– ಬಿಜೆಪಿ-ಜೆಡಿಎಸ್ `ಧರ್ಮ’ ಯುದ್ಧಕ್ಕೆ `ಕೈ’ ಕೌಂಟರ್ ಯಾತ್ರೆ..?
ಮಂಗಳೂರು: ಧರ್ಮಸ್ಥಳ (Dharmasthala) ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ. ಪ್ರಕರಣವನ್ನ ಎನ್‌ಐಎ ತನಿಖೆಗೆ (NIA Investigation) ವಹಿಸಬೇಕೆಂದು ಆಗ್ರಹಿಸಿ ಇಂದು ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ನಡೆಸಿದ್ರು. ಸಾವಿರಾರು ಕಾರ್ಯಕರ್ತರು ಕಾರು, ಟಿಟಿ, ಬಸ್‌ಗಳಲ್ಲಿ ಧರ್ಮಸ್ಥಳಕ್ಕೆ ಭೇಟಿ ಕೊಟ್ರು. ಧರ್ಮಸ್ಥಳ ವಿರುದ್ಧ ಷಡ್ಯಂತ್ರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು. ಬಳಿಕ ದೇವಸ್ಥಾನಕ್ಕೆ ಭೇಟಿ ಕೊಟ್ಟು ಮಂಜುನಾಥನ ದರ್ಶನ ಪಡೆದ್ರು. ಷಡ್ಯಂತ್ರ ಮಾಡುವವರಿಗೆ ತಕ್ಕ ಶಿಕ್ಷೆ ಆಗ್ಬೇಕು ಅಂತ ಸಂಕಲ್ಪ ಮಾಡಿದ್ರು.
`ಕೈ’ ವಿರುದ್ಧ ವಿಜಯೇಂದ್ರ, ಅಶೋಕ್ ವಾಗ್ದಾಳಿ..!
ಧರ್ಮಸ್ಥಳ ಪರ ಬಿಜೆಪಿ ಧರ್ಮ ಸಂಗ್ರಾಮ ಜೋರಾಗಿದೆ. ಶ್ರೀಮಂಜುನಾಥನ ದರ್ಶನ ಪಡೆದ ಬಿಜೆಪಿ ನಾಯಕರು ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಮಾತನಾಡಿ, ದುಷ್ಟಶಕ್ತಿಗಳು ಅಟ್ಟಹಾಸ ಮೆರೆಯುತ್ತಿವೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ನಡೆಯುತ್ತಿದೆ. ಕೋಟ್ಯಂತರ ಭಕ್ತರು ಅಪಪ್ರಚಾರದಿಂದ ಕಣ್ಣೀರು ಹಾಕ್ತಿದ್ದಾರೆ. ಅಪಪ್ರಚಾರದ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು.
ಇನ್ನು ಆರ್. ಅಶೋಕ್ ಮಾತನಾಡಿ, ಮಧ್ಯಂತರ ವರದಿ ಕೊಡಲು ಸರ್ಕಾರ ಹಿಂದೇಟು ಹಾಕಿದೆ. ಇದು ಸರ್ಕಾರದ ವಿಫಲತೆ, ಗುಪ್ತಚರ ಇಲಾಖೆ ವೈಫಲ್ಯ ಎಂದಿದ್ದಾರೆ. ಯಾರೋ ದಾರಿಲಿ ಹೋಗುವನು ಹೇಳಿದ ತಕ್ಷಣ ತನಿಖೆಗೆ ಕೊಟ್ರು ಕಾಂಗ್ರೆಸ್ ನವರಿಗೆ ಧರ್ಮದ ಪರ ಮಾತನಾಡುವ ನೈತಿಕತೆ ಇಲ್ಲ ಅಂತ ವಾಗ್ದಾಳಿ ನಡೆಸಿದ್ರು.
ವೀರೇಂದ್ರ ಹೆಗ್ಗಡೆ ಭೇಟಿಯಾಗಿ ಮಾತುಕತೆ
ಧರ್ಮಸ್ಥಳ ವಿರುದ್ಧದ ಅಪಪ್ರಚಾರದ ವಿರುದ್ಧ ಸಿಡಿದೆದ್ದ ಬಿಜೆಪಿ ನಾಯಕರು ಧರ್ಮಸ್ಥಳಕ್ಕೆ ತೆರಳಿ ಬಿಜೆಪಿ ಸಮಾವೇಶ ನಡೆಸ್ತು. ಅದಕ್ಕೂ ಮುನ್ನ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಭೇಟಿಯಾಗಿ ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಸಿದ್ರು. ಬಳಿಕ ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಸಮಾವೇಶ ನಡೀತು. ಧರ್ಮಸ್ಥಳ ದೇವಸ್ಥಾನದ ಹೊರವಲಯದಲ್ಲಿರುವ ಮೈದಾನದಲ್ಲಿ ಸಮಾವೇಶ ನಡೆದಿದ್ದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಭಾಗಿಯಾಗಿದ್ರು. ಈ ವೇಳೆ ಅಪಪ್ರಾಚಾರಕರ ವಿರುದ್ಧ ವಾಗ್ದಾಳಿ ನಡೆಸಿದ್ರು.
