– ಸಿದ್ದರಾಮಯ್ಯ ದೆಹಲಿ ಗುಲಾಮರಲ್ಲದಿದ್ರೆ ಪುನಾರಚನೆ ಮಾಡಲಿ: ಸಿ.ಟಿ ರವಿ
ಬೆಂಗಳೂರು: ಕಾಂಗ್ರೆಸ್ ಪಾಳಯದಲ್ಲಿ ಪುನಾರಚನೆ, ಅಧಿಕಾರ ಹಸ್ತಾಂತರ ಗೊಂದಲ ವಿಚಾರ ಬಿಜೆಪಿ ನಾಯಕರ (BJP Leaders) ಟೀಕೆಗೆ ಗುರಿಯಾಗಿದೆ.
ಬೆಂಗಳೂರಿನಲ್ಲಿ ಮಾತಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (CT Ravi), ಪೇಮೆಂಟ್ ಸೀಟ್ ಯಾವುದು, ಮೆರಿಟ್ ಸೀಟ್ ಯಾವುದು ಅಂತ ಇನ್ನೂ ತೀರ್ಮಾನ ಆಗಿಲ್ಲ ಅಂತ ಕಾಣಿಸುತ್ತೆ. ಹಾಗಾಗಿ ಪುನಾರಚನೆಗೆ ಸ್ವಲ್ಪ ಸಮಸ್ಯೆ ಆಗಿರಬಹುದು ಅಂತ ಕಾಲೆಳೆದರು. ಇದನ್ನೂ ಓದಿ: ದೆಹಲಿ ಕಾರು ಸ್ಫೋಟ ಸ್ಥಳದಲ್ಲಿ 68 ಅನುಮಾನಾಸ್ಪದ ಮೊಬೈಲ್ ಫೋನ್ ಸಕ್ರಿಯ – ಪಾಕ್, ಟರ್ಕಿಯಿಂದ ಕರೆ
ಪುನಾರಚನೆ ಮಾಡಲು ಸಿದ್ದರಾಮಯ್ಯ (Siddaramaiah) ಬಳಿ ಸ್ವಂತ ಅಧಿಕಾರ ಇದೆ. 4 ತಿಂಗಳ ಹಿಂದೆ ಹೈಕಮಾಂಡ್ ನವ್ರೇ ಪುನಾರಚನೆ ಮಾಡಿ ಅಂದಿದ್ರಲ್ಲ, ಯಾಕಿನ್ನು ಮಾಡ್ತಿಲ್ಲ ಸಿಎಂ? ಅದರರ್ಥ ಏನು, ಇನ್ನೂ ಏನೂ ಸೆಟಲ್ ಆಗಿಲ್ವಾ? ಪೇಮೆಂಟ್ ಸೀಟ್ ಯಾವುದು, ಮೆರಿಟ್ ಸೀಟ್ ಯಾವುದು ಅಂತ ಇನ್ನೂ ತೀರ್ಮಾನ ಆಗಿಲ್ಲ ಅಂತ ಕಾಣತ್ತೆ. ಹಾಗಾಗಿ ಸ್ವಲ್ಪ ಸಮಸ್ಯೆ ಆಗಿರಬಹುದು ಅಂತ ಸಿ.ಟಿ ರವಿ ಟೀಕಿಸಿದರು. ಇದನ್ನೂ ಓದಿ: ಕಾರವಾರ | ಗ್ಯಾಸ್ ಟ್ಯಾಂಕರ್ ಪಲ್ಟಿ; ಅಂಕೋಲಾ–ಯಲ್ಲಾಪುರ ಹೆದ್ದಾರಿ ಸಂಚಾರ ಬಂದ್!
ಸಿದ್ದರಾಮಯ್ಯ ಮೋಸ್ಟ್ ಪವರ್ ಫುಲ್ ಅಂತ ನಾನು ಅನ್ಕೊಂಡಿದ್ದೆ. ದೆಹಲಿ ಗುಲಾಮರಲ್ಲ ನಾವು ಅಂತ ಸಿದ್ದರಾಮಯ್ಯ ಯಾವಾಗಲೂ ಹೇಳೋರು. ಸಿದ್ದರಾಮಯ್ಯ ಸಮರ್ಥರಿದ್ದರೆ, ದೆಹಲಿ ಗುಲಾಮಗಿರಿ ಒಪ್ಕೊಳ್ಳದೇ ಇದ್ರೆ ಸಂಪುಟ ಪುನಾರಚನೆಗೆ ದೆಹಲಿಗೆ ಹೋಗುವ ಅಗತ್ಯ ಏನಿತ್ತು? ಪುನಾರಚನೆ ಸಿಎಂ ಪರಮಾಧಿಕಾರ, ದೆಹಲಿಗೆ ಹೋಗುವ ಅಗತ್ಯ ಇರಲಿಲ್ಲ. ರಾಜ್ಯದ ಜನ ಅಧಿಕಾರ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಹೇಗೂ ದೆಹಲಿ ಗುಲಾಮರಲ್ಲ. ದೆಹಲಿ ಗುಲಾಮರು ಅಲ್ಲದಿದ್ರೆ ಪುನಾರಚನೆ ಮಾಡಬಹುದಲ್ಲ ಅಂತ ಪ್ರಶ್ನಿಸುವ ಮೂಲಕ ಲೇವಡಿ ಮಾಡಿದರು.
ಇದೇ ವೇಳೆ ಸಂಸದ ಬಸವರಾಜ ಬೊಮ್ಮಾಯಿ ಸಹ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆ ಇದೆ, ರೈತರ ಸಮಸ್ಯೆಗಳಿವೆ. ಇವರು ಬದಲಾವಣೆ, ಪುನಾರಚನೆ ಅಂತ ಮುಳುಗಿದ್ದಾರೆ. ಇದನ್ನೆಲ್ಲ ಬಿಟ್ಟು ರಾಜ್ಯದ ಸಮಸ್ಯೆ, ರೈತರ ಸಮಸ್ಯೆ ಬಗ್ಗೆ ಸರ್ಕಾರ ಗಮನ ಹರಿಸಲಿ ಅಂತ ಬೊಮ್ಮಾಯಿ ಕಿಡಿ ಕಾರಿದರು. ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯೋವರೆಗೆ SIR ಪ್ರಕ್ರಿಯೆ ಮುಂದೂಡಲು ಸುಪ್ರೀಂಗೆ ಕೇರಳ ಸರ್ಕಾರ ಮನವಿ

