ಮೋದಿ ಹೋಗಿ ವಿಮಾನ ಇಂಜಿನ್ ಚೆಕ್‌ ಮಾಡೋಕೆ ಸಾಧ್ಯನಾ? – ವಿಪಕ್ಷಗಳಿಗೆ ಪಿ. ರಾಜೀವ್ ತಿರುಗೇಟು

Public TV
1 Min Read
MLA P Rajiv

ಚಿಕ್ಕಬಳ್ಳಾಪುರ: ವಿಮಾನ ದುರಂತದಲ್ಲಿ ಪ್ರಧಾನಿಗಳ (Prime Minister) ಪಾತ್ರ ಏನಾದ್ರು ಇತ್ತಾ? ಪ್ರಧಾನಿ ಹೋಗಿ ಇಂಜಿನ್‌ ಚೆಕ್ ಮಾಡಲು ಸಾಧ್ಯನಾ..? ಅಂತ ಕುಡಚಿ ಕ್ಷೇತ್ರದ ಮಾಜಿ ಶಾಸಕ ಪಿ. ರಾಜೀವ್ (P Rajeev) ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಅಹಮದಾಬಾದ್‌ ವಿಮಾನ ದುರಂತ (Ahmedabad Tragedy) ಪ್ರಕರಣದಲ್ಲಿ ಮೋದಿ ರಾಜೀನಾಮೆಗೆ ಆಗ್ರಹ ವಿಚಾರಕ್ಕೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ಅವರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: Ahmedabad Tragedy | ಡಿಎನ್‌ಎ ಮ್ಯಾಚ್ – 3 ದಿನಗಳ ಬಳಿಕ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

pm modi visits plane crash site in ahmedabad 9
PM visits a crash site of the AI-171 flight that met with an accident at Ahmedabad, in Gujarat on June 13, 2025.

ಅಮಹದಾಬಾದ್ ವಿಮಾನ ದುರಂತಕ್ಕೆ ಇಡೀ ರಾಷ್ಟ್ರ ಕಂಬನಿ ಮಿಡಿಯುತ್ತಿದೆ. ಎಲ್ಲರಿಗೂ ನೋವಿದೆ. ಬೆಂಗಳೂರಿನ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರ, ಗೃಹ ಇಲಾಖೆ, ಇಂಟೆಲಿಜೆನ್ಸ್ ನಿರ್ಲಕ್ಷ್ಯ ಇದೆ. ಬಂದೋಬಸ್ತ್ ಹೇಗೆ ಮಾಡಬೇಕು ಎಂಬ ಪೊಲೀಸ್ ಗೈಡ್‌ಲೈನ್ಸ್‌ ಇದೆ. ವಿಮಾನ ದುರಂತದಲ್ಲಿ ಪ್ರಧಾನಿಗಳ ಪಾತ್ರ ಏನಾದ್ರೂ ಇತ್ತಾ? ಪ್ರಧಾನಿ ಹೋಗಿ ಇಂಜಿನ್‌ ಚೆಕ್ ಮಾಡಲು ಸಾಧ್ಯನಾ..? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಹೆದರಿ ಬಂಕರ್‌ನಲ್ಲಿ ಕುಳಿತಿದ್ದೆವು, ರಸ್ತೆಗೆ ಇಳಿಯಲ್ಲ – ಇರಾನ್ ದಾಳಿಯ ಭೀಕರತೆ ಬಿಚ್ಚಿಟ್ಟ ಕರ್ನಾಟಕದ ಮಹಿಳೆ

ಕಾಂಗ್ರೆಸ್‌ನವರು ರಾಜಕೀಯ ಹೊಣೆಗಾರಿಕೆಗೂ ಟೆಕ್ನಿಕಲ್ ವಿಂಗ್‌ಗೂ ವ್ಯತ್ಯಾಸ ತಿಳ್ಕೋಬೇಕಲ್ವಾ? ಇಲ್ಲವಾದಲ್ಲಿ ಯಾವ ರೀತಿ ನಾವ್ ನಗಬೇಕು ಹೇಳಿ? ತಮ್ಮ ತಪ್ಪನ್ನ ಒಪ್ಪಿಕೊಳ್ಳುವ ಬದ್ಧತೆ ತೋರಿಸಿ ಎಂದು ವಿಪಕ್ಷಗಳಿಗೆ ಕುಟುಕಿದ್ದಾರೆ.

ವಿಮಾನ ಹಾರಿಸಲೇಬೇಕು ಅಂತ ಏನಾದ್ರೂ ಪ್ರಧಾನಿ ಹೇಳಿದ್ರಾ? ಹೇಳಿದ್ರೆ ತಪ್ಪು, ಆದ್ರೆ ಬೆಂಗಳೂರಲ್ಲಿ ಕಾರ್ಯಕ್ರಮ ಮಾಡಲೇಬೇಕು ಅಂತ ಮಾಡಿಸಿದವರು ಯಾರು? ಹಾಗಾಗಿ ಯಾರು ರಾಜೀನಾಮೆ ಕೊಡಬೇಕು ಅಂತ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪುಣೆಯ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕುಸಿದು ಕನಿಷ್ಠ 20 ಮಂದಿ ನೀರುಪಾಲು

Share This Article