ಡೆಹ್ರಾಡೂನ್: ಉತ್ತರಾಖಂಡ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅತ್ಯಾಚಾರ ಆರೋಪಿ ಸೇರಿದಂತೆ 10 ಮಂದಿ ಹಾಲಿ ಶಾಸಕರನ್ನು ಬಿಜೆಪಿ ಪಟ್ಟಿಯಿಂದ ಕೈಬಿಟ್ಟಿದೆ.
59 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದ್ದು, ಹೊಸ ಮುಖಗಳಿಗೆ ಮಣೆ ಹಾಕಿದೆ. ಅತ್ಯಾಚಾರ ಆರೋಪಿ ಮಹೇಶ್ ನೇಗಿ ಹಾಗೂ ಮಾಜಿ ಮುಖ್ಯಮಂತ್ರಿ ಭುವನ್ ಚಂದ್ರ ಖಂಡೂರಿ ಪುತ್ರಿ ರಿತು ಖಂಡೂರಿ ಅವರಿಗೆ ಟಿಕೆಟ್ ಕೈತಪ್ಪಿದೆ. ಇದನ್ನೂ ಓದಿ: ಯುಪಿ ಕಾಂಗ್ರೆಸ್‍ನ ‘ನಾನು ಹುಡುಗಿ ಹೋರಾಡಬಲ್ಲೆ’ ಪೋಸ್ಟರ್ ಗರ್ಲ್ ಬಿಜೆಪಿಗೆ ಸೇರ್ಪಡೆ
Advertisement
Advertisement
ಇನ್ನುಳಿದ 11 ಸ್ಥಾನಗಳಿಗೆ ಆಡಳಿತಾರೂಢ ಪಕ್ಷ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ. ಈ ಸ್ಥಾನಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇದೆ. ರಾಜ್ಯದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಈ ಸ್ಥಾನಗಳ ಬಗ್ಗೆ ಬಿಜೆಪಿ ಆತುರದ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
Advertisement
ಹಾಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಖತೀಮಾ ಕ್ಷೇತ್ರದಿಂದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ಕೌಶಿಕ್ ಹರಿದ್ವಾರದಿಂದಲೂ ಕಣಕ್ಕಿಳಿಯಲಿದ್ದಾರೆ. ಸಂಪುಟದ ಬಹುಪಾಲು ಸಚಿವರು ಹಾಗೂ ಶಾಸಕರು ಸದ್ಯ ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಿಂದಲೇ ಸ್ಪರ್ಧಿಸಲಿದ್ದಾರೆ. ಇದನ್ನೂ ಓದಿ: UP Election: ಚುಣಾವಣಾ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಶಾಸಕನನ್ನು ಓಡಿಸಿದ ಗ್ರಾಮಸ್ಥರು
Advertisement
ಶಾಸಕ ಮಹೇಶ್ ನೇಗಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಹೊರಿಸಿದಾಗಿನಿಂದ ಬಿಜೆಪಿ ಭಾರೀ ಮುಜುಗರ ಅನುಭವಿಸಿದೆ. ಪರಿಣಾಮವಾಗಿ ನೇಗಿ ಅವರನ್ನು ಪಕ್ಷ ಕೈಬಿಟ್ಟಿದ್ದು, ಅನಿಲ್ ಶಾಹಿ ಅವರಿಗೆ ಅವಕಾಶ ನೀಡಿದೆ.