ಬೆಂಗಳೂರು: ಬಹಳ ನಿರೀಕ್ಷೆ ಹಾಗೂ ಹಲವಾರು ಕಾರಣಗಳಿಗೆ ಕುತೂಹಲ ಮೂಡಿಸಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಮೋದಿ ಸರ್ಕಾರಕ್ಕೆ ಮತದಾರ ಸ್ಪಷ್ಟ ಸಂದೇಶ ರವಾನಿಸಿದ್ದಾನೆ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದ್ದ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಕಾಂಗ್ರೆಸ್‍ಗೆ ಸಿಹಿ ನೀಡಿದ್ದರೆ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. ಬಿಜೆಪಿ ತಾನು ಅಧಿಕಾರದಲ್ಲಿದ್ದ ಪ್ರಮುಖ ಮೂರು ರಾಜ್ಯಗಳಾದ ರಾಜಸ್ಥಾನ, ಛತ್ತೀಸ್‍ಗಡ ಹಾಗೂ ಮಧ್ಯಪ್ರದೇಶವನ್ನು ಕೈ ಚೆಲ್ಲಿ ಸೋಲನುಭವಿಸಿದೆ.
ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಸೋಲಲು ಮುಖ್ಯ ಕಾರಣ ಇಲ್ಲಿನ ಬಂಡಾಯ ಎಂದೇ ಹೇಳಲಾಗುತ್ತಿದೆ. ಯುವ ನಾಯಕ ಸಚಿನ್ ಪೈಲಟ್ ಮೇಲಿನ ಮತದಾರರ ಒಲವು ರಾಜಸ್ಥಾನದಲ್ಲಿ ಕಾಂಗ್ರೆಸ್‍ಗೆ ವರ್ಕೌಟ್ ಆಗಿದೆ. ಜೊತೆಗೆ ಈ ರಾಜ್ಯಗಳಲ್ಲಿ ಬಿಎಸ್ ಪಿ ಸಹ ಪ್ರಬಲವಾಗಿದ್ದು ಬಿಜೆಪಿಗೆ ಹೊಡೆತ ನೀಡಿದೆ. ಇನ್ನು ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ನಿರೀಕ್ಷೆ ಹೊಂದಿರದಿದ್ದರೂ ಒಂದಷ್ಟು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಇರಾದೆ ಹೊಂದಿತ್ತು. ಆದರೆ ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಪ್ರಬಲ ಪೈಪೋಟಿ ಬಿಜೆಪಿಯನ್ನು ಶೋಚನೀಯ ಸೋಲಿಗೆ ತಳ್ಳಿದೆ.
Advertisement
Advertisement
ಬಿಜೆಪಿ ಅತಿಯಾದ ಆತ್ಮವಿಶ್ವಾಸವೂ ಈ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬೇರೆ ರಾಜ್ಯಗಳ ಮತದಾರರನ್ನು ಬಿಜೆಪಿಯತ್ತ ಸೆಳೆಯುವುದು ಫಲ ಕೊಟ್ಟಿಲ್ಲ.
Advertisement
ಬಿಜೆಪಿ ಸೋಲಿಗೆ ಕಾರಣ..?
* ರಫೇಲ್ ಡೀಲ್‍ನ ಕಾಂಗ್ರೆಸ್ ಆರೋಪಕ್ಕೆ ಸರಿಯಾದ ಉತ್ತರ ಕೊಡದಿರುವುದು
* ರಾಹುಲ್ ಆಕ್ರಮಣಕಾರಿ ಪ್ರಚಾರ ಶೈಲಿ ಎದುರಿಸಲು ಮೋದಿ ವಿಫಲ
* ಕಾಂಗ್ರೆಸ್‍ನ ಮೃದು ಹಿಂದುತ್ವಕ್ಕೆ ಪೆಟ್ಟು ಕೊಡಲು ಹೋಗಿ ಕೈ ಸುಟ್ಟುಕೊಂಡ್ರಾ..?
