ಬೆಂಗಳೂರು: ರಾಜ್ಯ ಬಿಜೆಪಿ (BJP) ದಂಗಲ್‌ಗೆ ಫುಲ್ ಸ್ಟಾಪ್ ಇಡಲು ಹೈಕಮಾಂಡ್ (High Command) ಮುಂದಾಗಿದ್ದು, ಪಕ್ಷದಿಂದ ರೆಬೆಲ್ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರನ್ನು ಉಚ್ಛಾಟಿಸಿ ಕಠಿಣ ನಿರ್ಣಯ ತೆಗೆದುಕೊಂಡಿದೆ. ಮಂಗಳವಾರ ಐವರಿಗೆ ಶೋಕಾಸ್ ನೊಟೀಸ್ ನೀಡಿದ್ದ ಬಿಜೆಪಿ ಹೈಕಮಾಂಡ್ ಇಂದು ಯತ್ನಾಳ್‌ರನ್ನು ಪಕ್ಷದಿಂದ ಆರು ವರ್ಷದ ಮಟ್ಟಿಗೆ ಉಚ್ಛಾಟಿಸಿದೆ.
ಫೆಬ್ರವರಿ 10 ರಂದು ನೀಡಲಾದ ಶೋಕಾಸ್ ನೊಟೀಸ್‌ಗೆ ತಾವು ನೀಡಿದ ಉತ್ತರ ಸಮಂಜಸವಾಗಿಲ್ಲ. ಅಲ್ಲದೇ, ಪದೇ ಪದೇ ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿದ್ದೀರಿ. ತಾವು ಹಿಂದೆ ಉತ್ತಮ ನಡವಳಿಕೆ ತೋರುವುದಾಗಿ ನೀಡಿದ್ದ ವಚನವನ್ನು ಉಳಿಸಿಕೊಂಡಿಲ್ಲ. ಈ ಅಂಶಗಳನ್ನು ಪರಿಗಣಿಸಿ ತಮ್ಮನ್ನು ತಕ್ಷಣವೇ ಪಕ್ಷದಿಂದ ಆರು ವರ್ಷ ಉಚ್ಛಾಟಿಸ್ತಿದ್ದೇವೆ. ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ತಮ್ಮನ್ನು ಮುಕ್ತ ಮಾಡಲಾಗಿದೆ ಎಂದು ಯತ್ನಾಳ್‌ಗೆ ಕಳಿಸಿದ ಪತ್ರದಲ್ಲಿ ಕೇಂದ್ರ ಶಿಸ್ತು ಸಮಿತಿಯ ಓಂ ಪಾಠಕ್ ಸ್ಪಷ್ಟವಾಗಿ ತಿಳಿಸಿದ್ದಾರೆ
ಇಂದು ಬೆಳಗ್ಗೆಯಷ್ಟೇ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ (Amit Shah) ಅವರನ್ನು ಬಿಜೆಪಿ ಅಧ್ಯಕ್ಷ ವಿಜಯೇಂದ್ರ (BY Vijayendra) ಭೇಟಿ ಮಾಡಿ ಚರ್ಚೆ ನಡೆಸಿದರು. ಈ ಬೆನ್ನಲ್ಲೇ ಯತ್ನಾಳ್ ಉಚ್ಛಾಟನೆಯ ಆದೇಶ ಹೊರಬಿದ್ದಿದೆ. ಇದನ್ನೂ ಓದಿ: 2ನೇ ಬಾರಿ ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆ
ಉಚ್ಛಾಟನೆಗೆ ಕಾರಣಗಳು ಏನು?
– 2 ಬಾರಿ ನೋಟಿಸ್ ನೀಡಿದ್ದರೂ ಬದಲಾಗದ ವರ್ತನೆ
– ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆ
– ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ವೈಯಕ್ತಿಕ ದಾಳಿ
– ಸದನದಲ್ಲಿ ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆ
– ರಾಜ್ಯ ಉಸ್ತುವಾರಿ ವಿರುದ್ಧ ವಸೂಲಿ ಆರೋಪ ಇದನ್ನೂ ಓದಿ: ಆ ಜೀ ಈ ಜೀ ಗಳ ಮಾತುಕೇಳಿ ರಾಜಕೀಯ ಜೀವನ ಹಾಳು ಮಾಡಿಕೊಂಡ ಯತ್ನಾಳ್: ಕಾಂಗ್ರೆಸ್ ಲೇವಡಿ
ಯತ್ನಾಳ್ ಉಚ್ಛಾಟನೆ – ಮುಂದೇನು?
– 6 ವರ್ಷ ಬಿಜೆಪಿ ಪಕ್ಷದಿಂದ ದೂರ
– ಶಾಸಕರಾಗಿ ಮುಂದುವರೆಯಲು ಅವಕಾಶ
– ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸುವಂತಿಲ್ಲ
– ಸದನದಲ್ಲಿ ಬಿಜೆಪಿ ಸದಸ್ಯರನ್ನು ಬಿಟ್ಟು ಪ್ರತ್ಯೇಕವಾಗಿ ಕೂರಬೇಕು