– ಪಾಕಿಸ್ತಾನ ಸೇರಿಸಿಕೊಂಡು ಅಖಂಡ ಭಾರತ ಮಾಡ್ತೀವಿ ಎಂದ ಮಾಜಿ ಸಚಿವ
ದಾವಣಗೆರೆ: ದೇಶದ್ರೋಹ ಮಾಡುವವರು ಹಾಗೂ ದೇಶದ್ರೋಹದ ಹೇಳಿಕೆ ನೀಡುವವರನ್ನ ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಯಾಗಲಿ ಎಂದು ಬಿಜೆಪಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ (Davanagere) ನಡೆದ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸದ ಡಿ.ಕೆ ಸುರೇಶ್ ಅವರ ʻಪ್ರತ್ಯೇಕ ರಾಷ್ಟ್ರʼದ ಹೇಳಿಕೆ ವಿರುದ್ಧ ಕಿಡಿ ಕಾರಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಅವರು ಯಾವ ದೇಶದ ಅಧ್ಯಕ್ಷರಾಗಿದ್ದಾರೆ ಎಂದು ಸ್ಪಷ್ಟವಾಗಿ ಹೇಳಲಿ. ಅವರ ಪಕ್ಷದ ಡಿ.ಕೆ ಸುರೇಶ್, ವಿನಯ್ ಕುಲಕರ್ಣಿ ದೇಶ ಇಬ್ಭಾಗ ಮಾಡಬೇಕು ಅಂತ ಹೇಳುತ್ತಿದ್ದಾರೆ. ತಮ್ಮ ಪಕ್ಷದ ಸಂಸದರೇ ಹೇಳಿದಂತೆ ನೀವು ಉತ್ತರ ಭಾರತದ ಅಧ್ಯಕ್ಷರಾ? ಅಥವಾ ದಕ್ಷಿಣ ಭಾರತದ ಅಧ್ಯಕ್ಷರಾ? ಎಂದು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದ್ದಾರೆ.
Advertisement
Advertisement
ಕಾಂಗ್ರೆಸ್‌ನಲ್ಲಿರುವ ವಿನಯ್ ಕುಲಕರ್ಣಿ, ಡಿಕೆ ಸುರೇಶ್ (DK Suresh) ಇಬ್ಬರೂ ದೇಶದ್ರೋಹಿಗಳು. ತಾಕತ್ತಿದ್ದರೆ, ದೇಶದ್ರೋಹದ ಹೇಳಿಕೆ ನೀಡಿದ ಈ ಇಬ್ಬರನ್ನೂ ಪಕ್ಷದಿಂದ ಕಿತ್ತು ಬಿಸಾಕಿ ಎಂದು ಒತ್ತಾಯಿಸಿದರಲ್ಲದೇ, ಈ ರೀತಿ ದೇಶದ್ರೋಹ ಹೇಳಿಕೆ ನೀಡುವ, ದೇಶ ದ್ರೋಹ ಕೆಲಸ ಮಾಡುವರನ್ನ ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಯುಪಿಎ 10 ವರ್ಷಗಳಲ್ಲಿ ಆರ್ಥಿಕತೆಯನ್ನು ನಿಷ್ಕ್ರಿಯಗೊಳಿಸಿತ್ತು: ಶ್ವೇತಪತ್ರ ಹೊರಡಿಸಿದ ಮೋದಿ ಸರ್ಕಾರ
Advertisement
Advertisement
ನಮ್ಮ ಎಲ್ಲ ಕಾರ್ಯಕರ್ತರ ʻಜೈಶ್ರೀರಾಮ್ʼ ಕೂಗು ಬೆಂಗಳೂರಿನಲ್ಲಿ ನಾಟಕ ಮಾಡುತ್ತಿರುವ ಸಿದ್ದರಾಮಯ್ಯನಿಗೆ (Siddaramaiah) ಕೇಳಿಸಬೇಕು. ಜಿನ್ನಾ ಸಂಸ್ಕೃತಿ ಕಾಂಗ್ರೆಸ್ ಹಾಗೂ ವಿನಯ್ ಕುಲಕರ್ಣಿಗೆ ಬಂದಿದೆ. ಆದ್ರೆ ನಾವು ದೇಶವನ್ನು ಇಬ್ಭಾಗ ಮಾಡಲು ಬಿಡೋದಿಲ್ಲ. ಬೇಕಾದ್ರೆ ಪಾಕಿಸ್ತಾನವನ್ನೂ ಸೇರಿಸಿಕೊಂಡು ಅಖಂಡ ಭಾರತವನ್ನಾಗಿ ಮಾಡ್ತೀವಿ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: 2047ಕ್ಕೆ ಭಾರತವನ್ನು ಇಸ್ಲಾಮೀಕರಣ ಮಾಡುವ ತಂತ್ರ ರೂಪಿಸಲಾಗಿದೆ: ಜಗದೀಶ್ ಕಾರಂತ್
ಮೋದಿ ಅಂದ್ರೆ ಎದೆ ನಡುಗುತ್ತೆ:
ಕಾಂಗ್ರೆಸ್ ನಾಯಕರಿಗೆ ಮೋದಿ ಅಂದ್ರೆ ಎದೆ ನಡುಗುತ್ತೆ. ಏಕೆಂದರೆ ಅವರ ಮನೆಯಲ್ಲಿರುವವರೆಲ್ಲಾ ಮೋದಿಗೆ ವೋಟ್ ಹಾಕ್ತೀವಿ ಅಂತಿದ್ದಾರೆ. ಗುಂಪಿನಲ್ಲಿ ಕೂಡಿದಾಗ ನಾನು ಕೂಡ ಮೋದಿಗೆ ವೋಟ್ ಹಾಕ್ತೀನಿ ಅಂತಾ ದೇಶಭಕ್ತ ಕಾಂಗ್ರೆಸ್ ಮುಖಂಡರು ಹೇಳ್ತಾರೆ. 900 ವರ್ಷಗಳ ಕಾಲ ಈ ದೇಶವನ್ನ ಮುಸ್ಲಿಮರು ಆಳಿದರು. ಕಾಶಿ, ಮಥುರಾ, ಅಯೋಧ್ಯೆಯಲ್ಲಿ ಮಸೀದಿಗಳೇ ತಲೆ ಎತ್ತಿದ್ದವು. ಭಾರತೀಯರು ಗುಲಾಮರು ಅಂತಾ ಬಾಬರ್‌ನ ಮಸೀದಿಗಳು ಹೇಳುತ್ತಿದ್ದವು. ಆದ್ರೆ ಅಯೋಧ್ಯೆ ರಾಮಮಂದಿರದಿಂದ ಇಡೀ ದೇಶ ಒಂದುಗೂಡಿತು. ಇದೀಗ ಕಾಶಿ, ಮಥುರಾ ಸಹ ಹಿಂದೂಗಳ ಕೈ ಸೇರಿದ್ರೆ ಹಿಂದೂಗಳಿಗೆ ಯಶಸ್ಸು ಸಿಕ್ಕಂತಾಗುತ್ತದೆ. ಅಲ್ಲದೇ ಅಯೋಧ್ಯೆಗೆ ಮುಸ್ಲಿಮರೂ ಹೋಗಿ ಶ್ರೀರಾಮನ ದರ್ಶನ ಪಡೆಯುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ನವರಿಗೆ ಆತಂಕ ಶುರುವಾಗಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ಯಶಸ್ವಿ; 20 ಸಾವಿರ ಜನ ಭಾಗಿ, 11,000 ಅರ್ಜಿ ಸಲ್ಲಿಕೆ