ಬೆಳಗಾವಿ: ವಿಧಾನಸಭೆಯ ಸ್ಪೀಕರ್ ವಿಚಾರವಾಗಿ ತೆಲಂಗಾಣ ಚುನಾವಣೆ ವೇಳೆ ಸಚಿವ ಜಮೀರ್ ಅಹಮದ್ (B.Z. Zameer Ahmed Khan) ಅವರು ನೀಡಿದ್ದ ಹೇಳಿಕೆ ವಿಧಾನ ಪರಿಷತ್ ಕಲಾಪದಲ್ಲಿ ದೊಡ್ಡ ಗದ್ದಲಕ್ಕೆ ಕಾರಣವಾಯಿತು. ಇದರಿಂದ 2 ಬಾರಿ ಸದನ ಸಹ ಮುಂದೂಡಿಕೆ ಆಯಿತು.
ವಿಧಾನ ಪರಿಷತ್ ಕಲಾಪ ಪ್ರಾರಂಭವಾದ ಕೂಡಲೇ ಪ್ರಶ್ನೋತ್ತರ ಅವಧಿಗೆ ಸಚಿವ ಜಮೀರ್ ಅಹಮದ್ ಉತ್ತರ ಕೊಡಲು ನಿಂತರು. ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಜಮೀರ್ ಅಹಮದ್, ಸ್ಪೀಕರ್ ಸ್ಥಾನಕ್ಕೆ ಅಪಮಾನ ಮಾಡಿದ್ದಾರೆ. ಅವರ ಉತ್ತರವನ್ನು ನಮಗೆ ಕೇಳಲು ಆಗುವುದಿಲ್ಲ. ಅವರು ಸಂವಿಧಾನದ ಪೀಠಕ್ಕೆ ಅಪಮಾನ ಮಾಡಿದ್ದಾರೆ. ಅವರಿಂದ ಉತ್ತರ ಬೇಡ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಜಮೀನು ರಕ್ಷಣೆಗೆ ಬೀಟ್ ಆ್ಯಪ್ ವ್ಯವಸ್ಥೆ ಜಾರಿ: ಕೃಷ್ಣಭೈರೇಗೌಡ
Advertisement
Advertisement
ಬಿಜೆಪಿ (BJP) ವಿರೋಧಕ್ಕೆ ಕಾಂಗ್ರೆಸ್ (Congress) ಸದಸ್ಯರು ಸಹ ಗಲಾಟೆ ಮಾಡಿದ್ದಾರೆ. ಜಮೀರ್ ಕೆಳಮನೆ ಸದಸ್ಯರು, ಅವರ ಹೇಳಿಕೆಗೂ ಈ ಮನೆಗೂ ಸಂಬಂಧವಿಲ್ಲ ಎಂದು ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ. ಈ ವೇಳೆ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಭಾಪತಿಗಳು ಎಷ್ಟೇ ಮನವಿ ಮಾಡಿದರು ಸಹ ಗಲಾಟೆ ನಿಲ್ಲಲಿಲ್ಲ. ಗದ್ದಲದಿಂದಾಗಿ ಕಲಾಪವನ್ನ ಸಭಾಪತಿಗಳು 10 ನಿಮಿಷಗಳ ಕಾಲ ಮುಂದೂಡಿದರು.
Advertisement
ಬಳಿಕ ಕಲಾಪ ಪ್ರಾರಂಭವಾದರೂ ಬಿಜೆಪಿ ಸದಸ್ಯರು ಗಲಾಟೆ ನಿಲ್ಲಿಸಲಿಲ್ಲ. ಜಮೀರ್ ಅಹಮದ್ ರಾಜೀನಾಮೆ ನೀಡಬೇಕು. ಇಲ್ಲವೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ಕೊಟ್ಟ ಜಮೀರ್ ಅಹಮದ್, ನಾನು ಸ್ಪೀಕರ್ ಸ್ಥಾನಕ್ಕೆ ಅವಮಾನ ಮಾಡಿಲ್ಲ. ಮುಂದೆಯೂ ಅಪಮಾನ ಮಾಡುವುದಿಲ್ಲ ಎಂದಿದ್ದಾರೆ.
Advertisement
ಈ ವೇಳೆ ಸಹ ಸಚಿವರ ಮಾತಿಗೆ ಬಿಜೆಪಿ ಸದಸ್ಯರು ವಿರೋಧ ಮಾಡಿದ್ದರಿಂದ ಮತ್ತೆ ಸದನದಲ್ಲಿ ಗದ್ದಲ ಉಂಟಾಯಿತು. ಬಿಜೆಪಿ ಸದಸ್ಯರು ಜಮೀರ್ ಸಂವಿಧಾನ ವಿರೋಧವಾಗಿ ನಡೆದುಕೊಂಡಿದ್ದಾರೆ. ಬಿಜೆಪಿಯವರು ಮುಸ್ಲಿಂ ಸ್ಪೀಕರ್‍ಗೆ ಕೈ ಮುಗಿಯುವಂತೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಗಲಾಟೆ ಶುರು ಮಾಡಿದ್ದಾರೆ. ಇದಕ್ಕೆ ಜಮೀರ್ ಅವರು ನಾನು ಹಾಗೆ ಹೇಳಿಲ್ಲ ಎಂದು ವಿವರಣೆ ಕೊಟ್ಟರು ಬಿಜೆಪಿ ಒಪ್ಪಲಿಲ್ಲ. ಈ ವೇಳೆ ಮತ್ತೆ ಕಲಾಪವನ್ನು 10 ನಿಮಿಷಗಳ ಕಾಲ ಸಭಾಪತಿ ಕಲಾಪವನ್ನ ಮುಂದೂಡಿಕೆ ಮಾಡಿದ್ದಾರೆ.
ಎರಡು ಬಾರಿ ಸಭಾಪತಿಗಳು ತಮ್ಮ ಕೊಠಡಿಯಲ್ಲಿ ಸಂಧಾನ ಮಾಡಿದರೂ ಸಹ ಸಂಧಾನ ವಿಫಲವಾಯ್ತು. ಬಳಿಕ ಕಲಾಪ ಪ್ರಾರಂಭವಾದಾಗ ಜಮೀರ್ ಅಹಮದ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಸಲಾಮ್ ಮಾಡಿ ಎಂದು ಎಲ್ಲೂ ಹೇಳಿಲ್ಲ. ಹಾಗೇ ಹೇಳಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ. ಈ ವೇಳೆ ಮತ್ತೆ ಸದನದಲ್ಲಿ ಗದ್ದಲ ಗಲಾಟೆ ಉಂಟಾಗಿ ಸಭಾಪತಿಗಳು ಆಕ್ರೋಶಗೊಂಡು ಬಿಜೆಪಿ ವಿರುದ್ಧ ಕಿಡಿಕಾರಿದರು. ಅಂತಿಮವಾಗಿ ಜಮೀರ್ ಹೇಳಿಕೆ ಖಂಡಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ. ಬಳಿಕ ಕಲಾಪ ಮುಂದುವರೆಯಿತು. ಇದನ್ನೂ ಓದಿ: ಲೋಕಸಭೆಯಲ್ಲಿ ಸ್ಮೋಕ್ ಬಾಂಬ್ – ಪ್ರತಾಪ್ ಸಿಂಹ ಕಚೇರಿಯಿಂದಲೇ ಪಾಸ್ ವಿತರಣೆ