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತರೆಲ್ಲರಿಗೂ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಸುದ್ದಿಯೊಂದು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ. 2017ರಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದ ಎಲ್ಲರಿಗೂ ಸೈಲಂಟ್ ಆಗಿಯೇ ಯಡಿಯೂರಪ್ಪ ಬಿಸಿ ಮುಟ್ಟಿಸಿದಾರಂತೆ.
ಬ್ರಿಗೇಡ್ ನಲ್ಲಿ ಗುರುತಿಸಿಕೊಂಡಿದ್ದ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮತ್ತು ಎಸ್.ಎ.ರವೀಂದ್ರ ಅವರಿಗೆ ಮಾತ್ರ ಬಿಜೆಪಿ ಟಿಕೆಟ್ ನೀಡಿದೆ. ಈಶ್ವರಪ್ಪರನ್ನ ನಂಬಿ ಸಿಂಧನೂರು ಟಿಕೆಟ್‍ಗೆ ಯತ್ನಿಸಿದ್ದ ಮಾಜಿ ಸಂಸದ ವಿರೂಪಾಕ್ಷಪ್ಪಗೆ ನಿರಾಸೆಯಾಗಿದೆ. ಶಿಗ್ಗಾಂವಿ ಟಿಕೆಟ್ ಬಯಸಿದ್ದ ಸೋಮಣ್ಣ ಬೇವಿನಮರದ ಬಂಡಾಯ ಎದ್ದಿದ್ದಾರೆ. ಇದೇ ವೇಳೆ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಬಿಜೆಪಿಗೆ ಗುಡ್‍ಬೈ ಹೇಳಿದ್ದಾರೆ. ಇದನ್ನೂ ಓದಿ: ನನ್ನ ವಿರುದ್ಧ ಕ್ರಮಕೈಗೊಳ್ಳೋದಾಗಿ ಬಿಎಸ್‍ವೈ ಹೇಳಿ ಹಲವು ವರ್ಷಗಳೇ ಆಯ್ತು: ಈಶ್ವರಪ್ಪ
Advertisement
ಈ ಹಿಂದೆ ರಾಯಣ್ಣ ಬ್ರಿಗೇಡ್‍ನಲ್ಲಿ ಗುರುತಿಸಿಕೊಂಡಿದ್ದ ಮಾಯಕೊಂಡದ ಪ್ರಬಲ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಬಸವರಾಜ್ ನಾಯ್ಕ್‍ಗೆ ಟಿಕೆಟ್ ತಪ್ಪಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಇದೇ ಕ್ಷೇತ್ರದಿಂದ ಸಿದ್ದೇಶ್ವರ್ ತಮ್ಮ ಬೆಂಬಲಿಗ ಪ್ರೊಫೆಸರ್ ಲಿಂಗಣ್ಣಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ. ಇದು ಮಾಜಿ ಮಂತ್ರಿ ಎಸ್.ರವೀಂದ್ರನಾಥ್ ಮತ್ತು ಬಸವರಾಜನಾಯ್ಕರನ್ನ ಸಿಟ್ಟಿಗೆಬ್ಬಿಸಿದೆ. ಟಿಕೆಟ್ ಸಿಗದೇ ಇದ್ರೆ ಬಿಜೆಪಿ ಬಂಡವಾಳ ಬಯಲು ಮಾಡ್ತೀನಿ ಅಂತ ಬಸವರಾಜನಾಯ್ಕ ಹೇಳಿದ್ದಾರೆ. ಇದನ್ನೂ ಓದಿ: ನಾವು ತಂದೆ, ತಾಯಿಗೆ ಹುಟ್ಟಿದ ಜನ. ನಾವು ಪಕ್ಷ ಬಿಡಲ್ಲ, ಬೇರೆ ಪಕ್ಷ ಕಟ್ಟಲ್ಲ: ಬಿಎಸ್‍ವೈ ವಿರುದ್ಧ ಈಶ್ವರಪ್ಪ ಗುಡುಗು