ಬಿಜೆಪಿ-ಜೆಡಿಎಸ್ `ಧರ್ಮ’ ಯುದ್ಧಕ್ಕೆ `ಕೈ’ ಕೌಂಟರ್ ಯಾತ್ರೆ..?
ಇನ್ನೂ ಧರ್ಮಸ್ಥಳ ವಿರುದ್ಧ ಬಿಜೆಪಿ-ಜೆಡಿಎಸ್ `ಧರ್ಮ’ ಯುದ್ಧಕ್ಕೆ ಕಾಂಗ್ರೆಸ್ ಕೌಂಟರ್ ಯಾತ್ರೆ ನಡೆಸೋಕೆ ಪ್ಲ್ಯಾನ್ ಮಾಡಿಕೊಂಡಿದೆ. ಧರ್ಮಸ್ಥಳದಲ್ಲಿನ ಬೆಳವಣಿಗೆಯನ್ನು ವಿಪಕ್ಷಗಳು ರಾಜಕೀಯವಾಗಿ ಅಸ್ತ್ರ ಮಾಡಿಕೊಂಡಿರುವ ಬಗ್ಗೆ ಚರ್ಚೆ ನಡೆಯುತ್ತಿದ್ದು ಬಿಜೆಪಿ-ಜೆಡಿಎಸ್‌ಗೆ ಕೌಂಟರ್ ಕೊಡಲು ಕಾಂಗ್ರೆಸ್ ಶಾಸಕರು ಡಿಮ್ಯಾಂಡ್ ಮಾಡ್ತಿದ್ದಾರೆ. ಹೀಗಾಗಿ ವಿಪಕ್ಷಗಳ ರಾಜಕೀಯ ಯುದ್ಧಕ್ಕೆ ಕಾಂಗ್ರೆಸ್ ಪ್ರತಿತಂತ್ರ ಹೂಡುತ್ತಾ? ಅನ್ನೋ ಮಾತುಗಳು ಕೇಳಿಬರುತ್ತಿವೆ. ಒಂದ್ವೇಳೆ ವಿಪಕ್ಷಗಳ ವಿರುದ್ಧ ಸಮರ ಸಾರಿದ್ದೇ ಆದ್ರೆ ಕೌಂಟರ್ ಯಾತ್ರೆಯೋ? ಧರ್ಮಸ್ಥಳಕ್ಕೆ ನಿಯೋಗ ಭೇಟಿಯೋ? ಅನ್ನೋದನ್ನು ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
`ಕೈ’ ಶಾಸಕರು, ನಾಯಕರ ಒತ್ತಾಯ ಏನು?
* ಧರ್ಮಸ್ಥಳ ಕೇಸ್‌ನಲ್ಲಿ ಬಿಜೆಪಿ-ಜೆಡಿಎಸ್‌ನಿಂದ ಪೊಲಿಟಿಕಲ್ ಮೈಲೇಜ್
* ವಿಪಕ್ಷಗಳು ಕಾಂಗ್ರೆಸ್ ಪಕ್ಷವನ್ನು ವಿಲನ್ ರೀತಿ ಬಿಂಬಿಸುತ್ತಿವೆ
* ಹೀಗೆ ಆದ್ರೆ ಭಕ್ತರ ಕಣ್ಣಲ್ಲಿ ಕಾಂಗ್ರೆಸ್ ಮೇಲೆ ತಪ್ಪು ಭಾವನೆ ಮೂಡುತ್ತೆ
* ಬಿಜೆಪಿ-ಜೆಡಿಎಸ್ ಯಾತ್ರೆಗೆ ಕಾಂಗ್ರೆಸ್‌ನಿಂದಲೂ ಕೌಂಟರ್ ಯಾತ್ರೆ
* ಯಾತ್ರೆಗೂ ಮುನ್ನವೇ ಎಸ್‌ಐಟಿ ವರದಿ ಕೊಟ್ಟು ಕೇಸ್ ಅಂತ್ಯ ಮಾಡ್ಬೇಕು
* ಕಾಂಗ್ರೆಸ್‌ನಿಂದಲೂ ಧರ್ಮಸ್ಥಳ ಚಲೋ ಅಥವಾ ಕ್ಷೇತ್ರ ದರ್ಶನ ಆಗ್ಬೇಕು
* ಧರ್ಮಸ್ಥಳ ಕೇಸ್‌ನಲ್ಲಿ ವಿಪಕ್ಷಗಳ ಪ್ಲ್ಯಾನ್ ವಿಫಲ ಮಾಡುವುದು.