ಜೈಪುರ: ಉದಯಪುರ ಟೈಲರ್ ಕನ್ಹಯ್ಯಲಾಲ್ ಹತ್ಯೆ ನಡೆಸಿದ ಹಂತಕರಿಗೆ ಬಿಜೆಪಿ ನಂಟು ಇದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಹಂತಕರು ಬಿಜೆಪಿ ನಾಯಕರೊಂದಿಗೆ ಇರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಕನ್ಹಯ್ಯಲಾಲ್ ಹಂತಕ ರಿಯಾಜ್ ಅಟ್ಟಾರಿಗೆ ಬಿಜೆಪಿ ನಾಯಕರ ಸಂಪರ್ಕವಿದೆ. ಬಿಜೆಪಿ ಮುಖಂಡ ಗುಲಾಬ್ ಚಂದ್ ಕಟಾರಿಯಾ ಜೊತೆ ಆರೋಪಿ ರಿಯಾಜ್ ಇದ್ದಾನೆ. ರಿಯಾಜ್ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಕನ್ಹಯ್ಯ ಕೊಲೆ ಹಸಿರಾಗಿರುವಾಗಲೇ ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಮತ್ತೊಂದು ಕೊಲೆ
Advertisement
Advertisement
ರಿಯಾಜ್ ಬಿಜೆಪಿ ಸಕ್ರಿಯ ಸದಸ್ಯನಾಗಿದ್ದಾನೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಆರೋಪಿಸಿದ್ದಾರೆ. ಬಿಜೆಪಿಯವರು ರಾಷ್ಟ್ರೀಯತೆ ಎಂದು ಹೇಳಿಕೊಂಡು ಪಕ್ಕದಲ್ಲಿ ಚಾಕು ಇಟ್ಟುಕೊಂಡಿದ್ದಾರೆ. ರಾಜಸ್ಥಾನದ ಬಿಜೆಪಿಯ ಪ್ರಬಲ ನಾಯಕನಿಗೆ ರಿಯಾಜ್ ಹತ್ತಿರವಾಗಿದ್ದ. ಮಾಜಿ ಗೃಹ ಸಚಿವ ಗುಲಾಬ್‌ಚಂದ್ ಕಟಾರಿಯಾ ಅವರ ಅನೇಕ ಕಾರ್ಯಕ್ರಮಗಳಲ್ಲಿ ರಿಯಾಜ್ ಭಾಗಿಯಾಗಿದ್ದ. ಬಿಜೆಪಿಯ ಅಲ್ಪಸಂಖ್ಯಾತರ ಸೆಲ್ ನಾಯಕ ಇರ್ಷಾದ್ ಚೈನ್‌ವಾಲಾ ನಾಪತ್ತೆಯಾದ್ದಾನೆ ಎಂದು ಖೇರಾ ಹೇಳಿದ್ದಾರೆ.
Advertisement
I'm not surprised.. Are you? pic.twitter.com/jVpmARtBue
— Renuka Chowdhury (@RenukaCCongress) July 1, 2022
Advertisement
ಹತ್ಯೆಯ ಹಿಂದೆ ಬಿಜೆಪಿಯ ನಾಯಕರ ಕೈವಾಡವಿದೆಯೇ? ವಿಚಾರದಲ್ಲಿ ಬಿಜೆಪಿ ಸಂಜೆಯೊಳಗೆ ಉತ್ತರ ನೀಡಬೇಕು. ಕೇಂದ್ರ ಸರ್ಕಾರ ಕೆಲವೇ ಗಂಟೆಗಳಲ್ಲಿ ಈ ಪ್ರಕರಣವನ್ನು ಎನ್‌ಐಎಗೆ ವಹಿಸಿದೆ. ಸತ್ಯಾಂಶ ಮರೆಮಾಚಲಿದೆಯೇ ಎಂಬ ಪ್ರಶ್ನೆ ಮೂಡಿದೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: 4 ರಾಜ್ಯಗಳಲ್ಲಿ 9 ಎಫ್‌ಐಆರ್ – ಬಿಜೆಪಿ ಮಾಜಿ ವಕ್ತಾರೆ ನೂಪುರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇಕೆ?
ಆದರೆ ಕಾಂಗ್ರೆಸ್‌ನ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ. ʻನಮಗೂ ಈ ಆರೋಪಿಗಳಿಗೂ ಯಾವುದೇ ಸಂಬಂಧವಿಲ್ಲʼ ಎಂದು ರಾಜಸ್ಥಾನದ ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥ ಸಾದಿಕ್ ಖಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಹತ್ಯೆಯು ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವೈಫಲ್ಯ ಎಂದು ಪುನರಾವರ್ತಿಸಿದ್ದಾರೆ.