ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬರುತ್ತಲೇ ತಾವು ನೀಡಿದ್ದ 5 ಗ್ಯಾರಂಟಿಗಳನ್ನು (Guarantee) ಅನುಷ್ಠಾನಗೊಳಿಸುವಲ್ಲಿ ನಿರತವಾಗಿದೆ. ಆದರೆ ಇದರ ಬೆನ್ನಲ್ಲೇ ಮದ್ಯ ಹಾಗೂ ವಿದ್ಯುತ್ ದರದಲ್ಲಿ ಏರಿಕೆಯಾಗುವಂತಹ ಮಾತುಗಳು ಕೇಳಿಬಂದಿರುವ ಹಿನ್ನಲೆ ಇದೀಗ ಬಿಜೆಪಿ (BJP) ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದೆ.
ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ಬಿಜೆಪಿ ಟ್ವೀಟ್ ಮಾಡಿ ಬೆಲೆ ಏರಿಕೆ (Price rise) ಪಟ್ಟಿ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಇವೆಲ್ಲದರ ಬೆಲೆ ಹೆಚ್ಚಾಗಲಿದ್ದು, ಕಾಂಗ್ರೆಸ್‌ನ ಗ್ಯಾರಂಟಿಗಳ ಸೈಡ್ ಎಫೆಕ್ಟ್ ಎಂದು ಕಾಲೆಳೆದಿದೆ.
Advertisement
ರಾಜ್ಯದಲ್ಲಿ #ATMSarkara ದಿಂದ ವರದಿ ಬಿಡುಗಡೆ!
????ಇಂದಿನ ಬೆಲೆ ಏರಿಕೆ
????ನೀರು – ವಿದ್ಯುತ್ ದರ ಏರಿಕೆ ಬೆನ್ನಲ್ಲೇ ನೀರಿನ ದರ ಹೆಚ್ಚಳ.
????ಮದ್ಯ – 10 ರಿಂದ 20 ರೂಪಾಯಿ ಏರಿಕೆ.
????ಮುಂದಿನ ಬೆಲೆ ಏರಿಕೆ
????ಹಾಲು – ಪ್ರತೀ ಲೀಟರ್‍ಗೆ 5 ರೂ. ಏರಿಕೆ (ಗ್ಯಾರಂಟಿ)
???? ಬಿಎಂಟಿಸಿ – ಶೇ.18 ರಿಂದ 20 ರಷ್ಟು ಏರಿಕೆ (ಖಚಿತ)
???? ಕೆಎಸ್‌ಆರ್…
— BJP Karnataka (@BJP4Karnataka) June 9, 2023
Advertisement
ಬಿಜೆಪಿ ಟ್ವೀಟ್‌ನಲ್ಲೇನಿದೆ?
ರಾಜ್ಯದಲ್ಲಿ ಎಟಿಎಂ ಸರ್ಕಾರದಿಂದ ವರದಿ ಬಿಡುಗಡೆಯಾಗಿದೆ. ಅದರಲ್ಲಿ ಇಂದಿನ ಬೆಲೆ ಏರಿಕೆಗಳೆಂದರೆ, ನೀರು- ವಿದ್ಯುತ್ ದರ ಏರಿಕೆ ಬೆನ್ನಲ್ಲೇ ನೀರಿನ ದರ ಹೆಚ್ಚಳ. ಮದ್ಯ – 10 ರಿಂದ 20 ರೂ. ಏರಿಕೆ.
Advertisement
ಮುಂದಿನ ಬೆಲೆ ಏರಿಕೆಗಳೆಂದರೆ, ಹಾಲು – ಪ್ರತಿ ಲೀಟರ್‌ಗೆ 5 ರೂ. ಏರಿಕೆ (ಗ್ಯಾರಂಟಿ). ಬಿಎಂಟಿಸಿ – 18% ರಿಂದ 20% ರಷ್ಟು ಏರಿಕೆ (ಖಚಿತ). ಕೆಎಸ್‌ಆರ್‌ಟಿಸಿ – ಸಾಮಾನ್ಯ ಬಸ್ ಕನಿಷ್ಠ 15% ಏರಿಕೆ (ನಿಶ್ಚಿತ). ಪೆಟ್ರೋಲ್/ಡೀಸೆಲ್ – ರಾಜ್ಯದ ತೆರಿಗೆ 5% ರಷ್ಟು ಹೆಚ್ಚಳ (ಖಂಡಿತ) ಎಂದು ಟೀಕಿಸಿದೆ. ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ಬರೆದಿರೋ ಪಠ್ಯ ತೆಗೆಯುತ್ತೇವೆ: ಪ್ರಿಯಾಂಕ್ ಖರ್ಗೆ
Advertisement
ಕರ್ನಾಟಕ ಚುನಾವಣೆಯಲ್ಲಿ ಸೋತ ಬಿಜೆಪಿ, ಕಾಂಗ್ರೆಸ್ ತನ್ನ ಗ್ಯಾರಂಟಿಗಳ ಭರವಸೆಯಿಂದಲೇ ಅಧಿಕಾರಕ್ಕೆ ಬಂದಿದೆ. ಗ್ಯಾರಂಟಿಗಳ ಹೊರೆಯನ್ನು ಸಮತೋಲನ ಮಾಡೋ ಪ್ರಯತ್ನದಲ್ಲಿ ಬೆಲೆ ಏರಿಕೆಗಳನ್ನು ಮಾಡುತ್ತದೆ. ಇದು ಕಾಂಗ್ರೆಸ್ ಗ್ಯಾರಂಟಿಗಳ ಸೈಡ್ ಎಫೆಕ್ಟ್ ಎಂದು ಕಿಡಿಕಾರಿದೆ. ಇದನ್ನೂ ಓದಿ: ಸಿದ್ದು ಪ್ರಮಾಣವಚನ ವೇಳೆ ವೇದಿಕೆಯಲ್ಲಿ ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿ – ತನಿಖೆಗೆ ರಾಜ್ಯಪಾಲರ ಪತ್ರ