* ನೋಟ್ ಬ್ಯಾನ್ ವೈಫಲ್ಯ, ನಿರಂತರ ಏರಿಕೆಯಾದ ಪೆಟ್ರೋಲ್ ಡೀಸೆಲ್ ದರ
* ಸಿಬಿಐ-ಆರ್‍ಬಿಐ ವಿವಾದ, ರೂಪಾಯಿ ಮೌಲ್ಯದಲ್ಲಾದ ನಿರಂತರ ಇಳಿಕೆ
* ರಾಹುಲ್ ಗಾಂಧಿ ಅವರನ್ನ ನಿರ್ಲಕ್ಷ್ಯ ಮಾಡಿದ್ದು
Advertisement
ರಫೇಲ್ ಡೀಲ್‍ನ ಕಾಂಗ್ರೆಸ್ ಆರೋಪಕ್ಕೆ ಸರಿಯಾದ ಉತ್ತರ ಕೊಡದಿರುವುದು. ರಾಹುಲ್ ಗಾಂಧಿ ಆಕ್ರಮಣಾಕಾರಿ ಪ್ರಚಾರ ಶೈಲಿಯನ್ನ ಎದುರಿಸಲು ಮೋದಿ ವಿಫಲರಾದ್ರಾ ಎನ್ನುವ ಚರ್ಚೆಗಳು ಸೃಷ್ಟಿಯಾಗಿವೆ. ಕಾಂಗ್ರೆಸ್‍ನ ಮೃದು ಹಿಂದುತ್ವಕ್ಕೆ ಪೆಟ್ಟು ಕೊಡಲು ಹೋಗಿ ಈ ರೀತಿ ಆಯ್ತಾ ಅನ್ನೋ ಅನುಮಾನಗಳು ಹುಟ್ಟಿಕೊಂಡಿವೆ. ಅತಿಯಾದ ಆತ್ಮವಿಶ್ವಾಸ, ನೋಟ್‍ಬ್ಯಾನ್ ವೈಫಲ್ಯ, ನಿರಂತರ ಏರಿಕೆಯಾದ ಪೆಟ್ರೋಲ್ ಡೀಸೆಲ್ ದರ, ಸಿಬಿಐ – ಆರ್ ಬಿಐ ವಿವಾದ, ರೂಪಾಯಿ ಮೌಲ್ಯದಲ್ಲಿ ಆದ ನಿರಂತರ ಇಳಿಕೆ ಇವೆಲ್ಲ ಕೇಂದ್ರ ಸರ್ಕಾರಕ್ಕೆ ಹೊಡೆತ ನೀಡಿರುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ರಾಹುಲ್ ಗಾಂಧಿ ಅವರನ್ನ ಅಂಡರ್ ಎಸ್ಟಿಮೇಟ್ ಮಾಡಿದ್ದು, ಅವರ ಸವಾಲುಗಳಿಗೆ ಸರಿಯಾದ ಪ್ರತಿ ಸವಾಲು ಕೊಡದೇ ಇದ್ದದ್ದು, ದೇಶದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಬಿಜೆಪಿಗೆ ಮುಳುವಾದವು ಎಂಬ ಮಾತುಗಳು ಕೇಳಿ ಬರುತ್ತಿವೆ.
ಒಟ್ಟಿನಲ್ಲಿ ಲೋಕಸಭಾ ಚುನಾವಣೆಯ ಸಮಿಫೈನಲ್ ಎಂತಲೇ ಬಿಂಬಿತವಾಗಿದ್ದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ಮೋದಿಗೆ ದೊಡ್ಡ ಆಘಾತ ನೀಡಿದೆ. ಯಾರೊಬ್ಬರನ್ನ ಕಡೆಗಣಿಸಬೇಕಾದರೆ ಯೋಚಿಸಬೇಕಾದ ಅನಿವಾರ್ಯತೆಯನ್ನ ಪಂಚ ರಾಜ್ಯಗಳ ಚುನಾವಣೆ ಕಲಿಸಿದೆ. ದೇಶಾದ್ಯಂತ ಹೆಚ್ಚುತ್ತಿರುವ ಜನರ ಅಸಹನೆಯನ್ನ ಮೋದಿ ಪರಿಗಣಿಸಬೇಕಿದೆ. ಚಾಣಕ್ಯನ ನೀತಿ ಕೈಕೊಡುತ್ತಿರುವುದು ಮೋದಿ ಅವರನ್ನ ಚಿಂತೆಗೆ ಹಚ್ಚಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv