BelgaumDistrictsKarnatakaLatestMain Post

ರಾತ್ರಿ ರಾಜಕಾರಣ ಗೊತ್ತಿರೋದಕ್ಕೆ ಹೆಬ್ಬಾಳ್ಕರ್ ಶಾಸಕಿ ಆಗಿರೋದು: ಸಂಜಯ್ ಪಾಟೀಲ್

ಬೆಳಗಾವಿ: ರಾತ್ರಿ ರಾಜಕಾರಣ ಸಂಸ್ಕೃತಿ ಗೊತ್ತಿರೋದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಸಕಿ ಆಗಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ರೋಡ್ ಪಾಲಿಟಿಕ್ಸ್ ವೇಳೆ ಮಾತಿನ ಭರದಲ್ಲಿ ಮಾಜಿ ಶಾಸಕರು ನಾಲಿಗೆ ಹರಿಬಿಟ್ಟಿದ್ದಾರೆ. ರಾತ್ರಿ ರಾಜಕಾರಣ ಸಂಸ್ಕೃತಿ ಗೊತ್ತಿದ್ದಕ್ಕೆ ನೀವು ಎಂಎಲ್‍ಎ ಆಗಿರೋದು. ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಸತ್ಯ ಎದುರಿಸುವ ಶಕ್ತಿ ಇನ್ನೂ ಬರ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಎಂಎಲ್‍ಎ ಆಗುವ ಮೊದಲು ನಾನು ನಿಮ್ಮ ಮಗಳು ಎಂದ್ರು. ಚಾಂದ್ ತಾರೇ ತೋಡ್ ಕೇ ಲಾವೂಂಗಿ ಅಂತಾ ದೊಡ್ಡ ದೊಡ್ಡ ಕನಸು ತೋರಿಸಿದ್ರು. ಆ ಕನಸು ನನಸು ಮಾಡಿಲ್ಲದ್ದಕ್ಕೆ ಜನ ರಿಯ್ಯಾಕ್ಷನ್ ಕೊಡುತ್ತಿದ್ದಾರೆ. ಆ ರಿಯ್ಯಾಕ್ಷನ್‍ಗೆ ಭಾರತೀಯ ಜನತಾ ಪಾರ್ಟಿ ಹೆಸರು ಕೊಡುತ್ತಿದ್ದಾರೆ. ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್‍ದ್ದಾಗಿದೆ. ರಾತ್ರಿ ರಾಜಕೀಯ ಸಂಸ್ಕೃತಿ ಗೊತ್ತಿದೆಯಂತೆ ನೀವು ಎಂಎಲ್‍ಎ ಆಗಿದ್ದೀರಿ ಎಂದರು. ಇದನ್ನೂ ಓದಿ: ಕಿರುತೆರೆ ನಟಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಓರ್ವ ನಟ, ಸವಿ ಪಿಎ ವಿರುದ್ಧ ತಂದೆ ದೂರು

ನೀವು ಕೆಲಸ ಮಾಡಿಲ್ಲ ಅಂತಾ ನಾನು ಹೇಳ್ತಿಲ್ಲ. ಪ್ರತಿಯೊಬ್ಬ ಶಾಸಕರು ಸಂಸದರಿಗೆ ಕೆಲವೊಂದು ಸ್ಕೀಮ್‍ಗಳಿದ್ದಾವೆ. ಏನೂ ಕೆಲಸ ಮಾಡಿಲ್ಲ ಅಂತಾ ಹೇಳೋಕೆ ಸಾಧ್ಯವಿಲ್ಲ. ಅಭಿವೃದ್ಧಿ ಹೊಳೆ ಹರಿದಿದ್ರೆ ಈ ರೀತಿ ಬ್ಯಾನರ್ ಹಾಕುತ್ತಿರಲಿಲ್ಲ. ಬಿಜೆಪಿ ಈ ರೀತಿ ಹೊಲಸ್ಸು ರಾಜಕೀಯ ಮಾಡಿಲ್ಲ, ಮಾಡೋದಿಲ್ಲ. ಜನರು ಟೀಕೆ ಮಾಡೋದನ್ನು ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಬಿಜೆಪಿ ಮೇಲೆ ಸಿಟ್ಟು ತಗೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಡೆವಲಪ್ಮೆಂಟ್ ಕ್ವೀನ್, ಮಹಾರಾಣಿ ಅಂತಾ ಸೆಲ್ಫ್ ಡಿಕ್ಲೇರ್ ಏನೇನೋ ಅನ್ನಲಿ ನಾನು ಮಾತನಾಡಲಿಕ್ಕೆ ಆಗಲ್ಲ. ಟೀಕೆ ಸಹಿಸಿಕೊಳ್ಳುವ ಶಕ್ತಿ ದೇವರ ಹತ್ತಿರ ಲಕ್ಷ್ಮೀ ಬೇಡಿಕೊಳ್ಳಬೇಕು ಎಂದು ಸಂಜಯ್ ಪಾಟೀಲ್ ಟಾಂಗ್ ನೀಡಿದರು.

YouTube video

Leave a Reply

Your email address will not be published. Required fields are marked *

Back to top button