ಬೆಂಗಳೂರು: ಭಾರತ ದೇಶದಲ್ಲಿ ಮೀಸಲಾತಿ (Reservation In India) ಬಗ್ಗೆ ಅಮೆರಿಕದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನ (Bengaluru) ಹೈಗ್ರೌಂಡ್ಸ್ ಠಾಣೆಯಲ್ಲಿ ಬಿಜೆಪಿ ನಾಯಕರಿಂದು ದೂರು ನೀಡಿದ್ದಾರೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy), ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಮಾಜಿ ಶಾಸಕ ರಾಜಕುಮಾರ್ ಪಾಟೀಲ್, ತೇಲ್ಕೂರ್ ಮತ್ತು ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ವಸಂತಕುಮಾರ್ ಸೇರಿ ಬಿಜೆಪಿ ನಾಯಕರು ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದಿಂದ ಕಲಿತ ಪಾಠ.. ಚೀನಾಗೆ ಟಕ್ಕರ್ ಕೊಡಲು ‘ಮೌಂಟೆನ್ ಟ್ಯಾಂಕ್’ ಅಭಿವೃದ್ಧಿ – ಇಂಡಿಯನ್ ಆರ್ಮಿಗೆ ಆನೆ ಬಲ
Advertisement
Advertisement
ದೂರು ನೀಡಿದ ಬಳಿಕ ಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ರಾಹುಲ್ ಗಾಂಧಿ ವಿರುದ್ಧ ಈಗ ದೂರು ದಾಖಲಿಸಿದ್ದೇವೆ. ತಕ್ಷಣ ಅವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿ ಕ್ರಮ ಜರುಗಿಸಬೇಕು. ಐಟಿ ಕಾಯ್ದೆಯಲ್ಲೂ ರಾಹುಲ್ ಗಾಂಧಿ ಹೇಳಿಕೆ ಅಪರಾಧವಾಗಿದ್ದು, ಈ ಪ್ರಕರಣದಲ್ಲಿ ಎಫ್‌ಐಆರ್ ಹಾಕಲೇಕಾಗುತ್ತದೆ. ವಿಜಯಪುರ, ಬೀದರ್‌ನಲ್ಲೂ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹೊರ ರಾಜ್ಯಗಳಲ್ಲೂ ದೂರು ದಾಖಲಾಗ್ತಿದೆ ಎಂದು ಹೇಳಿದ್ದಾರೆ.
Advertisement
ಬಿಜೆಪಿ ಮುಖಂಡರೂ ಆಗಿರುವ ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಮಾತನಾಡಿ, ರಾಹುಲ್ ಗಾಂಧಿಯವರ ಹೇಳಿಕೆ ಐಟಿ ಕಾಯ್ದೆಯ ಸೆಕ್ಷನ್-61 ಮತ್ತು 62ರ ಅಡಿ ನಾನ್ ಬೇಲಬಲ್ ಪ್ರಕರಣ. ಅವರ ವಿರುದ್ಧ ಐಟಿ ಕಾಯ್ದೆ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಗುಣಮಟ್ಟದಲ್ಲಿ ರಾಜಿಯಾಗೋ ಪ್ರಶ್ನೆಯೇ ಇಲ್ಲ, ದೇಶದ ಯಾವ ಲ್ಯಾಬ್‌ನಲ್ಲಾದ್ರೂ ನಂದಿನಿ ಪ್ರೊಡಕ್ಟ್ ಪರೀಕ್ಷೆ ಮಾಡಲಿ: KMF ಎಂಡಿ
Advertisement
ಅಮೆರಿಕದಲ್ಲಿ ರಾಗಾ ಹೇಳಿದ್ದೇನು?
ಇತ್ತೀಚೆಗೆ ಪ್ರವಾಸ ಕೈಗೊಂಡಿದ್ದ ರಾಹುಲ್ ಗಾಂಧಿ ಅವರು, ಅಮೆರಿಕದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದರು. ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದ ನಂತರ ಮೀಸಲಾತಿ ವ್ಯವಸ್ಥೆಯ ರದ್ದತಿ ಕುರಿತು ಕಾಂಗ್ರೆಸ್ ಪಕ್ಷ ಚಿಂತಿಸಲಿದೆ ಎಂದು ಹೇಳಿದ್ದರು. ನಂತರದ ಮಾಧ್ಯಮ ಸಂವಾದದಲ್ಲಿ, ನಾನು ಮೀಸಲಾತಿಗೆ ವಿರುದ್ಧವಾಗಿ ಇದ್ದೇನೆ ಎಂಬಂತೆ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ. ಮೀಸಲಾತಿ ಮಿತಿಯನ್ನು ನಾವು ಶೇ.50 ಮೀರಿ ವಿಸ್ತರಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು.