ಚಿಕ್ಕಮಗಳೂರು: ಭಾರತದ 140 ಕೋಟಿ ಜನಸಂಖ್ಯೆಯಲ್ಲಿ ಕಾಂಗ್ರೆಸ್ಸಿಗರೂ (Congress Persons) ಇದ್ದಾರೆಂದು ಭಾವಿಸಿದ್ದೇನೆ. ಅವರು ನಾವಿಲ್ಲ ಅಂದುಕೊಂಡ್ರೆ ಅದು ದುರ್ದೈವ. ಅವರೇಕೆ ನಾವಿಲ್ಲ ಅಂದುಕೊಳ್ಳುತ್ತಿದ್ದಾರೋ ನನಗೆ ಅರ್ಥವಾಗದ ಸಂಗತಿ ಎಂದು ಮಾಜಿ ಶಾಸಕ ಸಿ.ಟಿ ರವಿ (CT Ravi) ವ್ಯಂಗ್ಯವಾಡಿದ್ದಾರೆ.
ನಗರದ ಬಿಜೆಪಿ (BJP) ಕಚೇರಿ ಪಾಂಚಜನ್ಯದ ಬಳಿ ಮಾತನಾಡಿದ ಅವರು, ಚಂದ್ರಯಾನ-3 (Chandrayaan-3), 140 ಕೋಟಿ ಭಾರತೀಯರಿಗೆ ಸೇರಿದ್ದು, ಇದು 140 ಕೋಟಿ ಜನರ ಗೆಲುವು-ಸಂತೋಷ ಎಂದು ಪ್ರಧಾನಿಯೇ ಹೇಳಿದ್ದಾರೆ. ಆ 140 ಕೋಟಿ ಜನಸಂಖ್ಯೆಯಲ್ಲಿ ಕಾಂಗ್ರೆಸ್ಸಿಗರೂ ಇದ್ದಾರೆಂದು ಭಾವಿಸಿದ್ದೇನೆ. ಅವರು ನಾವಿಲ್ಲ ಅಂದುಕೊಂಡ್ರೆ ಅದು ಅವರ ದುರ್ದೈವ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಯಾದಗಿರಿ ಜಿಲ್ಲೆಯಾದ್ಯಂತ 1 ಗಂಟೆಗೂ ಹೆಚ್ಚು ಕಾಲ ಮಳೆ – ರೈತರ ಮೊಗದಲ್ಲಿ ಮಂದಹಾಸ
Advertisement
Advertisement
ಇನ್ನೂ ಮೋದಿ (Modi) ಎಂಟ್ರಿ ವೇಳೆ ಬಿಜೆಪಿ ನಾಯಕರು ಬ್ಯಾರಿಕೇಡ್‌ನಿಂದ ಹೊರಗೆ ನಿಂತಿದ್ದನ್ನ ಕಾಂಗ್ರೆಸ್ ಟೀಕಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಜನರ ಜೊತೆ ಇರುವುದು ನಮಗೆ ಸಂತೋಷದ ಸಂಗತಿ. ಜನಸಾಮಾನ್ಯರ ಜೊತೆ ಇರುವುದು ಕಾಂಗ್ರೆಸ್ಸಿಗರಿಗೆ ಅಪರಾಧ ಅನ್ನಿಸಬಹುದು. ಕಾಂಗ್ರೆಸ್ಸಿಗರಿಗೆ ಜನಸಾಮಾನ್ಯರ ಜೊತೆ ಇದ್ದರೆ ಕೀಳರಿಮೆ ಭಾವನೆ ಬರುತ್ತದೆ. ಏಕೆಂದರೆ ಕಾಂಗ್ರೆಸ್ಸಿಗರು ಒಡ್ಡೋಲಗದ ಮೂಲಕ ತಮ್ಮನ್ನ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಚಂದ್ರಯಾನ-3 ಬಗ್ಗೆ ದೇಶವೇ ಸಂಭ್ರಮಿಸಿದೆ. ಒಂದು ಪಕ್ಷಕ್ಕೆ ಸೀಮಿತವಾದದ್ದಲ್ಲ. ಮೋದಿ ವಿಜ್ಞಾನಿಗಳನ್ನ ಅಭಿನಂದಿಸಲು ಬಂದಿದ್ದರು. ಮೋದಿಯಿಂದ ಭಾರತಕ್ಕೆ ಜಾಗತಿಕ ಮನ್ನಣೆ ಸಿಗುತ್ತಿದೆ ಎಂದು ನುಡಿದಿದ್ದಾರೆ.
