ಶ್ರೀನಗರ: ಶೋಪಿಯಾನ್ (Shopian) ಜಿಲ್ಲೆಯಲ್ಲಿ ಉಗ್ರರ ಗುಂಡಿಗೆ ಮತ್ತೊಬ್ಬ ಕಾಶ್ಮೀರಿ ಪಂಡಿತ (KashmiriPandits) ಬಲಿಯಾದ ಬಳಿಕ, ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಪಂಡಿತರಿಗೆ ಭದ್ರತೆ ಕಲ್ಪಿಸುವಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ (BJP) ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
Advertisement
ಕಾಶ್ಮೀರದಲ್ಲಿ ಪಂಡಿತರ ಹತ್ಯೆ ನಿಲ್ಲುತ್ತಿಲ್ಲ. ಅವರಿಗೆ ಭದ್ರತೆ ನೀಡುವಲ್ಲಿ ಮೋದಿ (Naredra Modi) ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದು ನಾಚಿಗೇಡಿನ ಸಂಗತಿ ಎಂದು ಕಿಡಿಕಾರಿದೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಮೇಲೆ ಮುಂದುವರಿದ ದಾಳಿ- ಉಗ್ರರ ಗುಂಡಿಗೆ ಓರ್ವ ಬಲಿ
Advertisement
Advertisement
ನಿನ್ನೆಯಷ್ಟೇ ದಕ್ಷಿಣ ಕಾಶ್ಮೀರ ಜಿಲ್ಲೆಯ ಚೌಧರಿ ಗುಂಡ್ ಪ್ರದೇಶದ ನಿವಾಸಿಯಾಗಿದ್ದ ಪುರನ್ ಕ್ರಿಶನ್ ಭಟ್ ಮೇಲೆ ಉಗ್ರರಿಂದ (Terrorists) ಗುಂಡಿನ ದಾಳಿ ನಡೆದಿತ್ತು. ಕ್ರಿಶನ್ ನಿವಾಸದ ಬಳಿಯೇ ಈ ದಾಳಿ ನಡೆದಿದ್ದು, ಅವರನ್ನು ಶೋಪಿಯಾನ್ ಆಸ್ಪತ್ರೆಗೆ (Hospital) ಸ್ಥಳಾಂತರಿಸಲಾಯಿತು. ಆದರೆ ಕ್ರಿಶನ್ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಎರಡು ತಿಂಗಳ ಹಿಂದೆ, ಶೋಪಿಯಾನ್‌ನ ಸೇಬಿನ ತೋಟದಲ್ಲಿ ಸುನೀಲ್ ಕುಮಾರ್ ಭಟ್ ಹೆಸರಿನ ಕಾಶ್ಮೀರಿ ಪಂಡಿತನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಇದೀಗ ಮತ್ತೆ ಗುಂಡಿನ ದಾಳಿ ನಡೆದಿದೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್‍ನಿಂದ ರಸ್ತೆ ಮೇಲೆ ಬಿದ್ದ ತಾಯಿ, ಮಗು – ಭಯಾನಕ ವೀಡಿಯೋ ವೈರಲ್
Advertisement
ಕಾಶ್ಮೀರ ಫ್ರೀಡಂ ಫೈಟರ್ (KFF) ಗುಂಪು ಹತ್ಯೆಯ ಹೊಣೆ ಹೊತ್ತುಕೊಂಡಿರುವುದಾಗಿ ಉಪ ಪೊಲೀಸ್ ಮಹಾನಿರೀಕ್ಷಕ ಸುಜಿತ್ ಕುಮಾರ್ ಹೇಳಿದ್ದಾರೆ.