ತುಮಕೂರು: ಜಿಲ್ಲೆಯಲ್ಲಿ ಡಿಸಿಎಂ ಪರಮೇಶ್ವರ್ ಅವರ ದರ್ಬಾರ್ ಜೋರಾಗಿದ್ದು, ಉಪಮುಖ್ಯಮಂತ್ರಿಗಳು ಹೋಗುವ ಮಾರ್ಗದಲ್ಲಿ ಬಿಜೆಪಿ ಬಾವುಟ ಹಾಕಿದ್ದಕ್ಕೆ ಅಂಗಡಿ ಮಾಲೀಕನಿಗೆ ನೋಟಿಸ್ ನೀಡಲಾಗಿದೆ.
ಜಿಲ್ಲೆ ಕೊರಟಗೆರೆ ತಾಲೂಕಿನ ತೋವಿನಕೆರೆ ಅಂಗಡಿ ಮಾಲೀಕ ಕೆ.ಎನ್.ರವಿ ಎಂಬವರಿಗೆ ನೋಟಿಸ್ ನೀಡಲಾಗಿದೆ. ತಮ್ಮ ಅಂಗಡಿ ಮುಂದೆ ಬಿಜೆಪಿ ಬಾವುಟ ಹಾಕಿದ್ದಕ್ಕೆ ಗ್ರಾಮ ಪಂಚಾಯತಿಯ ಪಿಡಿಓ ನೋಟಿಸ್ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದರಿಂದ ತಾನು ನಡೆಸುತ್ತಿದ್ದ ಪ್ರಧಾನಮಂತ್ರಿ ಜನರಿಕ್ ಔಷಧ ಮಳಿಗೆ ಮುಂದೆ ರವಿ ಬಿಜೆಪಿ ಬಾವುಟ ಹಾಕಿಕೊಂಡಿದ್ದರು. ಆದರೆ ಅದನ್ನು ಕೂಡಲೇ ತೆರವುಗೊಳಿಸುವಂತೆ ನೋಟಿಸ್ ನಲ್ಲಿ ಸೂಚನೆ ನೀಡಲಾಗಿದೆ.
Advertisement
Advertisement
ಶನಿವಾರ ಡಿಸಿಎಂ ಪರಮೇಶ್ವರ್ ಅವರು ತೋವಿನಕೆರೆಯಲ್ಲಿ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಈ ಸಂದರ್ಭದಲ್ಲಿ ತುಮಕೂರಿನ ಕೆಸ್ತೂರು ರಸ್ತೆಯಲ್ಲಿರುವ ಔಷದಿ ಅಂಗಡಿಯ ಮುಂದೆ ಡಿಸಿಎಂ ವಾಹನ ಹೋಗಬೇಕಿತ್ತು. ಹೀಗಾಗಿ ಅಂಗಡಿಯ ಮುಂದೆ ಇದ್ದ ಬಾವುಟವನ್ನು ನೋಡಿ ಡಿಸಿಎಂ ಮುಜಗರಗೊಂಡಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಬಾವುಟ ತೆರವು ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ ಮಾಲೀಕನಿಗೆ ನೋಟಿಸ್ ನೀಡಿದ್ದಾರೆ.
Advertisement
Advertisement
ನೋಟಿಸ್‍ನಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೇ ಬಾವುಟ ಹಾಕಿದ್ದಕ್ಕೆ ತೆರವು ಮಾಡಿ ಎಂದು ತಿಳಿಸಲಾಗಿದೆ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಡಿಸಿಎಂ ಬರುವ ಮಾರ್ಗದಲ್ಲಿ ಬಾವುಟ ಹಾಕಬಾರದು. ಒಂದು ವೇಳೆ ಬಾವುಟ ತೆರವುಗೊಳಿಸಿದ್ದರೆ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಜೊತೆಗೆ ಡಿಸಿಎಂ ಬರುವಾಗ ಬಾವುಟ ತೆಗೆದಿಟ್ಟುಕೊಂಡು ಅವರು ಹೋದ ಮೇಲೆ ಮತ್ತೆ ಹಾಕಿಕೊಳ್ಳಿ ಎಂದು ಸಲಹೆಯನ್ನು ನೀಡಿದ್ದಾರೆ.
ತುಮಕೂರಿನ ಕಾಂಗ್ರೆಸ್ ಕಾರ್ಯಕರ್ತರು ಡಿಸಿಎಂ ಅವರನ್ನು ಒಲೈಸಿಕೊಳ್ಳಲು ಈ ರೀತಿಯ ನೋಟಿಸ್ ಕೊಟ್ಟಿದ್ದಾರೆ. ಡಿಸಿಎಂ ಬರುತ್ತಾರೆ ಎಂದು ಬಿಜೆಪಿ ಬಾವುಟ ತೆಗೆಯುವುದು ಎಷ್ಟು ಸರಿ? ಎಂದು ಅಂಗಡಿ ಮಾಲೀಕ ಪ್ರಶ್ನೆ ಮಾಡಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]