Advertisement
Advertisement
ಆಪರೇಷನ್ ಹಸ್ತ ಕುರಿತು ಮಾತನಾಡಿದ ಸಿ.ಟಿ ರವಿ, ಪಕ್ಷ ಬಿಟ್ಟು ಬರುವವರಿಗೆ ನಮ್ಮಲ್ಲಿ ಲಾಸ್ಟ್ ಬೆಂಚ್ ಎಂದು ಕಾಂಗ್ರೆಸ್ಸಿಗರೇ ಹೇಳಿದ್ದಾರೆ. ಕಾಂಗ್ರೆಸ್ಸಿಗರು ಗೌರವದಿಂದ ಕರೆಯುತ್ತಿಲ್ಲ. ಗೌರವ ಇಲ್ಲದ ಜಾಗಕ್ಕೆ ಏಕೆ ಹೋಗಬೇಕು? ಗೌರವ ಇಲ್ಲದ ಜಾಗಕ್ಕೆ ಯಾರೂ ಹೋಗಲ್ಲ ಎಂದು ಭಾವಿಸಿದ್ದೇನೆ. ಒಂದು ವೇಳೆ ಹೋದರೂ ಎಂತಹ ಪರಿಸ್ಥಿತಿಯನ್ನ ಬೇಕಾದ್ರೂ ಎದುರಿಸೋಕೆ ನಾವು ಸಿದ್ಧರಿದ್ದೇವೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿ ಕೆನ್ನೆಗೆ ಕಪಾಳಮೋಕ್ಷ – ಎಲ್ಲವನ್ನೂ ವೀಡಿಯೋ ಮಾಡಿದ್ರೆ ಶಿಕ್ಷಕರು ಪಾಠ ಕಲಿಸೋದು ಹೇಗೆ: ಶಿಕ್ಷಕಿ ಪ್ರಶ್ನೆ
ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ:
ನಾವು ಕಾಂಗ್ರೆಸ್ಸಿಗೆ ಯಾರನ್ನೂ ಕಳುಹಿಸುವ ಪ್ರಯತ್ನ ಮಾಡಲ್ಲ, ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಆದ್ರೆ ಉಳಿಯೋದು-ಬಿಡೋದು ಅವರಿಗೆ ಬಿಟ್ಟಿದ್ದು ಎಂದು ಸ್ವಪಕ್ಷೀಯರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆದರೆ ಕೆಲವರು ಕೆಲ ಕಾಂಗ್ರೆಸ್ ನಾಯಕರನ್ನ ಭೇಟಿ ಮಾಡಿದ್ದಾರೆ. ಯಾವ ಕಾರಣಕ್ಕೆ ಭೇಟಿ ಮಾಡಿದ್ದಾರೋ ಗೊತ್ತಿಲ್ಲ. ಅದಕ್ಕೆ ಅಪಾರ್ಥದ ಅರ್ಥ ಕಲ್ಪಿಸುವುದಿಲ್ಲ. ಆದ್ರೆ ನಾವು ಕಾರ್ಯಕರ್ತರ ಬಲದ ಮೂಲಕ ಪಕ್ಷ ಕಟ್ಟಿದ್ದೇವೆ. ಕಾರ್ಯಕರ್ತರಿಂದಲೇ ಎಲ್ಲವನ್ನೂ ಎದುರಿಸಿದ್ದೇವೆ. ಯಾವುದೇ ಪರಿಸ್ಥಿತಿಯನ್ನ ಎದುರಿಸಲು ಸಿದ್ಧರಿದ್ದೇವೆ ಎಂದು ಗುಡುಗಿದ್ದಾರೆ.
Web Stories