ಹಾಸನ: ಬಿಜೆಪಿ ಮಾಜಿ ಸಚಿವ ಎ.ಮಂಜು (A Manju) ಶನಿವಾರ ಅಧಿಕೃತವಾಗಿ ಜೆಡಿಎಸ್ (JDS) ಪಕ್ಷ ಸೇರ್ಪಡೆಯಾಗಿದ್ದಾರೆ.
ರಾಮನಗರದಲ್ಲಿರುವ (Ramanagara) ಹೆಚ್‌ಡಿಕೆ ಅವರ ತೋಟದ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (HD Devegowda), ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy), ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರಿದ್ದಾರೆ.
Advertisement
Advertisement
ಬಳಿಕ ಬಿಡದಿಯ ತೋಟದ ಮನೆಯಲ್ಲಿ ಆಯೋಜಿಸಿದ್ದ ಪೂರ್ಣಾಹುತಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಮೋದಿ ಗೌರವಿಸಿದ ವ್ಯಕ್ತಿ ಯಾರಾದ್ರೂ ಇದ್ರೆ ಅದು ಯಡಿಯೂರಪ್ಪ – ಮುನಿರತ್ನ
Advertisement
ವಿಧಾನ ಪರಿಷತ್ ಚುನಾವಣೆ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಎ.ಮಂಜು, ನಡುವೆ ಕಾಂಗ್ರೆಸ್‌ನಿಂದ ಟಿಕೆಟ್‌ಗೆ ಪ್ರಯತ್ನಿಸಿದ್ದರು. ಇದೀಗ ಜೆಡಿಎಸ್ ಪಕ್ಷದಿಂದ ಟಿಕೆಟ್ ಭರವಸೆ ನೀಡಿದ ಬಳಿಕ ಪಕ್ಷ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಧಾರವಾಡ ಐಐಟಿ ಆಗಲು ಕಾಂಗ್ರೆಸ್ ಕಾರಣ: ಮಾಜಿ ಸಚಿವ ವಿನಯ್ ಕುಲಕರ್ಣಿ
Advertisement
ಇನ್ನೊಂದೆಡೆ ಹಾಲಿ ಶಾಸಕ ಎ.ಟಿ.ರಾಮಸ್ವಾಮಿಗೆ ಸೆಡ್ಡು ಹೊಡೆಯಲು ಎ.ಮಂಜುಗೆ ಜೆಡಿಎಸ್ ನಾಯಕರು ಗಾಳ ಹಾಕಿದ್ದಾರೆ. ಕಳೆದ ಒಂದು ವರ್ಷದಿಂದ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಎ.ಟಿ.ರಾಮಸ್ವಾಮಿ, ಎ.ಮಂಜು ಜೊತೆ-ಮಾತುಕತೆ ನಡೆಸಿ ಪಕ್ಷಕ್ಕೆ ಕರೆತಂದಿದ್ದಾರೆ ಎನ್ನಲಾಗಿದೆ.