ಉಡುಪಿ: ಮೀನುಗಾರಿಕೆ ಇಲಾಖೆ ಮಾಜಿ ಸಚಿವ, ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ (Pramod Madhwaraj) ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ರಾತ್ರಿ ವಿಪರೀತ ಜ್ವರ ಮತ್ತು ಗಂಟಲು ಸೋಂಕಿಗೆ ಒಳಗಾಗಿದ್ದ ಪ್ರಮೋದ್ ಅವರಿಗೆ ಉಸಿರಾಟ ಸಮಸ್ಯೆಯಾಗಿತ್ತು. ಕಳೆದ ರಾತ್ರಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಸಿದ್ದು ನಂತರ ರಾಜ್ಯದಲ್ಲಿ ಅಂತಹ ನಾಯಕನಿದ್ರೆ ಅದು ಸತೀಶ್ ಜಾರಕಿಹೊಳಿ ಮಾತ್ರ: ಹೆಚ್.ಡಿ.ತಮ್ಮಯ್ಯ
ವಿಪರೀತ ಜ್ವರ ತಲೆಗೆ ಏರಿದ ಕಾರಣ ಮನೆಯಲ್ಲಿ ಪ್ರಮೋದ್ ಮಧ್ವರಾಜ್ ತೀವ್ರ ಅಸ್ವಸ್ಥರಾದರು. ಕೂಡಲೇ ಮಣಿಪಾಲ ಕೆಎಂಸಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ನಿರಂತರವಾಗಿ ಪ್ರವಾಸ ಮತ್ತು ಹಲವಾರು ಕಾರ್ಯಕ್ರಮಗಳಿಗೆ ಭಾಗಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಅನಾರೋಗ್ಯ ಬಾಧಿಸಿರಬಹುದು ಎನ್ನಲಾಗಿದೆ.
ಸದ್ಯ ಜ್ವರ ಕಡಿಮೆಯಾಗಿದ್ದು, ಇನ್ನೆರಡು ದಿನದಲ್ಲಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಲಿದ್ದಾರೆ ಎಂದು ಆಪ್ತ ಮೂಲಗಳಿಂದ ಮಾಹಿತಿ ದೊರಕಿದೆ. ಇದನ್ನೂ ಓದಿ: ಮೆಟ್ರೋ ರೈಲು ಪ್ರಯಾಣ ದರ ಹೆಚ್ಚಿಸಬೇಡಿ: ಸಿಎಂಗೆ ಪತ್ರ ಬರೆದ ಮುಖ್ಯಮಂತ್ರಿ ಚಂದ್ರು