ಬೆಂಗಳೂರು: ಸಾರಿಗೆ ಇಲಾಖೆಗೆ ಬಾಕಿ ಕೊಡದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮಾಡ್ತಿರೋ ಹೋರಾಟಕ್ಕೆ ಬಿಜೆಪಿ ಸಂಪೂರ್ಣವಾಗಿ ಬೆಂಬಲ ನೀಡಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ (P.Rajeev) ತಿಳಿಸಿದರು.
ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಸಾರಿಗೆ ಇಲಾಖೆಗೆ 7401 ಬಾಕಿ ಕೊಡಬೇಕು. ಬಾಕಿ, ಬಡ್ಡಿ ಸೇರಿ 7401 ಕೋಟಿ ಬಾಕಿ ಉಳಿಸಿಕೊಂಡಿದೆ. ಶಕ್ತಿ ಯೋಜನೆಗೆ ಸರ್ಕಾರ 1788 ಕೋಟಿ ಬಾಕಿ ಉಳಿಸಿಕೊಂಡಿದೆ. ಸಿದ್ದರಾಮಯ್ಯ ಜಾತ್ರೆ ಮಾಡ್ತಿದ್ದಾರೆ. ಆ ಯೋಜನೆ ತಂದೆ ಈ ಯೋಜನೆ ತಂದೆ ಅಂತಾರೆ. ಇಷ್ಟು ಬಾಕಿ ಕೊಡದ ಸಿಎಂ ಹೇಗೆ ಸಾಧನೆ ಮಾಡಿದ್ದಾರೆ. ಇಂತಹ ಸಾರಿಗೆ ಮಂತ್ರಿ ಇರೋರು ಈ ರಾಜ್ಯದ ದುರ್ದೈವ ಎಂದು ಕಿಡಿಕಾರಿದರು. ಇದನ್ನೂ ಓದಿ: ಖರ್ಗೆಗೆ ಕಾಂಗ್ರೆಸ್ ಪದೇ ಪದೇ ಅಪಮಾನ ಮಾಡ್ತಿದೆ: ಛಲವಾದಿ ನಾರಾಯಣಸ್ವಾಮಿ ಕಿಡಿ
Advertisement
Advertisement
ಇತ್ತೀಚೆಗೆ ಸಿಎಸ್ ಶಾಲಿನಿ ರಜನೀಶ್ ನೇತೃತ್ವದಲ್ಲಿ ನಡೆದ ಪರಿಶೀಲನೆ ಸಭೆಯಲ್ಲಿ ಚರ್ಚೆ ಆಗಿದೆ. ಸುಮಾರು 3650 ಸಾವಿರ ಕೋಟಿ ನಿಯಮಕ್ಕೆ ನಷ್ಟ ಆಗಿದೆ ಅಂತ ಸಭೆಯಲ್ಲಿ ಚರ್ಚೆ ಆಗಿದೆ. ಹೀಗಾಗಿ 15% ಪ್ರಯಾಣ ದರ ಹೆಚ್ಚಳಕ್ಕೆ ಸಭೆ ನಿರ್ಧಾರ ಮಾಡಿದ್ದಾರೆ. ಬಸ್ ಪ್ರಯಾಣ ದರ ಹೆಚ್ಚಳಕ್ಕೂ ಈ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಇದಲ್ಲದೆ ನಿಯಮದಲ್ಲಿ 250 ಎಕರೆ ಜಾಗ ಇದ್ದು ಆದಾಯ ಕ್ರೋಡೀಕರಿಸಲು ಬಳಕೆ ಮಾಡಿಕೊಳ್ಳಿ ಎಂದು ಸಿಎಸ್ ಸಭೆಯಲ್ಲಿ ಸಲಹೆ ಕೊಟ್ಡಿದ್ದಾರೆ ಎಂದು ತಿಳಿಸಿದರು.
Advertisement
ಎರಡೂವರೆ ಈ ಸರ್ಕಾರ ಇರುತ್ತೆ. ಸಾರಿಗೆ ಇಲಾಖೆ ಹಾಳು ಮಾಡುತ್ತದೆ. ಈ ಸರ್ಕಾರ ದಿವಾಳಿ ಆಗಿದೆ. 1 ಲಕ್ಷ 5 ಸಾವಿರ ಕೋಟಿ ಸಾಲ ಮಾಡಿದೆ. ಇಷ್ಟಾದ್ರು ನಿಗಮಗಳಿಗೆ ಹಣ ಕೊಟ್ಟಿಲ್ಲ. ಸಾಲದ ಸುಳಿಯಲ್ಲಿ ಈ ಸರ್ಕಾರ ಸುಲುಕಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಡಿಎ ನಿವೇಶನದಾರರಿಗೆ ಶಾಕಿಂಗ್ ನ್ಯೂಸ್; ನಿವೇಶನದಲ್ಲಿ ಮನೆ ನಿರ್ಮಾಣಕ್ಕಿದ್ದ ಅವಧಿ ಕಡಿತ
Advertisement
ಬೊಮ್ಮಾಯಿ ಸರ್ಕಾರದಲ್ಲಿ PF ಡ್ಯೂ ಇತ್ತು ಅದಕ್ಕೆ 1,200 ಕೋಟಿ ಬಿಡುಗಡೆ ಮಾಡಿದ್ದರು. ಡಿಸೇಲ್ ಬಾಕಿಗೆ 800 ಕೋಟಿ ರಿಲೀಸ್ ಮಾಡಿದ್ರು. ಬಿಜೆಪಿ ಸರ್ಕಾರದಲ್ಲಿ 500 ಕೋಟಿ ಬಸ್ ಖರೀದಿಗೆ ಅನುಮತಿ ಕೊಟ್ಟಿತ್ತು. ಇವರು ದುಡ್ಡು ರಿಲೀಸ್ ಮಾಡಿದ್ದಾರೆ. ಆದರೆ ಅದಕ್ಕೆ ಅನುಮೋದನೆ ಕೊಟ್ಟಿದ್ದು ಬಿಜೆಪಿ. ರಾಜ್ಯದಲ್ಲಿ ಈಗ ಯಾರದ್ದೋ ಮದುವೆಯಲ್ಲಿ ಉಂಡವನೇ ಜಾಣ ಅಂತ ಆಗಿದೆ. ರಾಜ್ಯದ ಜನ ಹೇಗೆ ಇದ್ದರು ಪರವಾಗಿಲ್ಲ ನಮ್ಮ ನಾಟಕ ನಾವು ಮಾಡೋಣ ಅಂತ ಈ ಸರ್ಕಾರದವರು ನಿರ್ಧಾರ ಮಾಡಿದ್ದಾರೆ. ಹಾಲಿನ ಪ್ರೋತ್ಸಾಹ ಧನ ಕಡಿತ ಮಾಡಿದ್ದಾರೆ. ರೈತರ ಪಂಪ್ ಸೆಟ್‌ಗೆ ಕೊಡ್ತಿದ್ದ 25 ಸಾವಿನ ಸಬ್ಸಿಡಿ ಕಟ್ ಮಾಡಿದ್ದಾರೆ. ಕರೆಂಟ್ ಬಿಲ್, ಹಾಲಿನ ರೇಟ್, ಬಾಂಡ್ ಪೇಪರ್ ಹೆಚ್ಚಾಗಿದೆ. ಆಹಾರ ಪದಾರ್ಥಗಳು ಎಲ್ಲವೂ ಹೆಚ್ಚು ಮಾಡಿದ್ದಾರೆ. ಆದರು ಸಾರಿಗೆ ನಿಗಮಕ್ಕೆ ಹಣ ಕೊಟ್ಟಿಲ್ಲ. ಸಾರಿಗೆ ನೌಕರರ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ಕೊಡಲಿದೆ. ಕೂಡಲೇ ಬಾಕಿ ಹಣ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.