ಬಳ್ಳಾರಿ: ಮಾಜಿ ಶಾಸಕ ಹಾಗೂ ಕೊಪ್ಪಳ (Koppal) ಬಿಜೆಪಿ (BJP) ಜಿಲ್ಲಾಧ್ಯಕ್ಷ ಬಸವರಾಜ ದಡೇಸುಗೂರು (Basavaraj Dhadesugur) ಅವರು ಗೌಪ್ಯವಾಗಿಯೇ ಎರಡನೇ ಮದ್ವೆಯಾದ್ರಾ (Marriage) ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ವಿಜಯನಗರ (Vijayanagara) ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು, ಉಪ ಲೋಕಾಯುಕ್ತ ವೀರಪ್ಪ ಅವರ ಭೇಟಿ ವೇಳೆ, ನನ್ನ ಪತಿ ರಾಜಕಾರಣಿ, ಕನಕಗಿರಿಯ ಮಾಜಿ ಶಾಸಕ ಬಸವರಾಜ ದಡೇಸುಗೂರು ಎಂದು ಹೇಳಿಕೊಂಡಿದ್ದಾರೆ.
ಉಪ ಲೋಕಾಯುಕ್ತರು, ಏನಮ್ಮಾ ಯಾರು ನಿಮ್ಮ ಯಜಮಾನ್ರು? ಏನು ಕೆಲಸ ಮಾಡ್ತಾರೆ? ಎಂದಾಗ, ಅಧಿಕಾರಿ ಉತ್ತರಿಸಿದ್ದು, ನನ್ನ ಗಂಡ ರಾಜಕಾರಣಿ ಎಂದಿದ್ದಾರೆ. ಬಳಿಕ ಫೋನ್ ಪೇ ಟ್ರಾನ್ಸಾಕ್ಷನ್ ಬಗ್ಗೆ ಕೇಳಿದಾಗ, ಮನೆಯವ್ರಿಗೆ ಮಾಡಿದ್ದೀನಿ. ಅವರು ವಾಪಾಸ್ ಹಣ ಹಾಕಿದ್ದಾರೆ ಎಂದಿದ್ದಾರೆ. ಈ ವೇಳೆ, ಅವರಿಗೆ ಯಾಕೆ ಹಣ ವರ್ಗಾವಣೆ ಮಾಡಿದ್ದೀರಿ? ಅವರಿಗೆ ಪೆನ್ಷನ್ ಬರುತ್ತೆ ಎಂದು ಹೇಳಿದ್ದಾರೆ. ಈ ವೀಡಿಯೊ ಈಗ ವೈರಲ್ ಆಗಿದೆ.
ಮೂರು ವರ್ಷಗಳ ಹಿಂದೆ ಕೊಪ್ಪಳದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮಹಿಳಾ ಅಧಿಕಾರಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಅಧಿಕಾರಿ ಹಾಗೂ ದಡೇಸುಗೂರು ಜೊತೆ ಸಂಭಾಷಣೆಯ ಆಡಿಯೋ ವೈರಲ್ ಆಗಿತ್ತು. ಇದೀಗ ಬಸವರಾಜ ದಡೇಸುಗೂರು ನನ್ನ ಪತಿ ಎಂದು ಮಹಿಳಾ ಅಧಿಕಾರಿ ಹೇಳಿಕೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ದಡೇಸುಗೂರು ಅವರು, 2023ರ ಚುನಾವಣೆಯಲ್ಲಿ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಎರಡನೇ ಮದುವೆ ಮುಚ್ಚಿಟ್ಟು, ಸುಳ್ಳು ಮಾಹಿತಿ ನೀಡಿದ್ರಾ ಎಂಬ ಸಂಶಯ ಸಹ ಹುಟ್ಟಿಕೊಂಡಿದೆ.