ಸಿದ್ದರಾಮಯ್ಯ ವಿರುದ್ಧ ಬಿಜೆಪಿ ದೂರು ದಾಖಲು

Public TV
2 Min Read
SIDDARAMAIAH

ಬೆಂಗಳೂರು: ನಿನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಮಾಜಿ ಸಿಎಂ ಯಡಿಯೂರಪ್ಪ (B.S Yediyurappa) ಮಾತನಾಡುತ್ತ ಸಿದ್ದರಾಮಯ್ಯ (Siddaramaiah)  ಅವಧಿಯ ಹಗರಣಗಳ ತನಿಖೆ ಮಾಡಿಸ್ತೀವಿ. ಅವರನ್ನು ಎಲ್ಲಿಡ್ಬೇಕೋ ಅಲ್ಲಿ ಇಡ್ತೀವಿ ಎಂದು ವಾರ್ನಿಂಗ್ ನೀಡಿದ್ದರು. ಇಂದು ಕೂಡ ಸಿಎಂ (CM) ಇದೇ ಅರ್ಥದ ಮಾತುಗಳನ್ನು ಹೊಸಪೇಟೆಯಲ್ಲಿ ಮಾತನಾಡಿದ್ದಾರೆ.

BASAVARAJ BOMMAI 1

ಈ ಮಾತುಗಳ ಬೆನ್ನಲ್ಲೇ, ಬಿಜೆಪಿ (BJP), ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ (Lokayukta) ದೂರು ದಾಖಲಿಸಿದೆ. ಕಾನೂನು ಗಾಳಿಗೆ ತೂರಿ ಸಿದ್ದಾಪುರ ಬಳಿಯ 200 ಕೋಟಿ ಮೌಲ್ಯದ 2.39 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ್ದಾರೆ. ಬಿಡಿಎ (BDA) ಪಾರ್ಕ್ ಮತ್ತು ಸಾರ್ವಜನಿಕರ ಬಳಕೆಗೆ ಮೀಸಲಿಟ್ಟಿದ್ದ ಭೂಮಿಯನ್ನು ಅಶೋಕ್ ಧಾರಿವಾಲ್ ಎಂಬ ಬಿಲ್ಡರ್‌ಗೆ ಅನುಕೂಲ ಮಾಡಿಕೊಡುವ ಸಲುವಾಗಿ ಡೀನೋಟಿಫೈ ಮಾಡಿದ್ದಾರೆ ಎಂದು ಬಿಜೆಪಿ ತನ್ನ ದೂರಿನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಮೋದಿ ವಿಶ್ವಗುರು ಅಲ್ಲ ಪುಕ್ಕಲು ಗುರು: ಸಿದ್ದರಾಮಯ್ಯ

Yeddyurappajpg

2013ಕ್ಕೆ ಮುನ್ನ ಎರಡು ಬಾರಿ ಅಶೋಕ್ ಧಾರಿವಾಲ್ ಸಲ್ಲಿಸಿದ್ದ ಅರ್ಜಿಗಳನ್ನು ಸರ್ಕಾರ ಎರಡೆರಡು ಬಾರಿ ತಿರಸ್ಕರಿಸಿತ್ತು. ಆದ್ರೆ, 2014ರಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದ ಕೂಡಲೇ ಸಿದ್ದರಾಮಯ್ಯ ಸರ್ಕಾರ ಅನುಮೋದನೆ ಕೊಟ್ಟಿತ್ತು ಎಂದು ಆರೋಪಿಸಿದ್ದಾರೆ. ಈ ಅಕ್ರಮಕ್ಕೆ ಅಂದಿನ ಆಯುಕ್ತ ಶ್ಯಾಂಭಟ್ ಸಹಕರಿಸಿದ್ರು ಎಂದು ಆರೋಪಿಸಿರುವ ಬಿಜೆಪಿ, ಸಿಐಡಿ ತನಿಖೆಗೆ ಒತ್ತಾಯಿಸಿದೆ. ಇದನ್ನೂ ಓದಿ: ನಿದ್ರೆ ಮಾಡುತ್ತಾ ಜನರನ್ನು ಸಾಲದ ಶೂಲಕ್ಕೇರಿಸಿದ್ದು ಸಿದ್ದರಾಮಯ್ಯ – BJP ತಿರುಗೇಟು

ಈ ಮಧ್ಯೆ, ಬಿಎಸ್‍ವೈ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ, ಲೋಕಾಯುಕ್ತ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಚಿವರು ಮತ್ತು ಅಧಿಕಾರಿಗಳ ಪ್ರಾಸಿಕ್ಯೂಷನ್‍ಗೆ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಎಸ್‍ಟಿ ಸೋಮಶೇಖರ್ ವಿರುದ್ಧ ಎಫ್‍ಐಆರ್ ರದ್ದು ಮಾಡಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ. ಈ ಬೆನ್ನಲ್ಲೇ ಕಾಂಗ್ರೆಸ್, ಎಸ್‍ಟಿಎಸ್ ರಾಜೀನಾಮೆಗೆ ಒತ್ತಾಯಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಕಾನೂನು ಪ್ರಕಾರ ಸೋಮಶೇಖರ್ ನಡೆದುಕೊಳ್ತಾರೆ. ಕಾಂಗ್ರೆಸ್ಸಿಗರಲ್ಲಿ ಹಲವರು ಬೇಲ್ ಮೇಲಿದ್ದಾರಲ್ವಾ ಎಂದು ಪ್ರಶ್ನಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article